ಈ ರಾಶಿಯವರಿಗೆ ಮಾತೇ ಮುಳ್ಳಾಗಬಹುದು!ತಾಳ್ಮೆಯಿಂದ ಇದ್ದರೆ ಮಾತ್ರ ಯಶಸ್ಸು

Horoscope April 25: ಶುಕ್ರವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶುಕ್ರವಾರ ರಾಹುಕಾಲವು ಸಾಮಾನ್ಯವಾಗಿ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇರುತ್ತದೆ. ಏಪ್ರಿಲ್ 25 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ಕೆಲಸಗಳ ಜೊತೆಗೆ ವೈಯಕ್ತಿಕ ವಿಷಯಗಳತ್ತ ಗಮನ ಹರಿಸಬೇಕು. ಎಲ್ಲಾ ಜವಾಬ್ದಾರಿಗಳನ್ನು ಒಬ್ಬರೇ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮ ಹಠವೇ ನಿಮಗೆ ಮುಳ್ಳಾಗಬಹುದು.

Horoscope April 25

ವೃಷಭ ರಾಶಿ:

ಹಿರಿಯ ಅಧಿಕಾರಿಯೊಂದಿಗೆ ವಾದಕ್ಕಿಳಿದು ಹತಾಶೆ ಅನುಭವಿಸುವ ಸಾಧ್ಯತೆ ಇದೆ. ತಾಳ್ಮೆಯಿಂದ ಇರುವುದಕ್ಕೆ ಪ್ರಯತ್ನಿಸಿ. ಕುಟುಂಬ ಸದಸ್ಯರೊಂದಿಗೆ ಕೂಡಾ ಮನಸ್ತಾಪ ಮೂಡಬಹುದು.

ಮಿಥುನ ರಾಶಿ:

ಅನಗತ್ಯವಾಗಿ ಯಾರ ಜೊತೆಯೂ ವಾದಕ್ಕೆ ಇಳಿಯಬೇಡಿ. ವ್ಯವಹಾರದಲ್ಲಿ ಹೊಸ ಬದಲಾವಣೆಗಳನ್ನು ತರಬಹುದು. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಸುತ್ತಲಿನ ಜನರು ಮತ್ತು ಪರಿಸರದ ಬಗ್ಗೆ ಜಾಗರೂಕರಾಗಿರಿ.

ಕರ್ಕಾಟಕ ರಾಶಿ:

ಕೆಲಸ ಮಾಡುವ ಸ್ಥಳದಲ್ಲಿ ಗಮನಾರ್ಹ ಬದಲಾವಣೆಗಳಾಗಬಹುದು. ಯಾರೊಂದಿಗೂ ಜಗಳವಾಡಲು ಹೋಗಬೇಡಿ. ಹಣಕಾಸಿನ ವಿಷಯಗಳಲ್ಲಿ ಯಾರ ಮೇಲೂ ಹೆಚ್ಚು ಅವಲಂಬಿತರಾಗಬೇಡಿ. ಆತುರದ ನಿರ್ಧಾರ ಬೇಡ.

ಸಿಂಹ ರಾಶಿ:

ಸ್ವಲ್ಪ ಸಮಯ ಒಂಟಿಯಾಗಿ ಕಳೆಯುವುದು ಒಳ್ಳೆಯದು. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಕಷ್ಟಕರ ಸಂದರ್ಭಗಳಲ್ಲಿಯೂ ಸಹ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಿ. ತಾಳ್ಮೆಯಿಂದ ಇದ್ದರೆ ನಿಮ್ಮ ಕೆಲಸ ಸರಾಗವಾಗಿ ನಡೆಯುವುದು.

ಕನ್ಯಾ ರಾಶಿ:

ಬೇರೆಯವರ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸಬೇಡಿ. ನಿಮ್ಮ ಕೆಲಸದ ಮೇಲಷ್ಟೇ ಗಮನ ಹರಿಸಿದರೆ ಸಾಕು. ಹಿಂದೆ ವಿಫಲವಾದ ಹಳೆಯ ಕೆಲಸವನ್ನು ಮತ್ತೆ ಪ್ರಾರಂಭಿಸಬಹುದು. ದೇವರ ಮೇಲಿನ ನಿಮ್ಮ ನಂಬಿಕೆ ಹೆಚ್ಚಾಗಬಹುದು.

ತುಲಾ ರಾಶಿ:

ಸಂಬಂಧಗಳು ಸುಧಾರಿಸುತ್ತವೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವುದು. ಕೆಲಸದಲ್ಲಿ ಬದಲಾವಣೆ ಮಾಡುವ ಯೋಚನೆ ಇದ್ದರೆ ಸದ್ಯಕ್ಕೆ ಕೈ ಬಿಡಿ.

ವೃಶ್ಚಿಕ ರಾಶಿ:

ವೃತ್ತಿಪರ ಕ್ಷೇತ್ರದಲ್ಲಿ ಹೊಸ ಮತ್ತು ಉತ್ತಮ ಅವಕಾಶಗಳು ಒಲಿದು ಬರುವುದು. ನಿಮ್ಮ ಮಾತಿನ ಮೂಲಕ ಯಾರಿಗೂ ನೋವು ಮಾಡಬೇಡಿ. ಆಸ್ತಿಗೆ ಸಂಬಂಧಿಸಿದ ವಿವಾದ ಹುಟ್ಟಿಕೊಳ್ಳಬಹುದು.

ಧನು ರಾಶಿ:

ಬಾಕಿ ಇರುವ ಕೆಲಸಗಳು ಒಂದೊಂದಾಗಿಯೇ ಪೂರ್ಣವಾಗುವುದು. ಯಾರ ಮೇಲೂ ದ್ವೇಷ ಸಾಧಿಸಲು ಹೋಗಬೇಡಿ. ಪೂರ್ವಜರ ಆಸ್ತಿಯ ವಿಭಜನೆಯ ಪರಿಸ್ಥಿತಿ ಎದುರಾಗಬಹುದು. ನಿಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಿ.

ಮಕರ ರಾಶಿ:

ಹೊಸ ಉದ್ಯೋಗದ ಹುಡುಕಾಟವು ಯಶಸ್ವಿಯಾಗಬಹುದು. ಹೊಸ ಆಸ್ತಿಯನ್ನು ಖರೀದಿಸುವ ಪ್ರಯತ್ನಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ನಿಮ್ಮ ಕಾರ್ಯಗಳನ್ನು ಸಾಧಿಸಲು ನಿಮ್ಮ ಗುರಿಗಳ ಮೇಲೆ ಸಂಪೂರ್ಣವಾಗಿ ಗಮನಹರಿಸಿ.

ಕುಂಭ ರಾಶಿ:

ಆರ್ಥಿಕ ಸಮಸ್ಯೆಗಳು ಬಗೆಹರಿಯಬಹುದು. ಕೋಪದ ಮೇಲೆ ನಿಯಂತ್ರಣ ಇರಲಿ. ವೈಯಕ್ತಿಕ ವಿಷಯಗಳಲ್ಲಿ ಅಪರಿಚಿತರಿಂದ ಸಲಹೆ ಪಡೆಯಲು ಹೋಗಬೇಡಿ.ಮಾತನಾಡುವಾಗ ಯೋಚಿಸಿ ಪದಗಳನ್ನು ಬಳಸಿ.

ಮೀನ ರಾಶಿ:

ಯಾವುದೇ ಪ್ರಮುಖ ಹೂಡಿಕೆಗಳನ್ನು ಮಾಡುವ ಮೊದಲು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಲು ಮರೆಯದಿರಿ.ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಶುಭ ಸುದ್ದಿ ಸಿಗುವುದು.ಕುಟುಂಬ ವಿಷಯಗಳಲ್ಲಿ ಹೊರಗಿನವರಿಂದ ಸಲಹೆ ಪಡೆಯಬೇಡಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+