1 ತಿಂಗಳಲ್ಲಿ ಟಿಎಂಸಿ-ಬಿಜೆಪಿ-ಟಿಎಂಸಿಗೆ ಸೇರ್ಪಡೆಯಾದ ಪ್ರಚಂಡ ರಾಜಕಾರಣಿಗಳು
Recommended Video
ಕೋಲ್ಕತ್ತಾ, ಜುಲೈ 31: ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ಸಿನ ಸಾಲುಸಾಲು ಶಾಸಕರು, ಕೌನ್ಸಿಲರ್ ಗಳು ಬಿಜೆಪಿಗೆ ಸೇರುತ್ತಿರುವ ಮಧ್ಯೆ, ಬಿಜೆಪಿ ಸೇರಿದ್ದ ಇಬ್ಬರು ಟಿಎಂಸಿ ಕೌನ್ಸಿಲರ್ ಗಳು ತಮ್ಮ ನಿಯತ್ತನ್ನು ಒಂದೇ ತಿಂಗಳಲ್ಲಿ ಬದಲಾಯಿಸಿ, ಮಾತೃಪಕ್ಷಕ್ಕೆ ಮರಳಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹರಿಂಗಘಾಟಾ ಏಳನೇ ವಾರ್ಡಿನ ಸೂಗಿ ಸೊರೇನ್ ಮತ್ತು ಹದಿನೇಳನೇ ವಾರ್ಡಿನ ಸೌಮೇಂದ್ರನಾಥ ಬ್ಯಾನರ್ಜಿ ಕೇವಲ ಒಂದು ತಿಂಗಳ ಹಿಂದೆ, ಬಿಜೆಪಿ ಸೇರಿದ್ದರು. ಆದರೆ, ಬದಲಾದ ಜಿಲ್ಲೆಯ ರಾಜಕೀಯ ಪರಿಸ್ಥಿತಿಯಲ್ಲಿ ವಾಪಸ್ ಟಿಎಂಸಿ ಪಕ್ಷಕ್ಕೆ ಮರಳಿದ್ದಾರೆ.
"ನಮ್ಮ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅನುಮತಿ ಸಿಕ್ಕಿದ ನಂತರ, ಇಬ್ಬರು ಕೌನ್ಸಿಲರ್ ಗಳನ್ನು ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ" ಎಂದು ಪಕ್ಷದ ಜಿಲ್ಲಾಧ್ಯಕ್ಷರು ಹೇಳಿಕೆಯನ್ನು ನೀಡಿದ್ದಾರೆ.

"ಸ್ಥಳೀಯ ಮುಖಂಡರ ಜೊತೆಗಿನ ಮನಸ್ತಾಪದಿಂದಾಗಿ ಪಕ್ಷ ತೊರೆದಿದ್ದೆವು. ಪಕ್ಷ ತೊರೆದ ಕೆಲವೇ ದಿನಗಳಲ್ಲಿ, ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡುವುದು ಕಷ್ಟ ಎನ್ನುವುದನ್ನು ಅರಿತು, ವಾಪಸ್ ಟಿಎಂಸಿಗೆ ಮರಳಿದ್ದೇವೆ" ಎಂದು ಸೌಮೇಂದ್ರನಾಥ ಬ್ಯಾನರ್ಜಿ ಹೇಳಿದ್ದಾರೆ.
ಏಪ್ರಿಲ್ - ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ನಂತರ, ಬಿಜೆಪಿಗೆ ಹಲವು ಟಿಎಂಸಿ ಮುಖಂಡರು ಗುಳೇ ಹೋಗಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಹದಿನೆಂಟು ಕ್ಷೇತ್ರದಲ್ಲಿ ಜಯ ಸಾಧಿಸಿತ್ತು.
ಟಿಎಂಸಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷದ ಸುಮಾರು 107 ಶಾಸಕರು ಬಿಜೆಪಿ ಸೇರಲು ಸಿದ್ದರಾಗಿದ್ದಾರೆಂದು, ಒಂದು ಕಾಲದಲ್ಲಿ ಮಮತಾ ಆಪ್ತ, ಈಗ ಬಿಜೆಪಿಯ ಪ್ರಭಾವೀ ಮುಖಂಡರಾಗಿರುವ ಮುಕುಲ್ ರಾಯ್ ಕೆಲವು ದಿನಗಳ ಹಿಂದೆ ಹೇಳಿಕೆಯನ್ನು ನೀಡಿದ್ದರು.












Click it and Unblock the Notifications