'ಅಸಾದುದ್ದೀನ್ ಓವೈಸಿಯನ್ನು ಹಣದಿಂದ ಯಾರಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ'
ಕೋಲ್ಕತ್ತ, ಡಿಸೆಂಬರ್ 16: ಅಸಾದುದ್ದೀನ್ ಓವೈಸಿಯನ್ನು ಹಣದಿಂದ ಯಾರಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹೇಳಿದ್ದಾರೆ.
ಮುಸ್ಲಿಂ ಮತಗಳನ್ನು ಪಡೆಯಲು ಬಿಜೆಪಿ ಹೈದರಾಬಾದಿನಲ್ಲಿ ಎಐಎಂಐಎಂಗೆ ಹಣವನ್ನು ನೀಡಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು.
ಇದಕ್ಕೆ ವಿರೊಧ ವ್ಯಕ್ತಪಡಿಸಿರುವ ಪಕ್ಷವು ಯಾರೇ ಬಂದರೂ ಹಣದಲ್ಲಿ ಓವೈಸಿಯನ್ನು ಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಂ ಮತದಾರರು ಮಮತಾ ಬ್ಯಾನರ್ಜಿಯ ಆಸ್ತಿಯಲ್ಲ.

ಇಲ್ಲಿಯವರೆಗೂ ಅಸಾದುದ್ದೀನ್ ಓವೈಸಿಯನ್ನು ಕೊಳ್ಳುವವರು ಹುಟ್ಟಿಲ್ಲ, ಮಮತಾ ಆರೋಪ ಆಧಾರರಹಿತವಾಗಿದೆ. ಅವರು ತಮ್ಮ ನೆಲದಲ್ಲಿಯೇ ಹೆದರುತ್ತಿದ್ದಾರೆ, ತಮ್ಮ ಸರ್ಕಾರ ಎಲ್ಲಿ ಉರುಳಿಹೋಗುತ್ತದೋ ಎನ್ನುವ ಭಯದಲ್ಲಿದ್ದಾರೆ ಹೀಗಾಗಿ ಇಂತಹ ಮಾತುಗಳನ್ನಾಡುತ್ತಿದ್ದಾರೆ ಎಂದರು.
ನಮಗೆ ಮತ ನೀಡಿರುವ ಬಿಹಾರದ ಜನತೆಯನ್ನು ಮಮತಾ ಟೀಕಿಸಿದ್ದಾರೆ,ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲೂ ನಮ್ಮ ಪಕ್ಷ ಸ್ಪರ್ಧೆ ಮಾಡಲಿದೆ.
ಬಿಹಾರದಲ್ಲಿ ಪಕ್ಷವು ಐದು ಸ್ಥಾನಗಳನ್ನು ಗಳಿಸಿದೆ. ಮಮತಾ ಬ್ಯಾನರ್ಜಿ ಮಾತನಾಡಿ, ಹೈದರಾಬಾದಿನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿಯು ಸಾಕಷ್ಟು ಹಣವನ್ನು ಖರ್ಚು ಮಾಡಿದೆ, ಬಿಜೆಪಿ ಹಿಂದೂ ಮತವನ್ನು ಆಹಾರ ಮಾಡಿಕೊಂಡಿದ್ದರೆ, ಈ ಹೈದರಾಬಾದಿನ ಪಕ್ಷವು ಮುಸ್ಲಿಂ ಮತವನ್ನು ಆಹಾರ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು.












Click it and Unblock the Notifications