ಸಾವಿನಲ್ಲೂ ಒಂದಾದ ಕೊಪ್ಪಳದ ದಂಪತಿ

Posted By:
Subscribe to Oneindia Kannada

ಕೊಪ್ಪಳ, ನವೆಂಬರ್ 18 : ಗಂಡ-ಹೆಂಡತಿಯ ಪ್ರೀತಿನೇ ಹಾಗೇ. ಇವರಲ್ಲಿ ಒಬ್ಬರಿಗೆ ಏನಾದರೂ ಆದರೆ ಒಂದು ಹೃದಯ ಮಿಡಿಯುತ್ತದೆ. ಅಂತಹದ್ದೇ ಒಂದು ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಯನಗರದಲ್ಲಿ ಶನಿವಾರ ನಡೆದಿದೆ.

ಸಾವಿನಲ್ಲೂ ಒಂದಾದ ಮೈಸೂರಿನ ತಂದೆ- ಮಗ

ಹಲವು ವರ್ಷಗಳ ಕಾಲ ಕಷ್ಟ ಸುಖಗಳ ಮಧ್ಯೆ ಜತೆ-ಜತೆಯಾಗಿ ಸಂಸಾರವೆಂಬ ಬಂಡಿ ಸಾಗಿಸುತ್ತಿದ್ದ ದಂಪತಿ ಜತೆಯಾಗಿಯೇ ಇಹಲೋಕ ತ್ಯಜಿಸಿದ್ದಾರೆ. ಜಯನಗರದ ನಿವಾಸಿ ದುರ್ಗಪ್ಪ ನಾಯಕ(65) ಇಂದು ಬೆಳಿಗ್ಗೆ (ಶನಿವಾರ) ನಿಧನರಾಗಿದ್ದು, ಅವರ ಸಾವಿನ ಸುದ್ದಿ ತಿಳಿದ ಪತ್ನಿ ಹುಲಿಗೆಮ್ಮ(55) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Husband dies after hearing news of wife death in Koppal district

ಪತಿ ತೀರಿಕೊಂಡ ಬಳಿಕ ಅವರ ಅಂತಿಮ ಕಾರ್ಯದಲ್ಲಿ ಭಾಗವಹಿಸಿದ್ದ ಪತ್ನಿ ಶನಿವಾರ 8 ಗಂಟೆ ಸುಮಾರಿಗೆ ದುಃಖದಿಂದ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Death of husband (Durugappa) heard the news of wife died of a heart attack in Jayanagar, Gangavati taluk Koppal district on November 18.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ