ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಕೋವಿಡ್‌ನ ಹೊಸ ತಳಿಯಿಂದ ಹೆಚ್ಚಿದ ಆತಂಕ

|
Google Oneindia Kannada News

ಲಂಡನ್, ಡಿಸೆಂಬರ್ 15: ಬ್ರಿಟನ್‌ನಲ್ಲಿ ಕೊರೊನಾ ವೈರಸ್ ವಿರುದ್ಧದ ಲಸಿಕೆ ಕಾರ್ಯಕ್ರಮ ಈಗಾಗಲೇ ಆರಂಭವಾಗಿದೆ. ಅದರ ಜತೆಗೆ ಕೋವಿಡ್ ನಿಯಂತ್ರಣಕ್ಕಾಗಿ ಮೂರನೇ ಹಂತದ ನಿರ್ಬಂಧಗಳು ಬುಧವಾರದಿಂದ ಆರಂಭವಾಗುತ್ತಿವೆ. ಈ ನಡುವೆ ಬ್ರಿಟನ್‌ನಲ್ಲಿ ಹೊಸ ಕೋವಿಡ್ ತಳಿ ವೇಗವಾಗಿ ಹರಡುತ್ತಿದ್ದು ಆತಂಕ ಮೂಡಿಸಿದೆ. ಈ ಬಗ್ಗೆ ಸೂಕ್ತ ತನಿಖೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಆದೇಶಿಸಿದೆ.

ಗ್ರೇಟರ್ ಲಂಡನ್, ಕೆಂಟ್ ಮತ್ತು ಎಸೆಕ್ಸ್‌ಗಳಲ್ಲಿ ಹೊಸ ಮಾದರಿಯ ನಾವಲ್ ಕೊರೊನಾ ವೈರಸ್ ಕಾರಣದಿಂದ ಕೋವಿಡ್ 19 ಪ್ರಕರಣಗಳ ಸಂಖ್ಯೆ ಭಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಎಂದು ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹಂಕಾಕ್ ತಿಳಿಸಿದ್ದಾರೆ.

ರಷ್ಯಾದ ಕೋವಿಡ್ ಲಸಿಕೆ 'ಸ್ಪುಟ್ನಿಕ್ ವಿ' ಶೇ. 91.4ರಷ್ಟು ಪರಿಣಾಮಕಾರಿ!ರಷ್ಯಾದ ಕೋವಿಡ್ ಲಸಿಕೆ 'ಸ್ಪುಟ್ನಿಕ್ ವಿ' ಶೇ. 91.4ರಷ್ಟು ಪರಿಣಾಮಕಾರಿ!

ಹೊಸ ತಳಿಯ ಕೊರೊನಾ ವೈರಸ್‌ಗಳು ಕೆಲವು ಪ್ರದೇಶಗಳಲ್ಲಿ ಪ್ರತಿ ಏಳು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುವಷ್ಟರ ಮಟ್ಟಿಗೆ ವೇಗವಾಗಿ ಹರಡುತ್ತಿವೆ. ಇದನ್ನು ತಡೆಯಲು ಕಠಿಣ ಮತ್ತು ನಿರ್ಣಾಯಕ ಕ್ರಮ ತುರ್ತು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

 Britain Witnesses Newer, Faster Strain Of The Noval Coronavirus

'ದಕ್ಷಿಣ ಇಂಗ್ಲೆಂಡ್‌ನಲ್ಲಿ ನಾವು ಈ ವಿಭಿನ್ನ ಮಾದರಿಯ ವೈರಸ್‌ ಒಳಗೊಂಡ ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಪ್ರಸ್ತುತ ಗುರುತಿಸಿದ್ದೇವೆ. ಸುಮಾರು 60 ವಿಭಿನ್ನ ಸ್ಥಳೀಯ ಅಧಿಕಾರ ಪ್ರದೇಶಗಳಲ್ಲಿ ಈ ರೀತಿಯ ಪ್ರಕರಣಗಳು ಕಂಡುಬಂದಿವೆ' ಎಂದು ಹಂಕಾಕ್ ಅವರು ಸಾಮಾನ್ಯರ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಸಿಗುವುದಿಲ್ಲ ಫೈಜರ್ ಲಸಿಕೆ: ಕಾರಣವೇನು?ಭಾರತದಲ್ಲಿ ಸಿಗುವುದಿಲ್ಲ ಫೈಜರ್ ಲಸಿಕೆ: ಕಾರಣವೇನು?

ಇಂಗ್ಲೆಂಡ್‌ನಲ್ಲಿ ಕೊರೊನಾ ವೈರಸ್‌ನ ಹೊಸ ಹಾಗೂ ವಿಭಿನ್ನ ಮಾದರಿಯ ಸೋಂಕು ಹರಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಹೆಚ್ಚಿನ ಆದ್ಯತೆಯೊಂದಿಗೆ ಪರಿಶೀಲಿಸಲಾಗುತ್ತಿದೆ. ಇದುವರೆಗೆ ನಾವು ಕಂಡಿರುವಂತೆ ವೈರಸ್ ಕಾಲಕ್ರಮೇಣ ಬದಲಾಗುತ್ತಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ತುರ್ತು ಪರಿಸ್ಥಿತಿ ವಿಭಾಗದ ಪರಿಣತ ಮೈಕ್ ರಿಯಾನ್ ಹೇಳಿದ್ದಾರೆ.

ವೈರಸ್‌ನ ಹೊಸ ಮಾದರಿಯು ಲಸಿಕೆಗೆ ಸ್ಪಂದಿಸುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಬ್ರಿಟಿಷ್ ಅಧಿಕಾರಿಗಳು ಅಥವಾ ಡಬ್ಲ್ಯೂಎಚ್‌ಒ ಸ್ಪಷ್ಟಪಡಿಸಿಲ್ಲ.

ಬುಧವಾರದಿಂದ ಮೂರನೇ ಹಂತದ ನಿರ್ಬಂಧಗಳು ಜಾರಿಯಾಗುತ್ತಿದ್ದು, ಬುಧವಾರದಿಂದ ಒಳಾಂಗಣ ಚಟುವಟಿಕೆಗಳಲ್ಲಿ ಜನರು ಗುಂಪು ಸೇರುವಂತಿಲ್ಲ. ಜತೆಗೆ ಬಾರ್‌ಗಳು, ಪಬ್‌ಗಳು, ರೆಸ್ಟೋರೆಂಟ್ ಹಾಗೂ ಇತರೆ ತಿನಿಸಿನ ಮಳಿಗೆಗಳಲ್ಲಿ ಮನೆಗೆ ಪಾರ್ಸೆಲ್ ಕೊಂಡೊಯ್ಯಲು ಮಾತ್ರ ಅವಕಾಶ ನೀಡಲಾಗುತ್ತಿದೆ.

English summary
London decided to impose strict lokcdown from Wednesday as a new and faster strain of novel coronavirus causes spike in Covid-19 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X