ಬಿಜೆಪಿ ಕಚೇರಿಯಲ್ಲಿ ವ್ಯಕ್ತಿಯೊಬ್ಬರ ಕೆನ್ನೆಗೆ ಬಾರಿಸಿ ವಿವಾದ ಸೃಷ್ಟಿಸಿಕೊಂಡ ಸುಪ್ರಿಯೊ

ಕೋಲ್ಕತ್ತಾ, ಮಾರ್ಚ್ 30: ಬಿಜೆಪಿ ಕಚೇರಿಯಲ್ಲಿ ವ್ಯಕ್ತಿಯೊಬ್ಬರ ಕೆನ್ನೆಗೆ ಬಾರಿಸುವ ಮೂಲಕ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ವಿವಾದಕ್ಕೆ ಸಿಲುಕಿದ್ದಾರೆ. ಒಂದೆಡೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯುತ್ತಿದೆ, ಬಾಬುಲ್ ಸುಪ್ರಿಯೋ ಕೂಡ ಸ್ಪರ್ಧಿಯಾಗಿದ್ದಾರೆ ಇಂತಹ ಸಮಯದಲ್ಲಿ ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ವ್ಯಕ್ತಿ ಸಲಹೆ ನೀಡಿದಾಗ ಆತನಿಗೆ ಸುಮ್ಮನೆ ಇರುವಂತೆ ಸುಪ್ರಿಯೊ ತಿಳಿಸಿದ್ದಾರೆ. ಆದರೆ ಆ ವ್ಯಕ್ತಿ ತನ್ನ ಸಲಹೆಯನ್ನು ಪದೇ ಪದೇ ಕೇಂದ್ರ ಸಚಿವರ ಮುಂದಿಟ್ಟಿದ್ದ ಎಂದು ಬಿಜೆಪಿ ತಿಳಿಸಿದೆ.

ಕೋಲ್ಕತ್ತದಲ್ಲಿ ವ್ಯಕ್ತಿಯೋರ್ವನ ಕಪಾಳಕ್ಕೆ ಹೊಡೆದು ಸುಪ್ರಿಯೊ ಸುದ್ದಿಯಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಟಿವಿ ಕ್ಯಾಮರಾಗಳ ಮುಂದೆ ಪೋಸ್ ನೀಡಿ, ಹೇಳಿಕೆಗಳನ್ನು ನೀಡುವ ಬದಲಿಗೆ ಗಂಭೀರವಾದ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪದೇ ಪದೇ ಸೂಚಿಸಿದ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡ ಸುಪ್ರಿಯೊ ಕಪಾಳಕ್ಕೆ ಹೊಡೆದಿದ್ದಾರೆ.

Union Minister Babul Supriyo Creates Controversy After Slapping Man In BJP Office

ಆದರೆ ಇದಕ್ಕೆ ಸಮರ್ಥನೆ ನೀಡಿರುವ ಸುಪ್ರಿಯೊ ತಾವು ಕಪಾಳಕ್ಕೆ ಹೊಡೆದಿಲ್ಲ, ಆದರೆ ಆ ರೀತಿ ಮಾಡಿದೆ ಅಷ್ಟೇ ಎಂದು ಹೇಳಿದ್ದಾರೆ. ಟೋಲಿಗಂಜ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಡೊಲ್ಜಾತ್ರ ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+