ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ದ್ವೇಷದ ರಾಜಕೀಯಕ್ಕೆ ಬ್ರೇಕ್ ಬೀಳಲಿದೆ; ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತಾ ಮೇ 31: "ದೇಶಾದ್ಯಂತ ಬಿಜೆಪಿಯ ದ್ವೇಷ ಮತ್ತು ಹಿಂಸೆಯ ರಾಜಕೀಯಕ್ಕೆ ಬ್ರೇಕ್ ಬೀಳಲಿದೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಸೇರಿ ಕೇಸರಿ ಪಕ್ಷವನ್ನು ಸೋಲಿಸಬೇಕಿದೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದರು.

ಪಶ್ಚಿಮ ಬಂಗಾಳದ ಪುರಲಿಯಲ್ಲಿ ಮಂಗಳವಾರ ನಡೆದ ಟಿಎಂಸಿ ಕಾರ್ಯಕರ್ತರ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಎಂಟು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಗಾಂಧಿ ಕುಟುಂಬದಿಂದ ಜನರಿಗೆ ಮೋಸ: ಸ್ಮೃತಿ ಇರಾನಿ ಗಾಂಧಿ ಕುಟುಂಬದಿಂದ ಜನರಿಗೆ ಮೋಸ: ಸ್ಮೃತಿ ಇರಾನಿ

"ಬಿಜೆಪಿ ಸರಕಾರ ಕಲಬೆರೆಕೆ ಸರಕಾರವಾಗಿದೆ. ನೋಟು ಅಮಾನೀಕರಣದಿಂದ ದೇಶದ ಆರ್ಥಿಕತೆ ಕುಸಿಯುವಂತೆ ಮಾಡಿತು. ಕೇಂದ್ರ ಸರಕಾರ ಪ್ರತಿಪಕ್ಷಗಳನ್ನು ಹಣಿಯಲು ಸರಕಾರಿ ಇಲಾಖೆಗಳನ್ನು ಬಳಸಿಕೊಳ್ಳುತ್ತಿದೆ,'' ಎಂದು ಆರೋಪಿಸಿದರು.

"ಯಾವುದೇ ಕಾರಣಕ್ಕೂ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸರಕಾರ ಬಹುಮತ ಪಡೆಯುವುದಿಲ್ಲ. ಕೇಂದ್ರದಲ್ಲಿ ಬಿಜೆಪಿ ಪುನಃ ಅಧಿಕಾರಕ್ಕೆ ಬರುವ ಯಾವುದೇ ಸಾಧ್ಯತೆಗಳಿಲ್ಲ. 2024 ರ ವೇಳೆಗೆ ಬಿಜೆಪಿಯ ದ್ವೇಷ ಮತ್ತು ಹಿಂಸೆಯ ರಾಜಕೀಯ ಅಂತ್ಯವಾಗಲಿದೆ,'' ಎಂದು ಹೇಳಿದರು.

 ಮಹಾರಾಷ್ಟ್ರ; ಕಾಂಗ್ರೆಸ್‌ ಕಾರ್ಯದರ್ಶಿ ಸ್ಥಾನಕ್ಕೆ ಆಶಿಸ್‌ ರಾಜೀನಾಮೆ ಮಹಾರಾಷ್ಟ್ರ; ಕಾಂಗ್ರೆಸ್‌ ಕಾರ್ಯದರ್ಶಿ ಸ್ಥಾನಕ್ಕೆ ಆಶಿಸ್‌ ರಾಜೀನಾಮೆ

"ಪುರಲಿಯ ಮಣ್ಣು ಮಮತ್ತು ಬಂಗಾಳದ ಮಣ್ಣು ನನಗೆ ಜನರಿಗಾಗಿ ಹೋರಾಡಲು ಶಕ್ತಿಯನ್ನು ನೀಡಿದೆ. ಜನರ ಹಿತ ಕಾಪಾಡುವ ವಿಚಾರ ಬಂದಾಗ ನಾನು ಧೈರ್ಯವಾಗಿ ಹೋರಾಡುತ್ತೇನೆ,'' ಎಂದರು.

 ಬಿಜೆಪಿಯಿಂದ ಜನರ ಜೀವನ ಹಾಳು

ಬಿಜೆಪಿಯಿಂದ ಜನರ ಜೀವನ ಹಾಳು

"ಹುಸಿ ಭರವಸೆಯೊಂದಿಗೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತು. ಎಂಟು ವರ್ಷಗಳ ಬಿಜೆಪಿಯ ಯೋಜನೆಗಳು ಹಳ್ಳ ಹಿಡಿದಿವೆ. ಸಾಮಾನ್ಯ ಜನರ ಜೀವನವನ್ನು ಬಿಜೆಪಿ ಸರಕಾರ ಹಾಳು ಮಾಡಿದೆ. ಕೇಂದ್ರ ಸರಕಾರದ ದುರಾಡಳಿತದ ವಿರುದ್ಧ ಜನರು ಬೇಸತ್ತು ಹೋಗಿದ್ದಾರೆ,'' ಎಂದು ಮಮತಾ ಬ್ಯಾನರ್ಜಿ ದೂರಿದರು.

"ಪ್ರತಿಪಕ್ಷಗಳನ್ನು ಸುಮ್ಮನಾಗಿಸಲು ಕೇಂದ್ರ ಸರಕಾರ ಸಿಬಿಐ ಮತ್ತು ಇಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸಿಬಿಐ ಮತ್ತು ಇಡಿ ಮೊದಲು ಬಿಜೆಪಿಯ ಭಷ್ಟ ರಾಜಕಾರಣಿಗಳನ್ನು ಬಂಧಿಸಬೇಕು,'' ಎಂದು ಒತ್ತಾಯಿಸಿದರು.

 ಕೇಂದ್ರದಿಂದ ಸಿಬಿಐ, ಇಡಿ ದುರ್ಬಳಕೆ

ಕೇಂದ್ರದಿಂದ ಸಿಬಿಐ, ಇಡಿ ದುರ್ಬಳಕೆ

"ಕೇಂದ್ರ ಸರಕಾರ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮತ್ತು ಆಪ್ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ಸಿಬಿಐ ಮತ್ತು ಇಡಿ ಪ್ರಯೋಗಿಸುತ್ತಿದೆ. ಬಿಜೆಪಿ ಸಚಿವರ ಕಥೆ ಏನು? ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಭ್ರಷ್ಟ ಬಿಜೆಪಿ ಸಚಿವರನ್ನು ಜೈಲಿಗೆ ಕಳುಹಿಸಬೇಕಿದೆ,'' ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಸಂಬಂಧ ಆಪ್ ನಾಯಕ ಸತ್ಯೇಂದ್ರ ಜೈನ್‌ರನ್ನುಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಜಾರಿ ನಿರ್ದೇನಾಲಯ ನಂತರ ಅವರನ್ನು ಬಂಧಿಸಿದೆ.

 ಟಿಎಂಸಿ ನಾಯಕರ ವಿರುದ್ಧಸಮನ್ಸ್ ಜಾರಿ

ಟಿಎಂಸಿ ನಾಯಕರ ವಿರುದ್ಧಸಮನ್ಸ್ ಜಾರಿ

"ಅಂತಾರಾಷ್ಟ್ರೀಯ ಗಡಿಗಳ ಮೂಲಕ ಜಾನುವಾರುಗಳನ್ನು ಹೇಗೆ ಕಳ್ಳಸಾಗಣೆ ಮಾಡಲಾಗುತ್ತಿದೆ?. ಹಲವು ಪಕ್ರರಣಗಳಿಗೆ ಸಂಬಂಧಿಸಿದಂತೆ ಟಿಎಂಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವು ಟಿಎಂಸಿ ನಾಯಕರ ವಿರುದ್ಧ ಕೇಂದ್ರ ಸರಕಾರಿ ಏಜೆನ್ಸಿಗಳಿಂದ ಸಮನ್ಸ್ ಜಾರಿಗೊಳಿಸಲಾಗಿದೆ,'' ಎಂದು ದೂರಿದರು.

 ಕೇಂದ್ರದ ವಿರುದ್ಧ ಪ್ರತಿಭಟನೆ

ಕೇಂದ್ರದ ವಿರುದ್ಧ ಪ್ರತಿಭಟನೆ

"ಮಹತ್ಮಾ ಗಾಂಧಿ ನರೇಗಾ ಯೋಜನೆ ಸೇರಿದಂತೆ ಹಲವು ಯೋಜನೆಗಳಲ್ಲಿ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರಕಾರದ ತಾರತಮ್ಯ ಖಂಡಿಸಿ ಪಶ್ಚಿಮ ಬಂಗಾಳಾದ ರಾಜ್ಯಾದ್ಯಂತ ಜೂನ್ 5 ಮತ್ತು 6 ರಂದು ಪ್ರತಿಭಟನೆ ನಡೆಸಲಾಗುತ್ತದೆ,'' ಎಂದು ಟಿಎಂಸಿ ಅಧಿನಾಯಕಿ ತಿಳಿಸಿದರು. 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಉಪ ಚುನಾವಣೆಯಲ್ಲಿ 9 ಸ್ಥಾನಗಳ ಪೈಕಿ ಬಿಜೆಪಿ ಆರರಲ್ಲಿ ಜಯಗಳಿಸಿತು. ಟಿಎಂಸಿಗೆ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಮಾತ್ರ ಸಾಧ್ಯವಾಯಿತು.

English summary
No entry for BJP in 2024 Loksabha elections says West Bengal chief minister and TMC leader Mamata Banerjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X