ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸಿಎಂ ಮಮತಾ ಬ್ಯಾನರ್ಜಿ ಗೈರು?

ಕೋಲ್ಕತಾ, ಫೆಬ್ರವರಿ7: "ಯಾರನ್ನಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವಮಾನಿಸುವುದು ನಿಮಗೆ ಅಪೇಕ್ಷಿತವೇ ಆಗಿದೆ. ನಾನೇನೂ ಹೆಚ್ಚು ಮಾತನಾಡುವುದಿಲ್ಲ. ಜೈ ಹಿಂದ್, ಜೈ ಬಾಂಗ್ಲಾ" ಎಂದು ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಕಾರ್ಯಕ್ರಮದ ವೇದಿಕೆಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಟ್ಟಿನಿಂದ ತೆರಳಿದ್ದರು. ಇಂದು ಪಶ್ಚಿಮ ಬಂಗಾಳದ ಹಲ್ದಿಯಾದಲ್ಲಿ ಪ್ರಧಾನಿ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಸಿಎಂ ಮಮತಾ ಗೈರಾಗುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿ ಬಂದಿದೆ.

ಜನವರಿ 23ರಂದು ವಿಕ್ಟೋರಿಯಾ ಸ್ಮಾರಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ವೇದಿಕೆಗೆ ಬರುತ್ತಿದ್ದಂತೆಯೇ ಕೆಲವರು "ಜೈ ಶ್ರೀರಾಮ್" ಎಂದು ಘೋಷಣೆ ಕೂಗಿದ್ದು, ಅವರ ಕೋಪಕ್ಕೆ ಕಾರಣವಾಗಿತ್ತು. "ಸರ್ಕಾರದ ಕಾರ್ಯಕ್ರಮಗಳಲ್ಲಿ ಶಿಸ್ತುಪಾಲನೆ, ಘನತೆ ಅಗತ್ಯ. ಇದು ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ, ಸರ್ಕಾರದ ಕಾರ್ಯಕ್ರಮದಲ್ಲಿ ಶಿಸ್ತು ಪಾಲನೆ, ಘನತೆ ಇರಬೇಕು ಎಂಬ ಬಗ್ಗೆ ಕನಿಷ್ಠ ಅರಿವಿರಬೇಕು" ಎಂದು ಸಿಡಿಮಿಡಿಗೊಂಡಿದ್ದರು.

Mamata Banerjee Unlikely to Attend PM Modi’s event at Haldia

ಪ್ರಧಾನಿ ಮೋದಿ, ರಾಜ್ಯಪಾಲ ಜಗದೀಪ್ ಧಾನ್ಕರ್ ಅವರ ಉಪಸ್ಥಿತಿಯಲ್ಲಿ ತಮಗೆ ಅಪಮಾನವಾಗಿದೆ ಎಂದು ಮಮತಾ ಕೋಪಗೊಂಡಿದ್ದು, ನೇತಾಜಿ ಕುರಿತ ಕಾರ್ಯಕ್ರಮವನ್ನು ರಾಜಕೀಯಗೊಳಿಸುವುದು ತಪ್ಪು ಎಂದಿದ್ದರು. ಭಾನುವಾರದಂದು ನಡೆಯುವ ಕಾರ್ಯಕ್ರಮದಲ್ಲೂ ಇದೇ ರೀತಿ ಬಿಜೆಪಿ ಕಾರ್ಯಕರ್ತರು ನಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ, ಹೀಗಾಗಿ ಮಮತಾ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ ಎಂದು ಸಿಎನ್ಎನ್ ನ್ಯೂಸ್ 18 ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+