ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾ ವಲಸಿಗರಿಗೆ ಭೂಮಿ ನೀಡಿದ ದೀದಿ ಸರ್ಕಾರ

|
Google Oneindia Kannada News

ಕೊಲ್ಕತ್ತ, ನವೆಂಬರ್ 26: ಅಕ್ರಮ ವಲಸಿಗರ ತಡೆಗೆ ಕೇಂದ್ರ ಸರ್ಕಾರ ದೇಶಾದ್ಯಂತ ಎನ್ ಆರ್ ಸಿ ಜಾರಿಗೆ ಮುಂದಾಗುತ್ತಿರುವ ಬೆನ್ನಲ್ಲೇ, ಪಶ್ಚಿಮ ಬಂಗಾಳದಲ್ಲಿನ ಬಾಂಗ್ಲಾ ವಲಸಿಗ ನಿರಾಶ್ರಿತರಿಗೆ ಭೂಮಿ ಹಕ್ಕು ನೀಡಲು ಮುಂದಾಗಿದೆ.

ಸುಮಾರು ವಲಸಿಗರು ನೆಲೆಸಿರುವ 94 ಕಾಲನಿಯನ್ನು ಅಧಿಕೃತಗೊಳಿಸಲು ಮಮಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮುಂದಿನ ವರ್ಷ ಚುನಾವಣೆ ಎದುರಿಸುವ ರಾಜ್ಯವು ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಕೇಂದ್ರ ಸರ್ಕಾರಕ್ಕೂ ಈ ಸಿಎಂಗೂ ಎಣ್ಣೆ-ಸೀಗೆಕಾಯಿ ಸಂಬಂಧ!ಕೇಂದ್ರ ಸರ್ಕಾರಕ್ಕೂ ಈ ಸಿಎಂಗೂ ಎಣ್ಣೆ-ಸೀಗೆಕಾಯಿ ಸಂಬಂಧ!

ರಾಜ್ಯದಲ್ಲಿ 1971ರಿಂದಲೂ ನಿರಾಶ್ರಿತರಿದ್ದಾರೆ. ದಶಕಗಳ ಕಾಲ ನಿರಾಶ್ರಿತರನ್ನು ಹಾಗೆ ಬಿಡಲು ಸಾಧ್ಯವಿಲ್ಲ. ಅವರಿಗೂ ಬದುಕುವ ಹಕ್ಕನ್ನು ನೀಡಬೇಕಿದೆ. ಹೀಗಾಗಿ ನಿರಾಶ್ರಿತರಿರುವ ಎಲ್ಲ ಕಾಲನಿಗಳನ್ನು ಅಧಿಕೃತಗೊಳಿಸಿ, ಎಲ್ಲ ಹಕ್ಕು ನೀಡಲು ನಿರ್ಧರಿಸಲಾಗಿದೆ. ಇದರಿಂದ ಕಳೆದ 3 ದಶಕಗಳಿಂದ ನಡೆಯುತ್ತಿರುವ ನಿರಾಶ್ರಿತರ ಹೋರಾಟಕ್ಕೆ ತೆರೆ ಬೀಳಲಿದೆ.

Mamata Government Decided To Regularise 94 Refugee Colonies In West Bengal

ಆದರೆ ಪಶ್ಚಿಮ ಬಂಗಾಳದ ನಿರಾಶ್ರಿತ ಕೇಂದ್ರಗಳು ಭಯೋತ್ಪಾದನಾ ಚಟುವಟಿಕೆಗೆ ವೇದಿಕೆಯಾಗುತ್ತಿದೆ ಎನ್ನುವ ಕೇಂದ್ರ ಸರ್ಕಾರದ ಎಚ್ಚರಿಕೆ ನಡುವೆಯೂ ಈ ಕ್ರಮ ರಾಜಕೀಯ ವಿವಾದಕ್ಕೆ ಕಾರಣವಾಗಲಿದೆ. ಬಿಜೆಪಿಯು ಇದೇ ವಿಚಾರ ಇರಿಸಿಕೊಂಡು ರಾಜ್ಯದಲ್ಲಿ ರಾಜಕೀಯ ಮಾಡುತ್ತಿದೆ. ಲೋಕಸಭೆ ಚುನಾವಣೆಯಲ್ಲಿಯೂ ಇಂತಹ ವಿಚಾರಗಳ ಮೂಲಕವೇ ಮಮತಾ ಬ್ಯಾನರ್ಜಿಗೆ ಬಿಜೆಪಿ ಶಾಕ್‌ ನೀಡಿತ್ತು. ಈಗ ಇನ್ನಷ್ಟು ಅಸ್ತ್ರವನ್ನು ಟಿಎಂಸಿ ನೀಡಿದಂತಾಗಿದೆ.

'ವಿಭಜನೀಯ ಮೂಲಭೂತವಾದಿಗಳು': ಓವೈಸಿ ವಿರುದ್ಧ ದೀದಿ ವಾಗ್ದಾಳಿ'ವಿಭಜನೀಯ ಮೂಲಭೂತವಾದಿಗಳು': ಓವೈಸಿ ವಿರುದ್ಧ ದೀದಿ ವಾಗ್ದಾಳಿ

ಆದರೆ ಪಶ್ಚಿಮ ಬಂಗಾಳ ಸರ್ಕಾರದ ಈ ಕ್ರಮವು ರಾಜ್ಯ ಸರ್ಕಾರಿ ಜಾಗದಲ್ಲಿರುವ ಕಾಲನಿಗಳಿಗೆ ಸೀಮಿತವಾಗಿರಲಿದೆ. ಕೇಂದ್ರ ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿರುವ ಕಾಲನಿಗಳನ್ನು ಕೇಂದ್ರ ಸರ್ಕಾರವೇ ಅಧಿಕೃತಗೊಳಿಸಬೇಕಿದೆ.

English summary
West Bengal Government Decided To Regularise 94 Refugee Colonies Across the state Decision Has Taken By Mamata Banerjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X