ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತದಲ್ಲಿ ಚಪ್ಪಾಳೆ ಗಿಟ್ಟಿಸಿದ ಮಲ್ಲಿಕಾರ್ಜುನ ಖರ್ಗೆ ಕವನ

|
Google Oneindia Kannada News

ಕೋಲ್ಕತ್ತ, ಜನವರಿ 19: ವಿರೋಧ ಪಕ್ಷಗಳ ಈ ಒಗ್ಗೂಡುವಿಕೆ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿ ದಾಖಲಾಗುತ್ತದೆ ಎಂದು ಕಾಂಗ್ರೆಸ್‌ನ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೊಲ್ಕತ್ತದಲ್ಲಿ ಆಯೋಜಿತವಾಗಿದ್ದ 'ಯುನಿಟಿ ಆಫ್ ಇಂಡಿಯಾ' ವಿರೋಧಪಕ್ಷಗಳ ಮಹಾಸಮಾವೇಶದಲ್ಲಿ ಮಾತನಾಡಿದ ಅವರು, ಸಂದರ್ಭಕ್ಕೆ ತಕ್ಕಂತೆ ಹಿಂದಿ ಕವನದ ಸಾಲುಗಳನ್ನು ಹೇಳಿ ಭಾರಿ ಕರತಾಡನ ಗಿಟ್ಟಿಸಿಕೊಂಡರು.

ಕೋಲ್ಕತ್ತಾದಲ್ಲಿ ಮೋದಿ ಸರ್ಕಾರದ ವಿರುದ್ಧ ಘಟಾನುಘಟಿಗಳ ರಣಕಹಳೆ ಕೋಲ್ಕತ್ತಾದಲ್ಲಿ ಮೋದಿ ಸರ್ಕಾರದ ವಿರುದ್ಧ ಘಟಾನುಘಟಿಗಳ ರಣಕಹಳೆ

'ಮಂಜಿಲ್ ದೂರ್‌ ಹೇ, ರಾಸ್ತಾ ಕಠಿಣ್ ಹೇ, ಫಿರ್ಬಿ ಹಮೆ ಪಹುಂಚನಾಹೀ ಹೇ, ದಿನ್‌ ನ ಮಿಲೇತೋ ಕ್ಯಾ, ಹಾತ್‌ ಮಿಲಾಕರ್‌ ತೋ ಚಲೋ' ಎಂಬ ಸಾಲುಗಳನ್ನು ಖರ್ಗೆ ವಾಚಿಸಿದರು. ಸಂದರ್ಭಕ್ಕೆ ಸೂಕ್ತವಾಗಿದ್ದ ಆ ಸಾಲುಗಳು ಜನರ ಮನಗೆದ್ದವು ಭಾರಿ ಕರತಾಡನ ವ್ಯಕ್ತವಾಯಿತು.

ಮೋದಿ ಸರಕಾರದ ಡೇಟ್ ಎಕ್ಸ್ ಪೈರ್ ಆಗಿದೆ : ಮಮತಾ ಬ್ಯಾನರ್ಜಿ ಘರ್ಜನೆ ಮೋದಿ ಸರಕಾರದ ಡೇಟ್ ಎಕ್ಸ್ ಪೈರ್ ಆಗಿದೆ : ಮಮತಾ ಬ್ಯಾನರ್ಜಿ ಘರ್ಜನೆ

ಸಾಲುಗಳ ಅರ್ಥ ಹೀಗಿದೆ, 'ಗುರಿ ದೂರ ಇದೆ, ಹಾದಿ ಕಠಿಣವಾಗಿದೆ, ಆದರೂ ಗುರಿ ತಲುಪಲೇಬೇಕಿದೆ. ಹೃದಯ ಜೊತೆಯಾಗಿದ್ದರೇನಂತೆ, ಕೈ-ಕೈ ಹಿಡಿದುಕೊಳ್ಳೋಣ, ಒಟ್ಟಿಗೆ ನಡೆಯೋಣ'. ಹಲವು ವರ್ಷಗಳಿಂದ ಪರಸ್ಪರ ಟೀಕೆಗಳನ್ನು ಮಾಡಿದ್ದ ಪಕ್ಷಗಳ ನಾಯಕರುಗಳೇ ಇಂದು ಒಂದು ವೇದಿಕೆಯಲ್ಲಿ ಒಂದು ಉದ್ದೇಶಕ್ಕಾಗಿ ಸೇರಿದ್ದಾಗ ಖರ್ಗೆ ಅವರು ಹೇಳಿದ ಸಾಲುಗಳು ಹೆಚ್ಚು ಪ್ರಸಕ್ತ ಎನಿಸಿದವು.

ಕೋಲ್ಕತ್ತದಲ್ಲಿ ಕರ್ನಾಟಕ ಬಿಜೆಪಿಯ ಬೆತ್ತಲಾಗಿಸಿದ ಕುಮಾರಸ್ವಾಮಿಕೋಲ್ಕತ್ತದಲ್ಲಿ ಕರ್ನಾಟಕ ಬಿಜೆಪಿಯ ಬೆತ್ತಲಾಗಿಸಿದ ಕುಮಾರಸ್ವಾಮಿ

ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದೆ

ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದೆ

ಸಮಾವೇಶದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರತಿನಿಧಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಜಾತ್ಯಾತೀತ ಮೌಲ್ಯಗಳನ್ನು ಉಳಿಸಲು ಎಲ್ಲರೂ ಒಗ್ಗೂಡಲೇ ಬೇಕಾಗಿದೆ. ಮೋದಿ-ಶಾ ಜೋಡಿ ನಮ್ಮ ಹಾದಿಗೆ ಮುಳ್ಳು ಸುರಿಯುತ್ತಿರುತ್ತಲೇ ಇರುತ್ತಾರೆ ಆದರೆ ನಾವು ಅದನ್ನೆಲ್ಲಾ ನಿರ್ಲಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು.

ಅಂಬೇಡ್ಕರ್ ಆಶಯಗಳನ್ನು ಧ್ವಂಸ ಮಾಡಿದರು

ಅಂಬೇಡ್ಕರ್ ಆಶಯಗಳನ್ನು ಧ್ವಂಸ ಮಾಡಿದರು

ಅಂಬೇಡ್ಕರ್ ಅವರು ದೇಶದ ಎಲ್ಲಾ ಜಾತಿ, ಧರ್ಮ, ಪ್ರಾಂತ, ಭಾಷೆಯ ಜನರು ಒಟ್ಟಾಗಿರಲೆಂದು ಸಂವಿಧಾನವನ್ನು ಕೊಟ್ಟರು ಆದರೆ ಮೋದಿ ಆ ಸಂವಿಧಾನವನ್ನು ಹಾಳು ಮಾಡುವ ಹಾದಿಯಲ್ಲಿದ್ದಾರೆ ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದರು.

'ಅಂಬಾನಿ-ಅದಾನಿಗೆ ತಿನ್ನಿಸಿದ್ದಾರೆ'

'ಅಂಬಾನಿ-ಅದಾನಿಗೆ ತಿನ್ನಿಸಿದ್ದಾರೆ'

ಭಾರಿ ದೊಡ್ಡ-ದೊಡ್ಡ ಹೇಳಿಕೆಗಳನ್ನು ನೀಡುವ ಮೋದಿ ಅದನ್ನು ಜಾರಿಗೆ ತರುವಲ್ಲಿ ಸಂಪೂರ್ಣ ಸೋತಿದ್ದಾರೆ. ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದಿದ್ದರು ಮೋದಿ, ಅವರು ತಿನ್ನಲಿಲ್ಲ ಆದರೆ ಅಂಬಾನಿ-ಅದಾನಿಗಳಿಗೆ ಚೆನ್ನಾಗಿ ತಿನ್ನಿಸಿದರು ಎಂದು ಗೇಲಿ ಮಾಡಿದರು.

'ಸುಪ್ರಿಂಗೆ ಸುಳ್ಳು ಅಫಿಡವಿಟ್ ಕೊಟ್ಟರು'

'ಸುಪ್ರಿಂಗೆ ಸುಳ್ಳು ಅಫಿಡವಿಟ್ ಕೊಟ್ಟರು'

ಸುಪ್ರಿಂಕೋರ್ಟ್‌ಗೆ ಸುಳ್ಳು ಅಫಿಡವಿಟ್ ಕೊಟ್ಟರು, ರಫೇಲ್ ದರದ ಬಗ್ಗೆ ಸುಳ್ಳು ಹೇಳಿದರು. ಕೊಡುತ್ತೇವೆಂದಿಂದ ಉದ್ಯೋಗಗಳನ್ನು ಕೊಡಲಿಲ್ಲ. ಇರುವ ಉದ್ಯೋಗಗಳನ್ನೂ ಕಿತ್ತುಕೊಂಡರು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ, ಆದರೆ ಇವರು ಶ್ರೀಮಂತರ ಸಾಲಮನ್ನಾ ಮಾಡುತ್ತಿದ್ದಾರೆ. ಮೋದಿ ಅವರ ಗುರಿ ಈಗ ಲೋಕಸಭೆ ಚುನಾವಣೆ ಮೇಲೆ ನೆಟ್ಟಿದೆ ಎಂದು ಖರ್ಗೆ ಹೇಳಿದರು.

English summary
Congress leader Mallikarjun Kharge attended 'Unity of India' opposition parties mega rally behalf of congress party. He said we all should be unit till reach our goal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X