86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ: ಗೋಡೆಗಳ ಮೇಲೆ ಚಿತ್ತಾರಗಳ ಹಬ್ಬ
ಹಾವೇರಿ, ಡಿಸೆಂಬರ್ 30: ಹಾವೇರಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಒಂದು ವರ್ಷದ ಹಿಂದೆಯೇ ನಡೆಯಬೇಕಾಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, 2023 ಜನವರಿ 6,7,8 ರಂದು ನಡೆಸಲು ರಾಜ್ಯ ಸರ್ಕಾರ ತಿರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಏಲಕ್ಕಿ ಕಂಪಿನ ನಗರಿ ಹಾವೇರಿ ಜಿಲ್ಲೆ ಈಗ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇವೆ. ಈ ಹಿನ್ನಲೆಯಲ್ಲಿ ಹಾವೇರಿಯನ್ನ ಮತ್ತಷ್ಟು ಸುಂದರಗೊಳಿಸುತ್ತಿದ್ದಾರೆ. ಗೋಡೆಯ ಮೇಲೆ ಸುಂದರವಾಗಿ ಜಾನಪದ ಕಲೆಯ ಚಿತ್ರಗಳನ್ನು ಬರೆಯಲಾಗಿದ್ದು, ಎಲ್ಲರನ್ನೂ ಆಕರ್ಷಿಸುತ್ತಿದೆ.
ನಗರದ ವಿವಿಧ ಭಾಗದಲ್ಲಿ 20ಕ್ಕೂ ಅಧಿಕ ಕಲಾವಿದರು ತಂಡ ಹಗಲು ರಾತ್ರಿ ಎನ್ನದೇ ಗೋಡೆಬರಹ, ಚಿತ್ರಗಳನ್ನು ಬಿಡಿಸುವ ಕಾರ್ಯಕ್ಕೆ ಮುಂದಾಗಿದೆ. ನಗರದ ಮುಖ್ಯ ರಸ್ತೆಯಲ್ಲಿ ಬರುವ ಸರ್ಕಾರಿ ಕಚೇರಿಯ ಕಟ್ಟಡದ ಗೋಡೆಗಳಿಗೆ ಬಣ್ಣವನ್ನು ಹಾಕುವ ಮೂಲಕ ಜಾನಪದ ಕಲೆಯ ಸಮ್ಮೇಳನಕ್ಮೆ ಸ್ವಾಗತ ಮಾಡುತ್ತಿದ್ದಾರೆ. ಗೋಡೆಯ ಮೇಲೆ ನಮ್ಮ ಹಿರಿಯ ಜಾನಪದ ಕಲೆಯನ್ನ ಸಾರುವ ವರ್ಣಿ ಕಲೆಯ ಚಿತ್ರಿಸಲಾಗುತ್ತಿದೆ.

ಇನ್ನು ಗೋಡೆಯ ಮೇಲೆ ಹಾವೇರಿ ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆಜೋಳ, ಹತ್ತಿ, ಮೆಕ್ಕೆಜೋಳ, ಜೋಳ ಸೇರಿದಂತೆ ವಿವಿಧ ಬೆಳೆಗಳ ಚಿತ್ರಗಳು ದಾರ್ಶನಿಕ ಭಾವಚಿತ್ರಗಳನ್ನ ಕಲಾವಿದರು ಕುಂಚದಿಂದ ಅರಳಿಸುತ್ತಿದ್ದಾರೆ. ನಮ್ಮ ಹಾವೇರಿ ಜಿಲ್ಲೆಯ ಮೊದಲ ಭಾರಿಗೆ ಸಮ್ಮೇಳನ ನಡೆಯುತ್ತಿದೆ. ಇನ್ನು ಸಾಹಿತಿಗಳನ್ನು ಮತ್ತು ಕನ್ನಡಾಭಿಮಾನಿಗಳನ್ನು ಕಲೆ ಮೂಲಕ ಸ್ವಾಗತ ಮಾಡುತ್ತಿರುವುದು ನಮಗೆ ಹೆಮ್ಮೆ ಎಂದು ಸ್ಥಳೀಯರು ಹೇಳಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇವೆ. ಹೀಗಾಗಿ ಮುಖ್ಯ ವೇದಿಕೆಯ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಜಾನಪದ ಶೈಲಿಯ ಎಲ್ಲಾ ಚಿತ್ರಗಳನ್ನು ಗೋಡೆಗಳ ಮೇಲೆ ಹಾಕಲಾಗುತ್ತಿದೆ. ಕಲಾವಿದರು ಪ್ರಮುಖ ಕನ್ನಡದ ಪ್ರಮುಖ ಸಾಹಿತಿಗಳಾದ ಕುವೆಂಪು, ದರಾ ಬೇಂದ್ರೆ, ಶಿವರಾಮ್ ಕಾರಂತರು ಹೀಗೆ ಹತ್ತು ಹಲವು ಸಾಹಿತಿಗಳ ಭಾವಚಿತ್ರಗಳನ್ನು ಕುಂಚದಿಂದ ಅರಳಿಸುತ್ತಿದ್ದಾರೆ. ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕನ್ನಡದ ಭಾಷೆಯ ಜಾಗೃತಿಯ ಜೊತೆಗೆ ವರ್ಣಿ ಕಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸಹ ಆಗುತ್ತಿದೆ. ಇಂತಹ ಕಲೆಯನ್ನು ನಾವು ಚಿಕ್ಕವರಿದ್ದಾಗ ನೋಡಿದ್ದೇವೆ, ಈಗ ಮತ್ತೆ ಈ ರೀತಿ ಜಿಲ್ಲೆಯನ್ನು ನೋಡುತ್ತಿರಿವುದು ಖುಷಿ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ. 20 ಕ್ಕೂ ಅಧಿಕ ಕಲಾವಿದರ ಕುಂಚದಿಂದ ಹಾವೇರಿಯಲ್ಲಿ ಗೋಡೆ ಹಾಗೂ ವರ್ಣಿ ಕಲೆಗಳು ಅದ್ಭುತವಾಗಿ ಮೂಡಿದೆ. ಇನ್ನು ಕಲಾವಿದರು ತಮ್ಮ ಕಲೆಯ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರು ಕನ್ನಡ ಚಿತ್ರ ನೋಡಿ ಸಂತೋಷ ಪಡುವದರಲ್ಲಿ ಅನುಮಾನವೇ ಇಲ್ಲ.












Click it and Unblock the Notifications