ಮಮತಾ ಬ್ಯಾನರ್ಜಿ ಸ್ಥಿತಿ ಸೋತ ಆಟಗಾರನಂತಾಗಿದೆ: ಜೆಪಿ ನಡ್ಡಾ

ಕೋಲ್ಕತ್ತಾ, ಏಪ್ರಿಲ್ 13: ಮಮತಾ ಬ್ಯಾನರ್ಜಿ ಈಗ ಸೋತ ಆಟಗಾರನಂತೆ ಆಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ಬರ್ಧಮಾನ್ ಜಿಲ್ಲೆಯ ಪುರ್ಬಾದ ಕಲ್‌ನಾದಲ್ಲಿ ರೋಡ್‌ ಶೋ ನಡೆಸಿ ಬಳಿಕ ಮಾತನಾಡಿದ ಅವರು, ಬಿಜೆಪಿ ಮತ್ತು ಚುನಾವಣಾ ಆಯೋಗದತ್ತ ಬೆರಳು ತೋರಿಸುತ್ತಿರುವ ಮಮತಾ ತಾನು ರಾಜ್ಯದ ಜನರಿಗೆ ಏನು ಮಾಡಿದ್ದೇನೆ ಎಂಬುದನ್ನು ಮರೆತಂತಿದೆ ಎಂದರು.

ಆಟದಲ್ಲಿ ಸೋತ ಆಟಗಾರನಂತೆ ಮಮತಾ ಸ್ಥಿತಿ ಇದೆ. ಅವರು ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಾರೆ, ಆದರೆ ಅಧಿಕಾರ ನೀಡಿದರೆ ಬಿಜೆಪಿಯು ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದು ಹೇಳಿದರು.

Mamatas Plight Same As That Of Defeated Player: J P Nadda

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ 24 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿಷೇಧ ವಿಧಿಸಿದೆ. ಮುಸ್ಲಿಂ ಮತಗಳ ಕ್ರೂಢೀಕರಣ ಮತ್ತು ಕೇಂದ್ರ ಭದ್ರತಾ ಪಡೆಗಳ ವಿರುದ್ಧ ಸಂಘರ್ಷಕ್ಕಿಳಿಯುವಂತೆ ಜನರಿಗೆ ಕರೆ ನೀಡಿದ ಆರೋಪದ ಮೇಲೆ, ಮಮತಾ ಬ್ಯಾನರ್ಜಿ ಅವರಿಗೆ ಸ್ಪಷ್ಟನೆ ಕೋರಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿತ್ತು.

ಪಶ್ಚಿಮ ಬಂಗಾಳದಲ್ಲಿ ದೀದಿ ಕ್ಲೀನ್ ಬೋಲ್ಡ್: ಪ್ರಧಾನಿ ಮೋದಿ ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಚುನಾವಣಾ ಪ್ರಚಾರದ ಮೇಲೆ 24 ಗಂಟೆಗಳ ನಿಷೇಧ ಹೇರಲಾಗಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಚುನಾವಣಾ ಪ್ರಚಾರದ ಮೇಲೆ 24 ಗಂಟೆಗಳ ನಿಷೇಧ ಹೇರಲಾಗಿದೆ.

ಏಪ್ರಿಲ್ 12ರ 8 ಗಂಟೆಯಿಂದ ಏಪ್ರಿಲ್ 13ರ ರಾತ್ರಿ 8 ಗಂಟೆಯವರೆಗೆ ಮಮತಾ ಅವರ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ವಿಧಿಸಿ ಆಯೋಗ ಆದೇಶ ಹೊರಡಿಸಿದೆ. ಮಮತಾ ಬ್ಯಾನರ್ಜಿ ಅವರು ಕೇಂದ್ರದ ಪಡೆಗಳಿಗೆ ಮುತ್ತಿಗೆ ಹಾಕುವಂತೆ ಕರೆ ನೀಡಿದ್ದೇ ಕೂಚ್ ಬಿಹಾರದಲ್ಲಿ ಜನರು ಸಿಐಎಸ್‌ಎಫ್ ಮೇಲೆ ದಾಳಿಗೆ ಉಂದಾಗಲು ಕಾರಣ ಎಂದು ಕೇಂದ್ರ ಸಚಿವ ಅಮಿತ್ ಶಾ ಆರೋಪಿಸಿದ್ದರು. ಮಮತಾ ಬ್ಯಾನರ್ಜಿ ಈ ನೋಟಿಸ್‌ಗೆ ಸೂಕ್ತ ಉತ್ತರ ನೀಡದ ಕಾರಣ, ಅವರ ಚುನಾವಣಾ ಪ್ರಚಾರದ ಮೇಲೆ 24 ಗಂಟೆಗಳ ನಿರ್ಬಂಧ ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+