ನಾನು ಜನ್ಮತಃ ಮುಸ್ಲಿಮಳು: ಫತ್ವಾಕ್ಕೆ ನುಸ್ರತ್ ಜಹಾನ್ ತಿರುಗೇಟು
ನವದೆಹಲಿ, ಜುಲೈ 4: ನೂತನವಾಗಿ ಸಂಸತ್‌ಗೆ ಆಯ್ಕೆಯಾದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರು ಪ್ರಮಾಣ ವಚನ ಸ್ವೀಕಾರದ ವೇಳೆ ಹಣೆಗೆ ಸಿಂಧೂರ ಇಟ್ಟು, ಮಂಗಳ ಸೂತ್ರ ಧರಿಸಿದ್ದಕ್ಕೆ ತಮ್ಮ ವಿರುದ್ಧ ಕಿಡಿಕಾರಿದ್ದ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ತಮ್ಮ ವಿರುದ್ಧ ಫತ್ವಾ ಹೊರಡಿಸಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ಆಧಾರರಹಿತ ಸಂಗತಿಗಳಿಗೆ ಗಮನ ಕೊಡಬೇಡಿ. ನನಗೆ ನನ್ನ ಧರ್ಮದ ಬಗ್ಗೆ ತಿಳಿದಿದೆ. ನಾನು ಹುಟ್ಟಿನಿಂದಲೂ ಮುಸ್ಲಿಮಳು. ಈಗಲೂ ಮುಸ್ಲಿಂ. ಇದು ನಂಬಿಕೆಯ ವಿಚಾರ. ಅದನ್ನು ನಿಮ್ಮ ಹೃದಯದಲ್ಲಿ ಅನುಭವಿಸಬೇಕು, ತಲೆಯಲ್ಲಿ ಅಲ್ಲ' ಎಂದು ಹೇಳಿದರು.
ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ವಾರ್ಷಿಕ ರಥಯಾತ್ರೆ ನಡೆಸುತ್ತಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ನುಸ್ರತ್ ಬೆಂಬಲಿಸಿದ್ದಾರೆ. 'ಮಮತಾ ಅವರು ಈದ್‌ನಲ್ಲಿ ಭಾಗವಹಿಸಿದ್ದರು. ನಮ್ಮೊಂದಿಗೆ ನಿಂತಿದ್ದರು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇದು ನಂಬಿಕೆ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ್ದು. ರಾಜಕೀಯ ಮತ್ತು ಧರ್ಮವನ್ನು ಹೊರಗಿಡೋಣ' ಎಂದು ಹೇಳಿದ್ದಾರೆ.

ಬೆಂಗಾಲಿ ನಟಿಯಾದ ನುಸ್ರತ್ ಜಹಾನ್ ಅವರು ಉದ್ಯಮಿ ನಿಖಿಲ್ ಜೈನ್ ಅವರನ್ನು ಮದುವೆಯಾಗಿದ್ದರು. ಲೋಕಸಭೆಯಲ್ಲಿ ಸಂಸದೆಯಾಗಿ ಅವರು ತಡವಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ತಮ್ಮ ಧಾರ್ಮಿಕ ನಿಲುವುಗಳನ್ನು ನಿರ್ಭಿಡೆಯಿಂದ ವ್ಯಕ್ತಪಡಿಸುತ್ತಿರುವ ನುಸ್ರತ್ ಅವರನ್ನು ಕೋಲ್ಕತಾದಲ್ಲಿ ಆಯೋಜಿಸಿದ್ದ ರಥಯಾತ್ರಾಗೆ ಇಸ್ಕಾನ್ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಇದನ್ನು ಒಪ್ಪಿಕೊಂಡು ಅವರು ಭಾಗವಹಿಸಿದ್ದರು.
'ಮದುವೆ ಎನ್ನುವುದು ನನ್ನ ವೈಯಕ್ತಿಕ ವಿಚಾರ. ಅದರಿಂದ ಎಲ್ಲರೂ ಸಂತಸಪಟ್ಟಿರುವುದು ಖುಷಿ ನೀಡಿದೆ. ನನ್ನ ಹಣೆಯಲ್ಲಿ ಸಿಂಧೂರ ಇರುವುದಕ್ಕೆ ಅನೇಕರು, ನಾನು ಹಿಂದೂವನ್ನು ಮದುವೆಯಾಗಿದ್ದಕ್ಕೆ ಮತಾಂತರ ಹೊಂದಿದ್ದೇನೆಯೇ ಎಂದು ಪ್ರಶ್ನಿಸಿದ್ದರು. ಆದರೆ, ನಮಗೆಲ್ಲರಿಗೂ ನಮ್ಮ ಧರ್ಮವನ್ನು ಆಯ್ಕೆ ಮಾಡುವ ಹಕ್ಕು ಇದೆ ಎಂದು ನನ್ನ ಭಾವನೆ. ನಾನು ಹುಟ್ಟಿನಿಂದ ಇಸ್ಲಾಂ ಆಯ್ದುಕೊಂಡಿದ್ದೆ. ಅದನ್ನು ಅನುಸರಿಸುತ್ತೇನೆ. ಆದರೆ ಎಲ್ಲ ಧರ್ಮಗಳು ಮತ್ತು ಅವರ ಆಚರಣೆಗಳನ್ನು ಗೌರವಿಸುತ್ತೇನೆ. ನಾನು ಮತ್ತು ನನ್ನ ಗಂಡ ನಮ್ಮ ನಮ್ಮ ಧರ್ಮಗಳನ್ನು ಪಾಲಿಸುತ್ತೇವೆ. ಇದು ದಿಟ್ಟ ನಡೆ ಎಂದೇನೂ ಭಾವಿಸುವುದಿಲ್ಲ. ಸಹಜವಷ್ಟೇ' ಎಂದು ನುಸ್ರತ್ ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications