ಚುನಾವಣೆ ಬಂದಾಗಲೇ ಉಗ್ರರ ದಾಳಿ ನಡೆದಿದ್ದು ಹೇಗೆ?: ಮಮತಾ ಬ್ಯಾನರ್ಜಿ ಮತ್ತೆ ವಿವಾದ

ಕೋಲ್ಕತಾ, ಫೆ 18: ಪುಲ್ವಾಮಾ ಉಗ್ರರ ದಾಳಿ ಕೃತ್ಯಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಭಯೋತ್ಪಾದನಾ ದಾಳಿ ನಡೆದ ಸಮಯವನ್ನು ಪ್ರಶ್ನಿಸುವ ಮೂಲಕ ಪುನಃ ವಿವಾದ ಸೃಷ್ಟಿಸಿದ್ದಾರೆ.

2019 ಲೋಕಸಭೆ ಚುನಾವಣೆ ಸಮೀಪದಲ್ಲಿ ಇರುವಾಗಲೇ ಈ ಸಮಯಕ್ಕೆ ಸರಿಯಾಗಿ ಹೇಗೆ ಭಯಾನಕ ದಾಳಿ ನಡೆದಿದೆ? ಕಳೆದ ಐದು ವರ್ಷಗಳಿಂದ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಏಕೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಅಲ್ಲದೆ, ಇದು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವ ಸಲುವಾಗಿ ನಡೆಸಿರುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

Mamata banejree attacks Modi government over Pulwama attack, asks Why this happened before elections?

ಎನ್‌ಎಸ್‌ಎ ಮತ್ತು ಗುಪ್ತಚರ ಸಂಸ್ಥೆಗಳು ಏನು ಮಾಡುತ್ತಿವೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದು ಗುಪ್ತಚರ ವೈಫಲ್ಯ. ಭದ್ರತಾ ಬೆದರಿಕೆ ಇರುವ ಸಂದರ್ಭದಲ್ಲಿ ಇಷ್ಟು ಬಸ್‌ಗಳನ್ನು ಸೈನಿಕರನ್ನು ಕಳುಹಿಸಿದ್ದು ಏಕೆ ಎಂದು ಕಿಡಿಕಾರಿದ್ದಾರೆ.

ಬೇಹುಗಾರಿಕಾ ಸಂಸ್ಥೆಗಳು ಪೆ. 8ರಂದೇ ಈ ದಾಳಿಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದವು. ಲೋಕಸಭೆ ಚುನಾವಣೆಗೆ ಮುನ್ನವೇ ಇಂತಹ ಘಟನೆ ಸಂಭವಿಸಬಹುದು ಎಂದು ತಿಳಿಸಿದ್ದವು. ಆದರೆ, ಏಕೆ ಕ್ರಮ ತೆಗೆದುಕೊಳ್ಳಲಿಲ್ಲ? 78 ಬಸ್‌ಗಳನ್ನು ತೆರಳಲು ಏಕೆ ಅವಕಾಶ ನೀಡಲಾಯಿತು ಎಂದು ಮಮತಾ ಪ್ರಶ್ನಿಸಿದ್ದಾರೆ.

ಅಲ್ಲದೆ, ನನ್ನ ದೂರವಾಣಿ ಕರೆಗಳನ್ನು ಸಹ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ನನಗೆ ಗುಪ್ತಚರ ವರದಿಗಳು ಬಂದಿವೆ ಎಂದೂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+