ದೆಹಲಿ ಹಿಂಸಾಚಾರ ಒಂದು ಪ್ರಾಯೋಜಿತ ನರಮೇಧ: ದೀದಿ
ಕೊಲ್ಕತ್ತ, ಮಾರ್ಚ್ 2 : : ದೆಹಲಿಯ ಹಿಂಸಾಚಾರವು ಒಂದು ಪ್ರಾಯೋಜಿತ ನರಮೇಧವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಶಾಹಿದ್ ಮಿನಾರ್ ಮೈದಾನದಲ್ಲಿ ಭಾನುವಾರ ನಡೆದ ಅಮಿತ್ ಷಾ ಅವರ ಸಭೆಗೂ ಮುನ್ನ ಗೋಲಿ ಮಾರೊ ಘೋಷಣೆ ಕೂಗಿರುವುದನ್ನು ಖಂಡಿಸಿದ ಅವರು, ಗುಜರಾತ್ ಮಾದರಿಯ ನರಮೇಧವನ್ನು ಪುನಾರವರ್ತಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
'ಕೊಲ್ಕತ್ತ ಬೀದಿಗಳಲ್ಲಿ ಗೋಲಿ ಮಾರೊ ಘೋಷಣೆ ಕೂಗಿರುವುದನ್ನ ನಾನು ಖಂಡಿಸುತ್ತೇನೆ. ಇದು ಬಂಗಾಳವೇ ಹೊರತು ದೆಹಲಿ ಅಲ್ಲ. ಇದನ್ನು ನಾವು ಸಹಿಸುವುದಿಲ್ಲ. ಇಲ್ಲಿನ ಕಾನೂನು ತನ್ನದೇ ಆದ ಕರ್ತವ್ಯ ನಿರ್ವಹಿಸಲಿದೆ' ಎಂದು ಮಮತಾ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧಿಸಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಹೆಲಿಕಾಪ್ಟರ್ ಇಳಿಸಲೂ ಅವಕಾಶಕೊಡಲಿಲ್ಲ
ಲೋಕಸಭಾ ಚುನಾವಣೆಯ ಸಮಯದಲ್ಲಿ ನೀವು ನಮ್ಮನ್ನು ತಡೆಯಲು ಶ್ರಮಿಸಿದ್ದೀರಿ. ಹೆಲಿಕಾಪ್ಟರ್ ಇಳಿಸಲು ಅವಕಾಶ ನೀಡಲಿಲ್ಲ. ಸಮಾವೇಶಗಳಿಗೆ ಅವಕಾಶ ನೀಡಲಿಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡು ಹಾರಿಸಲಾಗಿತ್ತು.

ಬಂಗಾಳದಲ್ಲಿ ಗಲಭೆಗಳು ನಡೆದವು
ಬಂಗಾಳದಲ್ಲಿ ಗಲಭೆಗಳು ನಡೆದವು, ರೈಲುಗಳು ಸುಟ್ಟುಹೋದವು, ಅಮಾಯಕರು ಕೊಲ್ಲಲ್ಪಟ್ಟರು. ನಮ್ಮ 40ಕ್ಕೂ ಹೆಚ್ಚು ಕಾರ್ಯಕರ್ತರು ಕೊಲೆಯಾದರು ಎಂದು ಮಮತಾ ಬ್ಯಾನರ್ಜಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಎಡಪಂಥೀಯರಿಗೆ ಇಷ್ಟು ವರ್ಷ ಅವಕಾಶ ಕೊಟ್ಟಿದ್ದೀರಿ
ನೀವು ತೃಣಮೂಲ ಮತ್ತು ಎಡಪಂಥೀಯರಿಗೆ ಇಷ್ಟು ವರ್ಷಗಳ ಕಾಲ ಅವಕಾಶ ಕೊಟ್ಟಿದ್ದೀರಿ. ನಮಗೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಅವಕಾಶ ಕೊಡಿ. ನಾವು ಪಶ್ಚಿಮ ಬಂಗಾಳನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದು ಶಾ ಮತದಾರರಲ್ಲಿ ಮನವಿ ಮಾಡಿಕೊಂಡರು.

ಪಶ್ಚಿಮ ಬಂಗಾಳವನ್ನು ಎಡಪಂಥೀಯರ ಸಾಲಕ್ಕೆ ಮುಳುಗಿಸಿದ್ದೀರಿ
ಪಶ್ಚಿಮ ಬಂಗಾಳವನ್ನು ಟಿಎಂಸಿ ಮತ್ತು ಎಡಪಂಥೀಯರು ಸಾಲಕ್ಕೆ ಮುಳುಗಿಸಿದ್ದಾರೆ. ದೀದಿ ನೇತೃತ್ವದ ಸರ್ಕಾರವು ಮೂರು ಲಕ್ಷ ಕೋಟಿ ರೂ. ಸಾಲ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲು ಮಮತಾ ಬ್ಯಾನರ್ಜಿ ಅನುಮತಿ ನೀಡುತ್ತಿಲ್ಲ. ಅವರು ಬಂಗಾಳದ ಅಭಿವೃದ್ಧಿಯನ್ನು ನಿಲ್ಲಿಸಿದ್ದಾರೆ. ರೈತರಿಗಾಗಿ ಪ್ರಾರಂಭಿಸಲಾದ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲಿಲ್ಲ. ರೈತರು ಸಾಲದಲ್ಲಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ದುರಹಂಕಾರದಲ್ಲಿದ್ದಾರೆ. ಬಂಗಾಳದಲ್ಲಿ ಭ್ರಷ್ಟಾಚಾರ ಚಾಲ್ತಿಯಲ್ಲಿದೆ. ಸಿಂಡಿಕೇಟ್ ಸರ್ಕಾರದ ಆಶ್ರಯದಲ್ಲಿ ನಡೆಯುತ್ತಿದೆ. ಬಿಜೆಪಿ ಸರ್ಕಾರ ರಚನೆಯಾದ ನಂತರ ಅಂತಹವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ನಿಷೇಧ
ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯನ್ನು ನಿಷೇಧಿಸಿದ್ದಾರೆ. ಜನರು ಪೂಜಿ ಸಲ್ಲಿಸುವುದಕ್ಕೂ ಹೈಕೋರ್ಟಿಗೆ ಹೋಗಬೇಕಾಗಿತ್ತು. ರಾಮನವಮಿಯನ್ನು ಪಾಲಿಸಲು ದೀದಿ ಅನುಮತಿಸುವುದಿಲ್ಲ. ಸರಸ್ವತಿ ಪೂಜೆಯನ್ನು ಶಾಲೆಗಳಲ್ಲಿ ತಡೆಯಲಾಗಿದೆ ಎಂದು ದೂರಿದರು.












Click it and Unblock the Notifications