ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಾಗಿದ್ದರೆ ಮೋದಿಗೆ ಖುಷಿಯೋ ಖುಷಿ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಏಪ್ರಿಲ್ 23: ದೇಶ ಎದುರಿಸುತ್ತಿರುವ ಇಂತಹ ಮೆಡಿಕಲ್ ಎಮರ್ಜೆನ್ಸಿಯ ವೇಳೆಯೂ, ರಾಜಕಾರಣಿಗಳು ಕೀಳುಮಟ್ಟದ ಹೇಳಿಕೆಯನ್ನು ನೀಡುವುದನ್ನು ಬಿಡುವುದಿಲ್ಲ.

Recommended Video

      ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಯಾರಿಗೂ ಹೊಟ್ಟೆಗೆ ಊಟ ಇಲ್ಲ..! | D V Sadananda Gowda | Krishna Byregowda

      "ಪಶ್ಚಿಮ ಬಂಗಾಳದಲ್ಲಿ ಕೊರೊನಾ ಪೀಡಿತರು ಜಾಸ್ತಿಯಾದಷ್ಟು ಮೋದಿ ಸರಕಾರಕ್ಕೆ ಖುಷಿ ಎನ್ನುವ ರೀತಿಯಲ್ಲಿ ಕೇಂದ್ರ ಸರಕಾರ ವರ್ತಿಸುತ್ತಿದೆ" ಎನ್ನುವ ಗಂಭೀರ ಹೇಳಿಕೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ್ದಾರೆ.

      ರಾಜ್ಯದಲ್ಲಿ ಕೋವಿಡ್ 19 ಪರಿಸ್ಥಿತಿಯನ್ನು ಅವಲೋಕಿಸುವುದಕ್ಕಾಗಿ ಕೇಂದ್ರ ಕಳುಹಿಸಿರುವ ಟೀಂ ಬಗ್ಗೆ ಕೆಂಡಾಮಂಡಲವಾಗಿರುವ ಮಮತಾ, ಗುಣಮಟ್ಟವಿಲ್ಲದ ಕಿಟ್ ಕಳುಹಿಸಿರುವುದಕ್ಕಾಗಿ, ಕೇಂದ್ರದ ವಿರುದ್ದ ಕಿಡಿಕಾರಿದ್ದಾರೆ.

      They Would Have Been Happy If Covid 19 Cases Were More: Mamata Banerjee Angry On Modi Government

      "ರಾಜ್ಯಕ್ಕೆ ಕಳುಹಿಸಿರುವ ರ‍್ಯಾಪಿಡ್ ಟೆಸ್ಟ್ ಕಿಟ್ ಅನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆದುಕೊಂಡಿದೆ. ನಮ್ಮ ಆರೋಗ್ಯ ಸಚಿವಾಲಯ ಕೆಲವು ಕಿಟ್ ಗಳನ್ನು ಈಗಾಗಲೇ ಖರೀದಿಸಿರುವುದರಿಂದ, ನಾವು ಬಚಾವ್ ಆದೆವು" ಎಂದು ಮಮತಾ ಹೇಳಿದ್ದಾರೆ.

      "ಆರೋಗ್ಯ ವಿಚಾರದಲ್ಲಿ ತೊಂದರೆಯಾದರೆ ಅದರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ" ಎಂದು ಪ್ರಶ್ನಿಸಿರುವ ಮಮತಾ, "ಸರಿಯಾದ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡದೇ ಇದ್ದಲ್ಲಿ ರೋಗಿಗಳು ಸಾಯುವುದಿಲ್ಲವೇ" ಎಂದು ಮಮತಾ, ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

      "ನನ್ನ ಸರಕಾರ ಸರಿಯಾದ ಟೆಸ್ಟ್ ಗಳನ್ನು ನಡೆಸುತ್ತಿಲ್ಲ ಎನ್ನುವ ಆಪಾದನೆಯಿದೆ. ನಾವು ಹದಿನಾಲ್ಕು ಸಾವಿರ ಕಿಟ್ ಗಳನ್ನು ಖರೀದಿಸಿದ್ದರೆ, ಕೇಂದ್ರದಿಂದ ನಮಗೆ ಬಂದಿರುವುದು ಕೇವಲ 2,500 ಕಿಟ್" ಎಂದು ಮಮತಾ ಬ್ಯಾನರ್ಜಿ, ಮೋದಿ ಸರಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+