ಬಂಗಾಳ ಚುನಾವಣಾ ನಂತರದ ಹಿಂಸಾಚಾರದ ಸಿಬಿಐ ತನಿಖೆಗೆ ಎನ್‌ಎಚ್‌ಆರ್‌ಸಿ ಶಿಫಾರಸು

ಕೋಲ್ಕತ್ತಾ, ಜು.15: ಪಶ್ಚಿಮ ಬಂಗಾಳದ ಮತದಾನದ ನಂತರದ ಹಿಂಸಾಚಾರದ ಆರೋಪಗಳನ್ನು ತನಿಖೆ ಮಾಡುವ ಎನ್‌ಎಚ್‌ಆರ್‌ಸಿ ಸಮಿತಿಯು ರಾಜ್ಯದ ಪರಿಸ್ಥಿತಿ "ಕಾನೂನಿನ ನಿಯಮದ ಬದಲು ಆಡಳಿತಗಾರನ ಕಾನೂನಿನ ಅಭಿವ್ಯಕ್ತಿ" ಎಂದು ಪ್ರತಿಪಾದಿಸಿದೆ.

ಈ ಬಗ್ಗೆ ಎನ್‌ಎಚ್‌ಆರ್‌ಸಿ ಸಮಿತಿಯು ಕಲ್ಕತ್ತಾ ಹೈಕೋರ್ಟ್‌ನ ಮುಂದೆ ನೀಡಿದ ವರದಿಯಲ್ಲಿ ಉಲ್ಲೇಖ ಮಾಡಿದೆ. ಹಾಗೆಯೇ "ಕೊಲೆ ಮತ್ತು ಅತ್ಯಾಚಾರದಂತಹ ಗಂಭೀರ ಅಪರಾಧಗಳು" ಕುರಿತು ಸಿಬಿಐ ತನಿಖೆಯನ್ನು ಶಿಫಾರಸು ಮಾಡಿದೆ.

ಹೈಕೋರ್ಟ್‌ನ ಐದು ನ್ಯಾಯಾಧೀಶರ ಪೀಠದ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷರು ರಚಿಸಿದ ಸಮಿತಿಯು ಈ ಪ್ರಕರಣಗಳನ್ನು ರಾಜ್ಯದ ಹೊರಗೆ ವಿಚಾರಣೆ ನಡೆಸಬೇಕು ಎಂದು ಹೇಳಿದೆ.

NHRC report on West Bengal post-poll violence recommends CBI probe

"ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹಿಂಸಾತ್ಮಕ ಘಟನೆಗಳ ಪ್ರಾದೇಶಿಕ-ತಾತ್ಕಾಲಿಕ ವಿಸ್ತರಣೆಯು ಬಲಿಪಶುಗಳ ದುಃಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರದ ಭೀಕರ ನಿರಾಸಕ್ತಿಯನ್ನು ಪ್ರತಿಬಿಂಬಿಸುತ್ತದೆ," ಎಂದಿದೆ.

"ಕೊಲೆ, ಅತ್ಯಾಚಾರ ಮುಂತಾದ ಘೋರ ಅಪರಾಧಗಳನ್ನು ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಬೇಕು. ಈ ಪ್ರಕರಣಗಳನ್ನು ರಾಜ್ಯದ ಹೊರಗೆ ವಿಚಾರಣೆಗೆ ಒಳಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ," ಎಂದು ಜೂನ್ 13 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

"ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರದ ಪರಿಣಾಮವಾಗಿ ಜನರು ಹಲ್ಲೆಗೆ ಒಳಗಾಗಿದ್ದಾರೆ. ಹಲವಾರು ಮಂದಿ ಮನೆಗಳಿಂದ ಪಲಾಯನ ಮಾಡಿದ್ದಾರೆ. ಆಸ್ತಿಪಾಸ್ತಿ ನಾಶವಾಗಿದೆ," ಎಂದು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

"ಇದು ಮುಖ್ಯ ವಿರೋಧ ಪಕ್ಷದ ಬೆಂಬಲಿಗರ ವಿರುದ್ಧ ಆಡಳಿತ ಪಕ್ಷದ ಬೆಂಬಲಿಗರು ಮಾಡಿದ ಪ್ರತೀಕಾರದ ಹಿಂಸಾಚಾರ," ಎಂದು ಎನ್‌ಎಚ್‌ಆರ್‌ಸಿ ಸಮಿತಿ ತನ್ನ ಹೇಳಿಕೆಗಳಲ್ಲಿ ತೀಕ್ಷ್ಣವಾಗಿ ತಿಳಿಸಿದೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+