• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಚುನಾವಣಾ ಅಭ್ಯರ್ಥಿಗೆ ಒದ್ದ ವಿಪಕ್ಷದ ಕಾರ್ಯಕರ್ತರು

|

ಕೊಲ್ಕತ್ತಾ, ನವೆಂಬರ್ 25: ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷರ ಮೇಲೆ ಟಿಎಂಸಿ ಪಕ್ಷದ ಕಾರ್ಯರ್ತರು ಹಲ್ಲೆ ಮಾಡಿ, ಒದ್ದು, ಚರಂಡಿಗೆ ತಳ್ಳಿರುವ ಘಟನೆ ನಡೆದಿದೆ.

ಕರೀಂಪುರದ ಉಪಚುನಾವಣೆ ಇಂದು ನಡೆದಿತ್ತು. ಕರೀಂಪುರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯೂ ಆಗಿರುವ ಪ್ರಕಾಶ್ ಮಜೂಂದಾರ್ ಅವರು ಚುನಾವಣಾ ಬೂತ್ ಒಂದರ ಒಳಕ್ಕೆ ಹೋಗುವ ಪ್ರಯತ್ನ ಮಾಡಿದಾಗ ಟಿಎಂಸಿ ಕಾರ್ಯಕರ್ತರು ಅವರ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ..

ಟಿಎಂಸಿ ಕಾರ್ಯಕರ್ತರು ಪ್ರಕಾಶ್ ಮಜೂಂದಾರ್ ಅನ್ನು ಎಳೆದೊಯ್ಯದು ಥಳಿಸಿ, ಕಾಲಿನಿಂದ ಒದ್ದು ಚರಂಡಿ ನೂಕಿದ್ದಾರೆ. ಕೂಡಲೇ ಅಲ್ಲೇ ಇದ್ದ ಭದ್ರತಾ ಪಡೆ ಪ್ರಕಾಶ್ ಅವರನ್ನು ರಕ್ಷಿಸಿ, ಗುಂಪನ್ನು ಚದುರಿಸಿದೆ. ಈ ಎಲ್ಲ ಘಟನೆಗಳು ವಿಡಿಯೋದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಬಗ್ಗೆ ಮಾತನಾಡಿರುವ ಪ್ರಕಾಶ್ ಮಜೂಂದಾರ್, 'ನಾನು ಇಂದು ಬೆಳಿಗ್ಗೆ ಬೂತ್ ನಂಬರ್ 43 ಕ್ಕೆ ಇಬ್ಬರು ಏಜೆಂಟ್‌ಗಳನ್ನು ಕರೆತಂದು ಇಳಿಸಿ ಇನ್ನೇನು ನನ್ನ ವಾಹನದಲ್ಲಿ ಹೊರಡಬೇಕು ಎನ್ನುವಷ್ಟರಲ್ಲಿ ಟಿಎಂಸಿ ಕಾರ್ಯಕರ್ತರು ಬಂದು ನನ್ನ ಮೇಲೆ ಹಲ್ಲೆ ನಡೆಸಿದರು' ಎಂದು ಹೇಳಿದ್ದಾರೆ.

'ನನ್ನನ್ನು ಎಳೆದಾಡಲಾಯಿತು, ನನ್ನನ್ನು ಥಳಿಸಿ, ಕಾಲಿನಿಂದ ಒದೆಯಲಾಯಿತು. ಇಷ್ಟೆಲ್ಲಾ ಆದರೂ ಸ್ಥಳೀಯ ಪೊಲೀಸರು ನನ್ನ ರಕ್ಷಣೆಗೆ ಬರಲಿಲ್ಲ, ಟಿಎಂಸಿ ಕಾರ್ಯಕರ್ತರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಹೇಳಿದರು.

ಆದರೆ ಪ್ರಕಾಶ್ ಅವರ ಆರೋಪವನ್ನು ತಳ್ಳಿ ಹಾಕಿರುವ ಟಿಎಂಸಿ, ಮತದಾನ ಶಾಂತಿಯುತವಾಗಿ ನಡೆದಿತ್ತು, ಆದರೆ ಅಲ್ಲಿನ ವಾತಾವರಣವನ್ನು ಕೆಡಿಸಲು ಯತ್ನಿಸಿದ ಪ್ರಕಾಶ್ ಮೇಲೆ ಸ್ಥಳೀಯರೇ ಹಲ್ಲೆ ಮಾಡಿದ್ದಾರೆ' ಎಂದಿದೆ. ಘಟನೆ ಬಗ್ಗೆ ಚುನಾವಣಾಧಿಕಾರಿ ವರದಿ ಕೇಳಿದ್ದಾರೆ.

ಖರಕ್‌ಪುರ ಸದರ್, ಖಾಲಿಗಂಜ್ ಮತ್ತು ಕರೀಂಪುರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಎರಡು ಕ್ಷೇತ್ರಗಳು ಟಿಎಂಸಿ ಬಾಹುಳ್ಯ ಹೊಂದಿದ್ದರೆ ಒಂದರಲ್ಲಿ ಕಾಂಗ್ರೆಸ್ ಬಾಹುಳ್ಯ ಹೊಂದಿದೆ.

English summary
West Bengal BJP state vice president, by-election candidate Praksh Majumbhar onslaught by TMC workers today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X