• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಡ ಹುಡುಗಿಗಾಗಿ ಕಾರ್‌ ಡ್ರೈವರ್‌ ಕೆಲಸ ಮಾಡಿದ ಕೊಲ್ಕತ್ತಾ ಡಾಕ್ಟರ್

|

ಕೊಲ್ಕತ್ತಾ, ಏಪ್ರಿಲ್ 07: ಬಡ ಹುಡುಗಿಯ ಕಷ್ಟದ ಪರಿಸ್ಥಿತಿಯಲ್ಲಿ ಒಬ್ಬ ಡಾಕ್ಟರ್, ಡ್ರೈವರ್ ಆಗಿ ಆಕೆಯ ಸಹಾಯ ಮಾಡಿದ್ದಾರೆ. ತಮ್ಮ ಇಂತಹ ಸಹಾಯಕದ ಮೂಲಕ ಈಗ ಎಲ್ಲರ ಮೆಚ್ಚಿಗೆಗೆ ಕಾರಣ ಆಗಿರುವವರು ಕೊಲ್ಕತ್ತಾದ ಡಾಕ್ಟರ್ ಡಾ, ಬಬ್ಲು ಸರದಾರ್.

ಬಬ್ಲು ಸರದಾರ್ ಕೊಲ್ಕತ್ತಾದ ಎಸ್ಎಸ್‌ಕೆಎಮ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಅವರ ಆಸ್ಪತ್ರೆಗೆ ರಾಜೇಶ್ ಬಸ್ಕೆ ಎನ್ನುವವರು ತಮ್ಮ ಎಂಟು ವರ್ಷದ ಮಗಳನ್ನು ದಾಖಲು ಮಾಡಿದ್ದರು. ಕರುಳಿನ ಸಮಸ್ಯೆಯಿಂದ ಆಕೆ ಬಳಲುತ್ತಿದ್ದರು. ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಲಾಯಿತು. ಆದರೆ, ಆಗ ಭಾರತದಲ್ಲಿ ಲಾಕ್ ಡೌನ್ ಘೋಷಣೆ ಆಗಿತ್ತು.

ವೈದ್ಯಕೀಯ ಸಿಬ್ಬಂದಿ ಜೀವದ ಜೊತೆ ಸರ್ಕಾರದ ಚೆಲ್ಲಾಟ: ಎಎಪಿ

ಆ ಸಮಯದಲ್ಲಿ ಆಂಬುಲೆನ್ಸ್‌ಗೆ ಪ್ರಯತ್ನಪಟ್ಟರು ಆಗಲಿಲ್ಲ. ಚಿಕಿತ್ಸೆಗೆ ಹೆಚ್ಚು ಖರ್ಚಾದ ಕಾರಣ ವಾಪಸ್ ಊರಿಗೆ ಹೋಗಲು ಸಹ ಅವರಿಗೆ ಹಣ ಇರಲಿಲ್ಲ. ಆಸ್ಪತ್ರೆಯ ಬಳಿ ಏನು ಮಾಡುವುದು ಎಂದು ಪರದಾಡುತ್ತಿದ್ದ ರಾಜೇಶ್ ಬಸ್ಕೆಯನ್ನು ನೋಡಿ ವೈದ್ಯರೇ ಅವರ ಬಳಿ ಬಂದಿದ್ದಾರೆ. ವಿಷಯ ತಿಳಿದ ನಂತರ ವೈದ್ಯ ಬಬ್ಲು ಸರದಾರ್ ತಾವೇ ಅವರ ಊರಿಗೆ ಬಿಟ್ಟು ಬರುವುದಾಗಿ ತಿಳಿಸುತ್ತಾರೆ.

ಆಸ್ಪತ್ರೆಯಿಂದ ಬಾಲಕಿಯ ಊರು 270 ಕಿಲೋ ಮೀಟರ್ ಇತ್ತು. ಸಂಜೆ ಆರು ಗಂಟೆಗೆ ಆಸ್ಪತ್ರೆಯಿಂದ ಅಪ್ಪ ಮಗಳನ್ನು ಕೂರಿಸಿಕೊಂಡು ಹೊರಟ ಡಾಕ್ಟರ್ ಬೆಳಗಿನ ಜಾವ 3 ಗಂಟೆಗೆ ಅವರನ್ನು ಊರಿಗೆ ತಲುಪಿಸಿದ್ದಾರೆ. ನಂತರ ವಾಪಸ್ ತಮ್ಮ ಮನೆಗೆ ಹೋಗಿದ್ದಾರೆ. ಒಟ್ಟು 540 ಕಿಲೋ ಪ್ರಯಾಣ ಮಾಡಿದ್ದಾರೆ.

ಲಾಕ್ ಡೌನ್ ವೇಳೆ ಬಾಲಕಿಯ ಪರಿಸ್ಥಿತಿ ಅರಿತ ಅವರು ಅವರಿಗಾಗಿ ಕಾರ್ ಡ್ರೈವರ್ ಆಗಿಯೂ ಕೆಲಸ ಮಾಡಿದರೆ, ಹಣ ನೀಡಿ ಸುಮ್ಮನಾಗದೆ, ತಾವೇ ಕಾರ್ ಓಡಿಸಿಕೊಂಡು ಹೋಗಿ ಮನೆ ಸೇರಿಸಿದ್ದಾರೆ. ವೈದ್ಯ ಬಬ್ಲು ಸರದಾರ್ ಹೃದಯವಂತಿಕೆಯನ್ನು ಎಲ್ಲರು ಮೆಚ್ಚಿಕೊಳ್ಳುತ್ತಿದ್ದಾರೆ.

English summary
Lockdown: Bablu Saradar a doctor drives 540 km to drop his poor patient.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X