ಟಿಎಂಸಿಯಿಂದ ಅಮಾನತುಗೊಂಡ ಟಿಎಂಸಿ ಸಂಸದ ಬಿಜೆಪಿಗೆ ಸೇರ್ಪಡೆ!
ಕೋಲ್ಕತಾ, ಮಾರ್ಚ್ 12: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಂದ ಜನವರಿ ತಿಂಗಳಿನಿಂದ ಅಮಾನತುಗೊಂಡ ಸಂಸದ ಅನುಪಮ್ ಹಜ್ರಾ ಅವರು ಮಂಗಳವಾರದಂದು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ಅನುಪಮ್ ಜತೆಗೆ ಸಿಪಿಎಂ ಶಾಸಕ ಖಗೆನ್ ಮುರ್ಮು ಅವರು ಕೂಡಾ ಇದೇ ಸಂದರ್ಭದಲ್ಲಿ ಬಿಜೆಪಿ ಸೇರಿಕೊಂಡರು.
ಅನುಪಮ್ ಅವರು ಪಶ್ಚಿಮ ಬೆಂಗಾಲದ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. 2014ರಲ್ಲಿ ಬೋಲುಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.
'ಮಮತಾ ಬ್ಯಾನರ್ಜಿ ಹಿಟ್ಲರ್ ನಂತೆ ವರ್ತಿಸುತ್ತಿದ್ದು, ಇನ್ನಷ್ಟು ಸಂಸದರು ಬಿಜೆಪಿ ಸೇರಲಿದ್ದಾರೆ' ಎಂದು ಟಿಎಂಸಿ ಮುಖಂಡ ಸೌಮಿತ್ರಾ ಖಾನ್ ಅವರು ಬಿಜೆಪಿ ಸೇರ್ಪಡೆ ಬಳಿಕ ಮಾಜಿ ಸಚಿವ ಮುಕುಲ್ ರಾಯ್ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ನಡುವೆ ಸಾಲು ಸಾಲಾಗಿ ಪಕ್ಷದ ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿರುವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರದಂದು ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
Delhi: Trinamool Congress (TMC) MP Anupam Hazra joins BJP. pic.twitter.com/sKLiirkBBo
— ANI (@ANI) March 12, 2019
ಪಶ್ಚಿಮ ಬಂಗಾಲದಲ್ಲಿ ಏಪ್ರಿಲ್ 11ರಂದು ಚುನಾವಣೆ ಆರಂಭಗೊಳ್ಳಲಿದ್ದು, ಏಳು ಹಂತಗಳಲ್ಲಿ ಮೇ 19ರ ತನಕ ನಡೆಯಲಿದೆ. 42 ಲೋಕಸಭಾ ಸ್ಥಾನಕ್ಕಾಗಿ ತೃಣಮೂಲ ಕಾಂಗ್ರೆಸ್, ಬಿಜೆಪಿ, ಸಿಪಿಐಎಂ, ಎಡರಂಗ ಹಾಗೂ ಕಾಂಗ್ರೆಸ್ ಸೆಣೆಸಲಿವೆ.












Click it and Unblock the Notifications