• search
  • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಮತ ಹಾಕದ ಅಹಿಂದಾ ಮತದಾರರನ್ನು ಗುರುತಿಸಿ ಡಿಲೀಟ್‌ ಮಾಡಿದ್ದಾರೆ: ಸಿದ್ದರಾಮಯ್ಯ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ನವೆಂಬರ್ 20: ಬಿಜೆಪಿ ತಮಗೆ ಯಾರು ಮತ ಹಾಕುವುದಿಲ್ಲವೋ ಅಂಥವರನ್ನು ಗುರುತಿಸಿ ಮತದಾರ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೊಪ್ಪಳದ ವನಬಳ್ಳಾರಿ ಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಗೆ ಮತ ಹಾಕದವರನ್ನು ಟಾರ್ಗೆಟ್‌ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಮಾಡಲಾಗುತ್ತಿದೆ. ಈ ಮೂಲಕ ಸಂವಿಧಾನ ನೀಡಿರುವ ಮತದಾರನ ಮತದಾನದ ಹಕ್ಕನ್ನು ಕಳ್ಳತನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ; ಜಲ ಜೀವನ್ ಮಿಷನ್ ಯೋಜನೆಯ ಯಶೋಗಾಥೆ ಕೊಪ್ಪಳ; ಜಲ ಜೀವನ್ ಮಿಷನ್ ಯೋಜನೆಯ ಯಶೋಗಾಥೆ

ಚಿಲುಮೆ ಎಂಬ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಜವಾಬ್ದಾರಿ ನೀಡಿದ್ದಾರೆ. ಆ ಸಂಸ್ಥೆಯ ಮೂಲಕ ಅಲ್ಪಸಂಖ್ಯಾತರು, ಅಹಿಂದ ವರ್ಗದ ವೋಟ್ ಡಿಲೀಟ್ ಮಾಡಿದ್ದಾರೆ. ಇದರ ಬಗ್ಗೆ ನ್ಯಾಯಾಂಗ ತನಿಖೆ ಮಾಡಲು ಒತ್ತಾಯ ಮಾಡುತ್ತೇವೆ ಎಂದರು.

ಬಿಜೆಪಿಯವರಿಗೆ ಈಗಲೇ ಚುನಾವಣೆಯಲ್ಲಿ ಸೋಲುವ ಭೀತಿ ಶುರುವಾಗಿದೆ. ಅದಕ್ಕಾಗಿ ಮತದಾರರನ್ನು ವಂಚಿಸುವ ಕೆಲಸ ಮಾಡುತ್ತಿದೆ. ಇದೆಲ್ಲಾ ಅವರ ಚುನಾವಣಾ ತಂತ್ರದ ಭಾಗವಾಗಿದೆ. ಪರಿಶಿಷ್ಟರು ಹಾಗೂ ಮುಸ್ಸಿಂ ಸಮುದಾಯ ಸೇರಿದಂತೆ ಅಹಿಂದ ವರ್ಗವನ್ನು ಗುರಿಯಾಗಿಸಿಕೊಂಡು ಬಿಜೆಪಿ ಈ ಕೆಲಸ ಮಾಡಿಸಿದೆ. ಇದೆಲ್ಲವನ್ನೂ ಉದ್ದೇಶಪೂರ್ವಕವಾಗಿ ಮಾಡಿಸಲಾಗಿದೆ. ಬೆಂಗಳೂರು ನಗರದ ಉಸ್ತುವಾರಿ ವಹಿಸಿಕೊಂಡಿರುವ ಮುಖ್ಯಮಂತ್ರಿಗಳೇ ಇದಕ್ಕೆಲ್ಲಾ ಉತ್ತರ ಕೊಡಬೇಕು ಎಂದರು.

ಬಳ್ಳಾರಿ ಸಮಾವೇಶದಲ್ಲಿ ಸಚಿವ ಶ್ರೀರಾಮುಲು ಭಾಷಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶ್ರೀರಾಮುಲು ಒಬ್ಬ ಪೆದ್ದ, ಬಾಯಿಗೆ ಬಂದಂತೆ ಮಾತನಾಡುತ್ತಾನೆ ಎಂದು ಹೇಳಿದರು.

ಹೆಲಿಕಾಪ್ಟರ್ ಮೂಲಕ ಬಂದ ಸಿದ್ದು

ವಿವಾಹ ಕಾರ್ಯಕ್ರಮಕ್ಕೆ ಪಾಳ್ಗೊಳ್ಳಲು ಕೊಪ್ಪಳದ ವನಬಳ್ಳಾರಿ ಗ್ರಾಮಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಈ ವೇಳೆ ಸಿದ್ದರಾಮಯ್ಯರನ್ನು ನೋಡಲು ನೂರಾರು ಸಾರ್ವಜನಿಕರು ಮುಗಿಬಿದ್ದರು. ನಿಗಧಿತ ಸಮಯಕ್ಕಿಂತ ತಡವಾಗಿ ಬಂದರೂ ನೂರಾರು ಜನ ಅವರನ್ನು ನೋಡುವುದಕ್ಕಾಗಿ ಎಲಿಪ್ಯಾಡ್‌ಗೆ ಆಗಮಿಸಿದ್ದರು.

BJP targeted Ahinda Voters, alleges Siddaramaiah

ಸಿದ್ದರಾಮಯ್ಯ ಇಳಿಯುತ್ತಿದ್ದಂತೆ ನೆರದಿದ್ದ ಸಿದ್ದರಾಮಯ್ಯ ಅಭಿಮಾನಿಗಳು ಏಕಾಏಕಿ ಹೆಲಿಪ್ಯಾಡ್‌ಗೆ ನುಗ್ಗಿದರು. ಈ ಅನಿರೀಕ್ಷಿತ ಘಟನೆಯಿಂದ ಗೊಂದಲಕ್ಕೊಳಗಾಗದ ಪೊಲೀಸರು ನೂಕು ನುಗ್ಗಲು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಬೆಕಾಯಿತು. ಆದರೂ ಕೆಲವರೂ ಸಿದ್ದರಾಮಯ್ಯರತ್ತ ಮುನ್ನುಗ್ಗಿದರು. ಕೊನೆಗೆ ಕಾರನ್ನೇ ಸಿದ್ದರಾಮಯ್ಯ ಇದ್ದ ಬಳಿಕ ತೆಗೆದುಕೊಂಡು ಹೋಗಲಾಯಿತು. ಸಿದ್ದರಾಮಯ್ಯ ಜನರತ್ತ ಕೈಬೀಸಿ ಕಾರ್ಯಕ್ರಮಕ್ಕೆ ತೆರಳಿದರು.

English summary
BJP government has targeted Ahinda voters and deleted the names of a large number of people from minority, SC, and other communities who vote against the BJP, Opposition leader Siddaramaramaiah said in Koppal on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X