ಕೊಪ್ಪಳದಲ್ಲಿ ಮಧುಚಂದ್ರದ ರಾತ್ರಿಯೇ ಮದುಮಗಳ ಅಪಹರಣ
ಗಂಗಾವತಿ, ಅಕ್ಟೋಬರ್ 11: ತಾಳಿಕಟ್ಟಿಸಿಕೊಂಡಾಗಿದೆ, ಗಂಡನೊಂದಿಗೆ ಸಪ್ತಪದಿ ತುಳಿದಾಗಿದೆ ಮದುವೆಯಾಗಿ ಹದಿನೈದು ದಿನಗಳ ಬಳಿಕ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು, ಆದರೆ ಅದೇ ದಿನ ವಧು ನಾಪತ್ತೆಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಮುಂದಿನ ಜೀವನದ ಬಗ್ಗೆ ನವ ಜೋಡಿಗಳು ಕಟ್ಟಿಕೊಂಡಿದ್ದ ಸಾವಿರಾರು ಕನಸುಗಳು ಭಗ್ನವಾಗಿವೆ, ಗುಡೂರು ಗ್ರಾಮದ ಗಾಯಿತ್ರಿ ಹಾಗೂ ಮಲ್ಲನಗೌಡ ಕುಷ್ಟಗಿ ತಾಲೂಕಿನ ಪುರದ ಸೋಮನಾಥ ದೇವಸ್ಥಾನದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಿದ್ದರು. 15 ದಿನಗಳ ಬಳಿಕ ಯುವತಿ ತವರು ಮನೆ ಗುಡೂರಿನಲ್ಲಿ ಮೊದಲ ರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆದರೆ ಅಂದೇ ಯುವತಿಯನ್ನು ಆರು ಜನ ಸೇರಿ ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 24ರಂದು ಮದುವೆ ನಡೆದಿತ್ತು.

ಅಪಹರಣಕಾರರ ವಿರುದ್ಧ ಕಾರಟಗಿ ಠಾಣೆಯಲ್ಲಿ ದೂರು ನೀಡಿದ್ದರೂ ಅವರು ವಿಚಾರಣೆ ನಡೆಸುತ್ತಿಲ್ಲ ಎಂದು ಮಲ್ಲನಗೌಡ ಆರೋಪಿಸಿದ್ದಾರೆ. ಅಪಹರಣಕ್ಕೆ ಕುಟುಂಬದ ವೈಶಮ್ಯ ಕಾರಣವಾ ಅಥವಾ ಇನ್ಯಾವ ಕಾರಣ ಇದೆ ಎಂದು ತಿಳಿದುಬಂದಿಲ್ಲ, ವಧು ಶೌಚಾಲಯಕ್ಕೆ ಹೋದಾಗ ಆಕೆಯನ್ನು ಅಪಹರಿಸಲಾಗಿದೆ.












Click it and Unblock the Notifications