ಪ.ಬಂಗಾಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಂಸಾಚಾರದ ಆರೋಪ: ಬಿಜೆಪಿ ಬಂದ್‌ಗೆ ಕರೆ
ಕೋಲ್ಕತ್ತಾ, ಫೆಬ್ರವರಿ 28: ಪಶ್ಚಿಮ ಬಂಗಾಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಂಸಾಚಾರವನ್ನು ವಿರೋಧಿಸಿ ಬಿಜೆಪಿ ಇಂದು (ಫೆಬ್ರವರಿ 28) 12 ಗಂಟೆಗಳ ಬಂದ್‌ಗೆ ಕರೆ ನೀಡಿದೆ. ರಾಜ್ಯಾದ್ಯಂತ 108 ಪುರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗೂಂಡಾಗಳಿಂದ ವಿರೋಧ ಪಕ್ಷದ ಸದಸ್ಯರ ಮೇಲೆ ರಿಗ್ಗಿಂಗ್ ಮತ್ತು ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ಸೋಮವಾರ ಪಶ್ಚಿಮ ಬಂಗಾಳದಲ್ಲಿ 12 ಗಂಟೆಗಳ ಬಂದ್‌ಗೆ ಕರೆ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಫೆ.27 ಭಾನುವಾರ ಮತದಾನ ಆರಂಭವಾದ ಮೊದಲ ಮೂರು ಗಂಟೆಗಳಲ್ಲಿ ವ್ಯಾಪಕ ಹಿಂಸಾಚಾರ ವರದಿ ಆಗಿದೆ. ಚುನಾವಣೆ ನಡೆಯುತ್ತಿರುವ 108 ಪುರಸಭೆಗಳ ಪೈಕಿ 107 ಪುರಸಭೆಗಳಲ್ಲಿ ಶೇ 16ರಷ್ಟು ಮತದಾನವಾಗಿದೆ. ಕೂಚ್ ಬೆಹಾರ್ ಜಿಲ್ಲೆಯ ದಿನ್ಹತಾ ಪುರಸಭೆಗೆ ಚುನಾವಣೆ ನಡೆಯುತ್ತಿಲ್ಲ. ಇಲ್ಲಿ ಟಿಎಂಸಿ ಎಲ್ಲಾ 16 ವಾರ್ಡ್‌ಗಳನ್ನು ಅವಿರೋಧವಾಗಿ ಗೆದ್ದಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾದಾಗಿನಿಂದ ಪ್ರತಿಪಕ್ಷಗಳ ಅಭ್ಯರ್ಥಿಗಳನ್ನು ಥಳಿಸಿರುವ ವರದಿಗಳು, ಸುಳ್ಳು ಮತದಾನ, ಬೂತ್ ಅಕ್ರಮ ಮತ್ತು ಇತರ ಚುನಾವಣಾ ಅವ್ಯವಹಾರಗಳ ಆರೋಪಗಳು ಕೇಳಿಬಂದಿದೆ.
ಭಾತ್ಪಾರಾದಲ್ಲಿ ಬಿಜೆಪಿ ಅಭ್ಯರ್ಥಿಯ ಪತಿ ಮೇಲೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ನಾಶಪಡಿಸಿದ ಆರೋಪವಿದೆ. ಬ್ಯಾರಕ್‌ಪೋರ್‌ನಲ್ಲಿ ಟಿಎಂಸಿ ಕಾರ್ಯಕರ್ತರು ಒಬ್ಬ ಸ್ವತಂತ್ರ ಅಭ್ಯರ್ಥಿ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಆರಂಬಾಗ್‌ನಲ್ಲಿ ಸಿಪಿಎಂ ಅಭ್ಯರ್ಥಿಗಳ ಮೇಲೆ ಟಿಎಂಸಿ ದಾಳಿ ನಡೆಸಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಹಲವು ವಿರೋಧ ಪಕ್ಷದ ಅಭ್ಯರ್ಥಿಗಳು ಥಳಿಸಿದ್ದಾರೆ. ಡಮ್ ಡಮ್ ಮತ್ತು ಪೂರ್ವ ಮಿಡ್ನಾಪುರ ಜಿಲ್ಲೆಯ ಕೊಂಟೈನಲ್ಲಿ ಮಾಧ್ಯಮದವರಿಗೂ ಟಿಎಂಸಿ ಕಾರ್ಯಕರ್ತರು ಥಳಿಸಿದ್ದಾರೆ.
West Bengal | BJP workers protesting on the railway track at Hooghly railway station.
— ANI (@ANI) February 28, 2022
The party called a 12-hour statewide bandh against alleged rigging and violence in the state's civic polls pic.twitter.com/8tXdlR7e9c
ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಎಲ್ಲವನ್ನೂ ಸ್ಥಗಿತಗೊಳಿಸಲಾಗುತ್ತದೆ. ಈ ವೇಳೆ ಆರೋಗ್ಯ, ಹಾಲು ಸರಬರಾಜು ಮತ್ತು ಮಾಧ್ಯಮದಂತಹ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗುತ್ತದೆ ಎಂದರು.

ನಡೆದಿರುವುದು ಮತದಾನವಲ್ಲ ಬದಲಿಗೆ ಪ್ರಜಾಪ್ರಭುತ್ವದ ಅಣಕ. ದಕ್ಷಿಣ ಮತ್ತು ಉತ್ತರ ಬಂಗಾಳದ ಬಹುತೇಕ ಪುರಸಭೆಗಳಲ್ಲಿ ಆಡಳಿತ ಪಕ್ಷದ ಕಿಡಿಗೇಡಿಗಳಿಂದ ಚುನಾವಣೆಗಳು ದಾಳಿಗೆ ಮುಂದಾಗಿವೆ ಎಂದು ಆರೋಪಿಸಿದ್ದಾರೆ. ಈ ವೇಳೆ ನಮ್ಮ ಹಲವಾರು ಏಜೆಂಟರು ಮತ್ತು ಅಭ್ಯರ್ಥಿಗಳನ್ನು ಥಳಿಸಲಾಗಿದೆ. ಇಷ್ಟೆಲ್ಲಾ ಆದರೂ ರಾಜ್ಯ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ ಎಂದು ಭಟ್ಟಾಚಾರ್ಯ ದೂರಿದರು. ಮತದಾರರು ಮತ್ತು ಪತ್ರಕರ್ತರನ್ನು ಸಹ ಒರಟಾಗಿ ನಿಂದಿಸಲಾಗಿದೆ ಎಂದು ಅವರು ಕಿಡಿ ಕಾರಿದರು. ಹೀಗಾಗಿ ಸೋಮವಾರ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಬಂದ್ ಆಚರಿಸುವಂತೆ ಜನರನ್ನು ಒತ್ತಾಯಿಸಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ನಮ್ಮ ಸಂಸದರಾದ ಅರ್ಜುನ್ ಸಿಂಗ್, ಸುಕಾಂತ ಮಜುಂದಾರ್ ಮತ್ತು ದಿಲೀಪ್ ಘೋಷ್ ಅವರಿಗೆ ತಿರುಗಾಡಲು ಅವಕಾಶ ನೀಡಲಿಲ್ಲ. ಸಂಪೂರ್ಣ ಕಾನೂನುಬಾಹಿರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಬಲವಂತವಾಗಿ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ. ಇಂದು ಬೆಳಗ್ಗೆ ಹೂಗ್ಲಿ ರೈಲು ನಿಲ್ದಾಣದ ರೈಲ್ವೆ ಹಳಿ ಮೇಲೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಳೆದ ರಾತ್ರಿ ಮಿಡ್ನಾಪುರ ಪುರಸಭೆಯ ವಾರ್ಡ್ ನಂ.8 ರ ಬೂತ್ ಸಂಖ್ಯೆ 163 ರ ಬಳಿ ಟಿಎಂಸಿ ತಮ್ಮ ಟೆಂಟ್ ಅನ್ನು ಸುಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. "ಟಿಎಂಸಿ ಕಳೆದ ರಾತ್ರಿ ನಮ್ಮ ಬೂತ್ ಅನ್ನು ಸುಟ್ಟು ಹಾಕಿದೆ. ಕ್ರಮ ತೆಗೆದುಕೊಳ್ಳಬೇಕು. ನಾವು ಪೊಲೀಸರಿಗೆ ತಿಳಿಸಿದ್ದೇವೆ ಆದರೆ ಅವರು ಇನ್ನೂ ಬಂದಿಲ್ಲ" ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಹಿಂಸಾಚಾರವನ್ನು ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್, ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುವುದಿಲ್ಲ ಎಂದು ಊಹಿಸಲೂ ಸಾಧ್ಯವಿಲ್ಲ. ಬಂಗಾಳದಲ್ಲಿ ಕಾನೂನಿನ ಆಡಳಿತವಿಲ್ಲ ಎಂದಿದ್ದಾರೆ.












Click it and Unblock the Notifications