ಸದ್ಯಕ್ಕೆ ಇಲ್ಲಿಂದ ವಿಮಾನಗಳಿಲ್ಲ, ಬರಲು ಸಾಧ್ಯವಾಗ್ತಿಲ್ಲ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಸೆಪ್ಟೆಂಬರ್ 4: ಇಲ್ಲಿಂದ ಯಾವುದೇ ವಿಮಾನ ಇಲ್ಲ. ಆದ್ದರಿಂದ ಕೋಲ್ಕತ್ತಾಗೆ ವಾಪಸ್ ಬರಲು ಸಾಧ್ಯವಾಗುತ್ತಿಲ್ಲ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿರುವುದು ಸುದ್ದಿಯಾಗಿದೆ. ಡಾರ್ಜಿಲಿಂಗ್ ಗೆ ಅಧಿಕೃತ ಭೇಟಿ ನೀಡಿದ್ದ ಅವರು, ಕೋಲ್ಕತ್ತಾದಲ್ಲಿ ಸೇತುವೆ ಕುಸಿದ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದು ಹೀಗೆ.

ದಕ್ಷಿಣ ಕೋಲ್ಕತ್ತಾದಲ್ಲಿ ಮಂಗಳವಾರ ಮಧ್ಯಾಹ್ನ ಸೇತುವೆಯೊಂದು ಕುಸಿದಿತ್ತು. ವ್ಯಕ್ತಿ ಮೃತಪಟ್ಟು, ಹಲವರಿಗೆ ಗಾಯಗಳಾಗಿದ್ದವು. "ನಮಗೆ ತುಂಬ ಚಿಂತೆಯಾಗಿದೆ. ಆ ಸ್ಥಳದಿಂದ ಪರಿಹಾರ ಕಾರ್ಯಾಚರಣೆ ಬಗ್ಗೆ ಮಾಹಿತಿ ಬರುತ್ತಿದೆ. ಆದಷ್ಟು ಬೇಗ ವಾಪಸ್ ಬರಲು ಬಯಸುತ್ತೇವೆ. ಆದರೆ ಸಂಜೆ ಇಲ್ಲಿಂದ ಯಾವುದೇ ವಿಮಾನವಿಲ್ಲ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

No flights today, cant return, WB chief minister Mamata Banerjee after bridge collapse

ನಮ್ಮ ತಂಡವು ಪರಿಹಾರ ಕಾರ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿದೆ. ನಮ್ಮ ಆದ್ಯತೆ ಪರಿಹಾರ ಹಾಗೂ ರಕ್ಷಣೆಗೆ. ಉಳಿದ ತನಿಖೆ ಮತ್ತು ವಿಚಾರಣೆಯನ್ನು ಆ ನಂತರ ನಡೆಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಗ್ನಿ ಶಾಮಕ ದಳ, ಪೊಲೀಸರು, ಎನ್ ಡಿಆರ್ ಎಫ್ ತಂಡವು ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+