ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಘಟಬಂಧನಕ್ಕೆ ಎಚ್ಚರಿಕೆ ಮಾತುಗಳನ್ನು ಹೇಳಿದ ದೇವೇಗೌಡ

|
Google Oneindia Kannada News

ಕೋಲ್ಕತ್ತ, ಜನವರಿ 19: ವಿರೋಧ ಪಕ್ಷಗಳ ಮಹಾ ಸಮಾವೇಶದಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಹಿರಿಯ ಸದಸ್ಯರಾಗಿ ಮಾತನಾಡಿದ ದೇವೇಗೌಡ ಅವರು, ಮಹಾಘಟಬಂಧನಕ್ಕೆ ಹಲವು ಸೂಕ್ತ, ಪ್ರಸ್ತುತ, ಅವ್ಯಕತ ಸಲಹೆಗಳನ್ನು ನೀಡಿದರು.

'ನಾವು ಹೇಗೆ ಜನರ ಮುಂದೆ ಹೋಗುತ್ತೇವೆ, ನಮ್ಮ ಉದ್ದೇಶಗಳು ಏನು, ನಮ್ಮ ಕಾರ್ಯಸೂಚಿ ಏನು? ಸೀಟು ಹಂಚಿಕೆ ಹೇಗಿರಬೇಕು ಎಂಬುದೆಲ್ಲದರ ಬಗ್ಗೆ ನಾವೆಲ್ಲರೂ ಕೂಡಲೇ ಯೋಚನೆ ಮಾಡಬೇಕಿದೆ ಸಮಯ ಬಹಳ ಕಡಿಮೆ ಇದೆ ಎಂದು ದೇವೇಗೌಡ ಅವರು ವಿರೋಧ ಪಕ್ಷಗಳ ಸಮಾವೇಶದಲ್ಲಿ ಒಟ್ಟಾಗಿದ್ದ ನಾಯಕರಿಗೆ ಎಚ್ಚರಿಕೆ ಮಾತು ಹೇಳಿದರು.

ಸಾಮಾಜಿಕ ಜಾಲತಾಣ, ಮಾಧ್ಯಮಗಳು ಶಕ್ತಿಯುತವಾಗಿವೆ. ಮೋದಿ ನಂತರ ಮತ್ಯಾರು ಎಂಬ ಪ್ರಶ್ನೆಗಳನ್ನು ಅವು ಕೇಳುತ್ತವೆ ಹಾಗಾಗಿ ನಾವು ಎಲ್ಲದಕ್ಕೂ ಸಿದ್ಧವಾಗಿರಬೇಕು. ಜನರಲ್ಲಿ ಮೂಡುವ ಅನುಮಾನಗಳನ್ನು ನಾವು ಹೋಗಲಾಡಿಸಬೇಕೆಂದರೆ ನಾವು ಈಗಿನಿಂದಲೇ ತಯಾರಿ ಪ್ರಾರಂಭಿಸಬೇಕು ಎಂದು ಅವರು ಹೇಳಿದರು.

ಕೊಲ್ಕತ್ತದಲ್ಲಿ ಕರ್ನಾಟಕ ಬಿಜೆಪಿಯ ಬೆತ್ತಲಾಗಿಸಿದ ಕುಮಾರಸ್ವಾಮಿ ಕೊಲ್ಕತ್ತದಲ್ಲಿ ಕರ್ನಾಟಕ ಬಿಜೆಪಿಯ ಬೆತ್ತಲಾಗಿಸಿದ ಕುಮಾರಸ್ವಾಮಿ

ವಿರೋಧಪಕ್ಷಗಳ ಸಮಾವೇಶದಲ್ಲಿ ಹಾಜರಿದ್ದ ರಾಜಕೀಯ ನಾಯಕರನ್ನು, 'ನಾಯಕರ ನಕ್ಷತ್ರ ಗುಚ್ಛ' ಎಂದು ಕರೆದ ದೇವೇಗೌಡ ಅವರು, ಎಲ್ಲರೂ ಒಗ್ಗಟ್ಟಿನಿಂದ ಇಲ್ಲಿ ಸೇರಿದ್ದೇವೆ. ಅದೇ ಒಗ್ಗಟ್ಟು ಕಡೆಯವರೆಗೂ ಇರಬೇಕಾಗುತ್ತದೆ. ನಮಗೆ ಕೆಲವು ನೀತಿ. ನಿಯಮಗಳನ್ನು ನಾವು ಹೇರಿಕೊಳ್ಳಬೇಕು, ಅದನ್ನು ರೂಪಿಸಲು ಸಣ್ಣ ಸಮಿತಿಯೊಂದರ ರಚನೆ ಆಗಬೇಕು ಎಂದು ಗೌಡರು ಅನುಭವಕ್ಕೆ ತಕ್ಕಂತೆ ಮಾತನಾಡಿದರು.

ಅಖಿಲೇಶ್-ಮಾಯಾವತಿಗೆ ಹೊಗಳಿಕೆ

ಅಖಿಲೇಶ್-ಮಾಯಾವತಿಗೆ ಹೊಗಳಿಕೆ

ಅಖಿಲೇಶ್ ಯಾದವ್ ಮತ್ತು ಮಯಾವಾತಿ ಅವರು ಉತ್ತರ ಪ್ರದೇಶದಲ್ಲಿ ಮಾಡಿಕೊಂಡ ಸೀಟು ಹಂಚಿಕೆಯನ್ನು ಹೊಗಳಿದ ದೇವೇಗೌಡ ಅವರು, ಹಲವು ರಾಜ್ಯಗಳಲ್ಲಿ ಸೀಟು ಹಂಚಿಕೆ ಬಹುದೊಡ್ಡ ಸಮಸ್ಯೆ ಆಗಲಿದೆ ಅದನ್ನು ಯಶಸ್ವಿಯಾಗಿ ದಾಟಲೇಬೇಕಾದ ಅನಿವಾರ್ಯತೆ ಇದೆ. ದೊಡ್ಡ ಉದ್ದೇಶ ಈಡೇರಿಕೆಗೆ ಕೆಲವೊಮ್ಮೆ ಸಣ್ಣ ಹಿನ್ನಡೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಮಹಾಘಟಬಂಧನ Rally LIVE: ದೇವೇಗೌಡರ ಸ್ವಗುಣಗಾನಕ್ಕೆ ವೇದಿಕೆಯಾದ rally!ಮಹಾಘಟಬಂಧನ Rally LIVE: ದೇವೇಗೌಡರ ಸ್ವಗುಣಗಾನಕ್ಕೆ ವೇದಿಕೆಯಾದ rally!

'ಮೈತ್ರಿ ಸರ್ಕಾರ ಗಟ್ಟಿ ಆಡಳಿತ ನೀಡುತ್ತವೆಂದು ಸಾಬೀತು ಮಾಡೋಣ'

'ಮೈತ್ರಿ ಸರ್ಕಾರ ಗಟ್ಟಿ ಆಡಳಿತ ನೀಡುತ್ತವೆಂದು ಸಾಬೀತು ಮಾಡೋಣ'

ಮೊದಿ ಅವರು 'ಮೈತ್ರಿ ಸರ್ಕಾರಗಳು ಗಟ್ಟಿಯಾದ ಆಡಳಿತ ನೀಡಲಾರವು' ಎಂದು ಹೇಳಿದ್ದಾರೆ ಆದರೆ ಅದನ್ನು ಸುಳ್ಳು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಸಹ 13 ಪಕ್ಷಗಳ ಬೆಂಬಲದೊಂದಿಗೆ, ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ಪ್ರಧಾನಿ ಆಗಿದ್ದೆ ಎಂದ ಅವರು, ತಮ್ಮ ಸಮಯದಲ್ಲಿ ಆದ ಉತ್ತಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಮಹಾಘಟಬಂಧನದ ವಿರಾಟರೂಪ ದರ್ಶನಕ್ಕೆ ದೀದಿ ರೆಡಿ! ಯಾರೆಲ್ಲ ಹಾಜರು?ಮಹಾಘಟಬಂಧನದ ವಿರಾಟರೂಪ ದರ್ಶನಕ್ಕೆ ದೀದಿ ರೆಡಿ! ಯಾರೆಲ್ಲ ಹಾಜರು?

'ಜನರಿಗೆ ಬದಲಾವಣೆ ಬೇಕಿದೆ, ನಾವದನ್ನು ನೀಡಬೇಕು'

'ಜನರಿಗೆ ಬದಲಾವಣೆ ಬೇಕಿದೆ, ನಾವದನ್ನು ನೀಡಬೇಕು'

ಇಲ್ಲಿನ ಜನರನ್ನು ನೋಡಿದರೆ ಬದಲಾವಣೆಗೆ ಜನ ತಯಾರಿದ್ದಾರೆ ಎನಿಸುತ್ತದೆ. ಆದರೆ ನಾವು ಸೂಕ್ತ ತಯಾರಿಯೊಂದಿಗೆ ಅವರ ಮುಂದೆ ಹೋಗಬೇಕು. ನಮಗೆ ಚುನಾವಣಾ ಪ್ರಣಾಳಿಕೆಯೊಂದು ಬೇಕು, ಮೋದಿ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳಬೇಕು ಬಹುದೊಡ್ಡ ಸವಾಲು ನಮ್ಮ ಮುಂದಿದೆ ಆದರೆ ಸಮಯ ಬಹಳ ಕಡಿಮೆ ಇದೆ ಎಂದು ದೇವೇಗೌಡ ಅವರು ಎಲ್ಲ ನಾಯಕರನ್ನು ಎಚ್ಚರಿಸಿದರು.

'ಜಾತ್ಯಾತೀತ ಮೌಲ್ಯ ಎತ್ತಿಹಿಡಿಯಲು ಒಟ್ಟಾಗಿರೋಣ'

'ಜಾತ್ಯಾತೀತ ಮೌಲ್ಯ ಎತ್ತಿಹಿಡಿಯಲು ಒಟ್ಟಾಗಿರೋಣ'

ಪ್ರಾದೇಶಿಕ ಪಕ್ಷಗಳನ್ನು ಒಟ್ಟಾಗಿ ಸೇರಿಸಿದ್ದ ಜಯಪ್ರಕಾಶ್ ನಾರಾಯಣ್, ಆಚಾರ್ಯ ಕ್ರಪಲಾನಿ ಅವರುಗಳು ಈಗ ನಮ್ಮ ಜತೆಗಿಲ್ಲ ಅವರ ಆದರ್ಶವನ್ನು ಪಾಲಿಸುತ್ತಾ ನಾವು ಒಟ್ಟಾಗಿ ನಡೆಯಬೇಕು. ಅಖಿಲೇಶ್ ಅವರು ಸೀಟು ಹಂಚಿಕೆ ಮಾಡಿದ ಮರುದಿನವೇ ಕೇಂದ್ರದ ತನಿಖಾ ಸಂಸ್ಥೆ ಅವರ ಮೇಲೆ ಕೇಸು ದಾಖಲಿಸಿತು ಇಂತಹಾ ಘಟನೆಗಳು ಮುಂದೆ ಇನ್ನೂ ಹೆಚ್ಚಾಗಬಹದು ಎಂದ ಅವರು, ಜಾತ್ಯಾತೀತ ಮೌಲ್ಯವನ್ನು ಎತ್ತಿಹಿಡಿಯಲು ನಾವು ಒಟ್ಟಾಗಿ ಇರಲೇ ಬೇಕು ಎಂದು ಅವರು ಹೇಳಿದರು.

English summary
Deve Gowda said we all have to unite to uphold secular values of this Nation. And also all leaders have to unite and find answers for questions which people and media going to ask about us. and our future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X