ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ

ಕೋಲ್ಕತಾ, ಮೇ 27: ನಟಿ, ರೂಪದರ್ಶಿ ಪಲ್ಲವಿ ಡೇ ಆತ್ಮಹತ್ಯೆ ಪ್ರಕರಣ ಕಣ್ಮುಂದೆ ಇರುವಾಗಲೇ ಮತ್ತೊಬ್ಬ ಬೆಂಗಾಳಿ ರೂಪದರ್ಶಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. 21 ವರ್ಷ ವಯಸ್ಸಿನ ಉದಯೋನ್ಮುಖ ರೂಪದರ್ಶಿ ಬಿದಿಶಾ ಡೆ ಮಜುಂದಾರ್ ತಮ್ಮ ಅಪಾರ್ಟ್ಮೆಂಟ್‌ನಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಲ್ಕತ್ತಾದ ಡುಮ್‌ಡಮ್ ಪ್ರದೇಶದಲ್ಲಿ 21 ವರ್ಷದ ಮಾಡೆಲ್ ತನ್ನ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ನಾಗರ್ ಬಜಾರ್‌ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ್ದ ಮಾಡೆಲ್ ಬಿದಿಶಾ ಹೊರಗಡೆ ಕಾಣಿಸಿಕೊಳ್ಳದೆ ಸುಮಾರು ಸಮಯವಾಗಿದ್ದರಿಂದ ಅನುಮಾನದಿಂದ ನೆರೆಹೊರೆಯವರು ಬಾಗಿಲು ಒಡೆದ ಪ್ರವೇಶಿಸಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಬಿದಿಶಾ ಡಿ ಮಜುಂದಾರ್ ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಗರ್ ಬಜಾರ್ ಪೊಲೀಸರು ಈಗಾಗಲೇ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಪಿಟಿಐ ವರದಿ ಪ್ರಕಾರ, ಮೃತದೇಹದ ಬಳಿ ಆತ್ಮಹತ್ಯೆ ಪತ್ರ ಪತ್ತೆಯಾಗಿದ್ದು, ಅದರಲ್ಲಿ ವೃತ್ತಿ ಅವಕಾಶಗಳ ಕೊರತೆಯಿಂದಾಗಿ ಮಾನಸಿಕವಾಗಿ ಹಿಂಸೆ ಅನುಭವಿಸಿ ಖಿನ್ನತೆಗೆ ಒಳಗಾಗಿರುವುದಾಗಿ ಬರೆದುಕೊಂಡಿರುವುದು ಪತ್ತೆಯಾಗಿದೆ.

Young model Bidisha De Majumder found dead in Dumdum area

"ಕೈಬರಹ ತಜ್ಞರು ಪತ್ರವನ್ನು ಪರಿಶೀಲಿಸುತ್ತಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್‌ಜಿ ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಉತ್ತರ ಉಪನಗರದಲ್ಲಿರುವ ನೈಹಾಟಿಯಿಂದ ಬಂದವರು ಮತ್ತು ವಧುವಿನ ಮೇಕಪ್ ಫೋಟೋ ಶೂಟ್‌ಗಳಲ್ಲಿ ಜನಪ್ರಿಯ ಮುಖವಾಗಿದ್ದರು,'' ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಡೆಲಿಂಗ್ ಕ್ಷೇತ್ರದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ''ಯಾಕೆ ಹೀಗೆ ಮಾಡಿದೆ, ನಿನ್ನೆಯಷ್ಟೇ ಫೇಸ್‌ಬುಕ್ ಡಿಪಿ, ಕವರ್ ಪಿಕ್, ಇನ್‌ಸ್ಟಾಗ್ರಾಮ್ ಡಿಪಿ ಬದಲಾಯಿಸಿದ್ದೀನಿ, ಧಾರಾವಾಹಿ ನಟಿ ಪಲ್ಲವಿ ಡೇ ಆತ್ಮಹತ್ಯೆ ಮಾಡಿಕೊಂಡ ನಂತರ ಇಂತಹ ಆತುರದ ಹೆಜ್ಜೆ ಇಡಬಾರದಿತ್ತು ಎಂದು ಪೋಸ್ಟ್ ಹಾಕಿದ್ದೆ, ಇವತ್ತು ನೀನು ಅದೇ ಹಾದಿ ತುಳಿದೆ'' ಎಂದು ಮಾಡೆಲ್ ಸಂತು ಮೊಂಡಲ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

Young model Bidisha De Majumder found dead in Dumdum area

ಮಾಡೆಲಿಂಗ್ ಉದ್ಯಮದಲ್ಲಿ ಖ್ಯಾತಿ ಗಳಿಸಿದ್ದ ಬಿದಿಶಾ ಡಿ ಮಜುಂದಾರ್ ಅವರು 2021 ರಲ್ಲಿ ಅನಿರ್ಬೇದ್ ಚಟ್ಟೋಪಾಧ್ಯಾಯ ನಿರ್ದೇಶಿಸಿದ ಭಾರ್-ದಿ ಕ್ಲೌನ್ ಚಿತ್ರದಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಪ್ರಸಿದ್ಧ ನಟ ದೇಬ್ರಾಜ್ ಮುಖರ್ಜಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Young model Bidisha De Majumder found dead in Dumdum area

ಬೆಂಗಾಳಿ ನಟಿ ಪಲ್ಲವಿ ಡೇ ಮೇ 15ರಂದು ಕೋಲ್ಕತ್ತಾದ ಗರ್ಫಾ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿತ್ತು. ಆದರೆ, ಈಗ ಆಕೆ ಲಿನ್- ಇನ್ ಸಂಗಾತಿ ಸಾಗ್ನಿಕ್ ಚಕ್ರವರ್ತಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+