ವಿಜಯ್ ಮಲ್ಯ ಹಸ್ತಾಂತರ ವಿರುದ್ಧದ ಮೇಲ್ಮನವಿಗೆ ಕೋರ್ಟ್ ಒಪ್ಪಿಗೆ

ಲಂಡನ್, ಜುಲೈ 2: ಭಾರತಕ್ಕೆ ಹಸ್ತಾಂತರ ಮಾಡುವ ಸಂಬಂಧ ಕೆಳ ಹಂತದ ಕೋರ್ಟ್ ನೀಡಿದ್ದ ತೀರ್ಪಿಗೆ ಮೇಲ್ಮನವಿ ಸಲ್ಲಿಸುವುದಕ್ಕೆ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಲಂಡನ್ ನ ಕೋರ್ಟ್ ಮಾನ್ಯ ಮಾಡಿದೆ. 63 ವರ್ಷದ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಯುನೈಟೆಡ್ ಕಿಂಗ್ ಡಮ್ ನ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಸಹಿ ಹಾಕಿದ್ದರು.

ಅದರ ವಿರುದ್ಧ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು. ವಿಜಯ್ ಮಲ್ಯ ಮೇಲೆ 9000 ಕೋಟಿ ರುಪಾಯಿಯ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಇದೆ. ರಾಯಲ್ ಕೋರ್ಟ್ಸ್ ನ ಆಡಳಿತಾತ್ಮಕ ನ್ಯಾಯಾಲಯ ವಿಭಾಗದ ಇಬ್ಬರು ನ್ಯಾಯಮೂರ್ತಿಗಳ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಅಂದ ಹಾಗೆ ಅರ್ಜಿಯನ್ನು ಏಪ್ರಿಲ್ ನಲ್ಲಿ ಸಲ್ಲಿಸಲಾಗಿತ್ತು.

ಇದೀಗ ಪ್ರಕರಣವು ಪೂರ್ಣ ಪ್ರಮಾಣದ ವಿಚಾರಣೆ ಹಂತಕ್ಕೆ ಯು.ಕೆ. ಹೈ ಕೋರ್ಟ್ ಗೆ ಹೋಗಲಿದೆ. ಕಳೆದ ವರ್ಷ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ವಿಚಾರಣೆ ನಡೆಸಿ, ಮೇಲ್ನೋಟಕ್ಕೆ ವಿಜಯ್ ಮಲ್ಯ ತಪ್ಪಿತಸ್ಥರು ಎಂದು ಗೊತ್ತಾಗುತ್ತದೆ. ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಬೆಕು ಎಂದು ಹೇಳಿತ್ತು.

Liquor baron Vijay Mallya allowed to appeal against extradition by UK court

ಭಾರತದಲ್ಲಿ ಜೈಲಿನ ಪರಿಸ್ಥಿತಿ ಚೆನ್ನಾಗಿರುವುದಿಲ್ಲ ಎಂಬ ನೆಲೆಗಟ್ಟಿನ ಮೇಲೆ ಸಲ್ಲಿಸಿದ್ದ ಆಕ್ಷೇಪವನ್ನು ಕೂಡ ಕೋರ್ಟ್ ತಿರಸ್ಕರಿಸಿತ್ತು. ಮುಂಬೈನ ಆರ್ಥರ್ ರಸ್ತೆಯಲ್ಲಿ ಇರುವ ಜೈಲಿನಲ್ಲಿ ಎಲ್ಲ ರೀತಿಯ ಅಗತ್ಯ ವೈದ್ಯಕೀಯ ಸೌಲಭ್ಯ ಇದೆ ಎಂದು ಭಾರತ ಸರಕಾರ ಹೇಳಿತ್ತು.

9000 ಕೋಟಿ ರುಪಾಯಿಯ ಸಾಲ ಪಾವತಿ ಮಾಡಬೇಕಿದ್ದ ವಿಜಯ್ ಮಲ್ಯ, ಮೂರು ವರ್ಷದ ದೇಶ ಬಿಟ್ಟು ಲಂಡನ್ ಗೆ ಓಡಿಹೋದರು. ಜಾರಿನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕಳೆದ ವರ್ಷ ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿತು. ಹನ್ನೆರಡು ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಮಲ್ಯ ಆಸ್ತಿಯನ್ನು ವಶಕ್ಕೆ ಪಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+