ಕೋಲ್ಕತ್ತಾದಲ್ಲಿ ಮೋದಿ ಸರ್ಕಾರದ ವಿರುದ್ಧ ಘಟಾನುಘಟಿಗಳ ರಣಕಹಳೆ

ಕೋಲ್ಕತ್ತಾ, ಜನವರಿ 19: 'ಮೋದಿ ಸುಳ್ಳಿನ ಕಾರ್ಖಾನೆ ಇಟ್ಟಿದ್ದಾರೆ', 'ಬಿಜೆಪಿ ಸರ್ಕಾರ ಕಳ್ಳರ ಸರ್ಕಾರ', 'ಎನ್ ಡಿಎ ಸರ್ಕಾರ ದುಬಾರಿ ಸರ್ಕಾರ', 'ಬಿಜೆಪಿ ಸರ್ಕಾರ ದೇಶವನ್ನು ಒಡೆಯುತ್ತಿದೆ' ಇದ್ಯಾದಿ ತರಹೇವಾರಿ ಹೇಳಿಕೆಗಳಿಗೆ ವೇದಿಕೆಯಾಗಿದ್ದು, ಕೋಲ್ಕತ್ತಾದ ಬೃಹತ್ rally!

ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ಹೋರಾಡಲು ವಿಪಕ್ಷಗಳೆಲ್ಲವೂ ಸಿದ್ಧವಾಗಿದ್ದು, ಇಂದು ಒಗ್ಗಟ್ಟು ಪ್ರದರ್ಶನದ ಸಂಕೇತವೆಂಬಂತೆ ಕೋಲ್ಕತ್ತಾದಲ್ಲಿ ಬೃಹತ್ rally ನಡೆದಿದೆ.

ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ rally ಯಲ್ಲಿ ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಶತ್ರುಘ್ನ ಸಿನ್ಹಾ, ಅರುಣ್ ಶೌರಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಂಧ್ರಪ್ರದೇಶ ಮುಖ್ಯಮಂತ್ರಿಚಂದ್ರಬಾಬು ನಾಯ್ಡು, ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ,ಫಾರೂಖ್ ಅಬ್ದುಲ್ಲಾ, ಅಖಿಲೇಶ್ ಯಾದವ್, ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್, ಈನ್ ಸಿಪಿ ಮುಖಂಡ ಶರದ್ ಪವಾರ್, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಭಾಗಿಯಾಗಿ, ಮೋದಿ ಸರ್ಕಾರದ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಈ ಸಭೆಯಲ್ಲಿ ಮಾತನಾಡಿದ ಪ್ರಮುಖ ಮುಖಂಡರ ಮಾತಿನ ಮುಖ್ಯಾಂಶ ಇಲ್ಲಿದೆ.

ಎಚ್ ಡಿ ದೇವೇಗೌಡ

ಎಚ್ ಡಿ ದೇವೇಗೌಡ

"ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಏನು ಮಾಡಿದೆ? ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಗೆಡವಿದೆ. ನಾವು ವಿಪಕ್ಷಗಳೆಲ್ಲವೂ ಒಂದಾಗಿ ಒಂದು ಸುಸ್ಥಿರ ಸರ್ಕಾರ ನೀಡಬಲ್ಲೆವು ಎಂಬುದನ್ನು ತೋರಿಸಿಕೊಂಡಬೇಕು. ಈ ಬಾರಿ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಲು ಬಹುಪಾಲು ಎಲ್ಲ ಪಕ್ಷಗಳೂ ಒಂದಾಗಿವೆ. ನಾನು ಪ್ರಧಾನಿಯಾಗಿದ್ದಾಗ ಹತ್ತೇ ತಿಂಗಳಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೆ. ಪ್ರಧಾನಿಯಾಗುತ್ತಿದ್ದಂತೆಯೇ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದೆ. ರೈತರ ಸಾಲಮನ್ನಾ ಬಗ್ಗೆ ಯೋಚಿಸಿದ್ದೆ. -ಎಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಸುಮಾರು 2 ಕೋಟಿಯಷ್ಟು ಉದ್ಯೋಗಾವಕಾಶ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಇದೀಗ ಹಲವರು ಇರುವ ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ. ಲಂಚ ತೆಗೆದುಕೊಳ್ಳುವುದಿಲ್ಲ, ತೆಗೆದುಕೊಳ್ಳುವುದಕ್ಕೆ ಬಿಡುವುದೂ ಇಲ್ಲ ಎಂದಿದ್ದರು. ಆದರೆ ಉದ್ಯಮಿಗಳಿಗೆ ತಾವೇ ಹಣ ಹೊಡೆಯಲು ಸಹಕಾರ ನೀಡುತ್ತಿದ್ದಾರೆ. ಜಾತ್ಯತೀತ ಮೌಲ್ಯಗಳನ್ನು ಉಳಿಸಲು ನಾವೆಲ್ಲರೂ ಒಂದಾಗಬೇಕಿದೆ, ಒಂದಾಗಿಯೇ ಮುಂದೆ ಸಾಗಬೇಕಿದೆ"- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ

ಎಚ್ ಡಿ ಕುಮಾರಸ್ವಾಮಿ

ಎಚ್ ಡಿ ಕುಮಾರಸ್ವಾಮಿ

"ಕೇಂದ್ರ ಎನ್ ಡಿಎ ಸರ್ಕಾರವನ್ನು ಕೆಳಗಿಳಿಸಲು ಪ್ರಾದೇಶಿಕ ಪಕ್ಷಗಳೆಲ್ಲವೂ ಒಂದಾಗಬೇಕಿದೆ. ಪ್ರಾದೇಶಿಕ ಪಕ್ಷಗಳಿಗೆ ಆಯಾ ರಾಜ್ಯದ ಬೇಕುಬೇಡಗಳ ಬಗ್ಗೆ ಸರಿಯಾದ ಮಾಹಿತಿ ಇರುತ್ತದೆ. ಮಹಾಘಟಬಂಧನ ಯಶಸ್ವಿಯಾಗಿ ಮೋದಿ ಸರ್ಕಾರವನ್ನು ಸೋಲಿಸೋಣ"

-ಎಚ್ ಡಿ ಕುಮಾರಸ್ವಾಮಿ, ಕರ್ನಾಟಕ ಮುಖ್ಯಮಂತ್ರಿ

ಅಖಿಲೇಶ್ ಯಾದವ್

ಅಖಿಲೇಶ್ ಯಾದವ್

"ಈ ಸಮಾವೇಶದ ಮೂಲಕ ದೇಶಕ್ಕೆ ಯಾರನ್ನು ಬೆಂಬಲಿಸಬೇಕು ಎಂಬುದು ಸ್ಪಷ್ಟವಾಗಿ ಅರ್ಥವಾಗಿದೆ. ಈ ವರ್ಷ ದೇಶಕ್ಕೆ ಹೊಸ ಪ್ರಧಾನಿ ಸಿಕ್ಕರೆ ಅದು ದೇಶದ ಸೌಭಾಗ್ಯ. ನಾವು ಸಾಕಷ್ಟು ಪ್ರಧಾನಿ ಅಭ್ಯರ್ಥಿಗಳನ್ನು ಹೊಂದಿದ್ದೇವೆ ಎಂದೇ ಬಿಜೆಪಿ ಟೀಕಿಸುತ್ತಿದೆ. ಅದರಲ್ಲಿ ತಪ್ಪೇನಿದೆ. ಪ್ರಧಾನಿ ಯಾರಾಗಬೇಕು ಎಂಬುದನ್ನು ಜನರು ನಿರ್ಧರಿಸುತ್ತಾರೆ. ನಾವು ಚುನಾವಣೆಯ ಹೊತ್ತಲ್ಲಿ ಜನರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದರೆ, ಬಿಜೆಪಿ ಸಿಬಿಐ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ" -ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ನಾಯಕ

ಎಂಕೆ ಸ್ಟಾಲಿನ್

ಎಂಕೆ ಸ್ಟಾಲಿನ್

"ಮೋದಿ ಎಲ್ಲೇ ಹೋದರೂ ಅವರು ವಿಪಕ್ಷದ ಮೇಲೆ ದಾಳಿ ಮಾಡುತ್ತಾರೆ. ಮೋದಿ ಅವರಿಗೆ ವಿಪಕ್ಷಗಳು ಒಂದಾಗಿರುವುದರಿಂದ ಭಯ ಆರಂಭವಾಗಿದೆ. ಅದಕ್ಕೆಂದೇ ನಮ್ಮ ಮೇಲೆ ಶಾಪ ಹಾಕುತ್ತಿದ್ದಾರೆ. ಭಾರತವನ್ನು ರಕ್ಷಿಸಲು ನಾವೆಲ್ಲ ಒಂದಾಗಬೇಕಿದೆ" -ಎಂ ಕೆ ಸ್ಟಾಲಿನ್, ಡಿಎಂಕೆ ಮುಖಂಡ

ಎಸ್ ಪಿ ಮಿಶ್ರಾ

ಎಸ್ ಪಿ ಮಿಶ್ರಾ

"ಕಾರ್ಖಾನೆಗಳು ಮುಚ್ಚಿವೆ, ರೈತರು ಬೇಸರದಲ್ಲಿದ್ದಾರೆ, ಅಲ್ಪಸಂಖ್ಯಾತರನ್ನು ನೋಯಿಸಲಾಗುತ್ತಿದೆ. ಅಂಥ ಸರ್ಕಾರವನ್ನು ಬೇರು ಸಮೇತ ಕಿತ್ತೆಸೆಯಬೇಕಿದೆ. ನಾವು ಸಂವಿಧಾನವನ್ನು ಕಾಪಾಡಬೇಕೆಂದರೆ ಬಿಜೆಪಿ ಸರ್ಕಾರವನ್ನು ನಿರ್ಮೂಲನೆ ಮಾಡಬೇಕು" - ಎಸ್ ಸಿ ಮಿಶ್ರಾ, ಬಿಎಸ್ಪಿ ನಾಯಕ

ಯಶವಂತ್ ಸಿನ್ಹಾ

ಯಶವಂತ್ ಸಿನ್ಹಾ

ಒಬ್ಬ ವ್ಯಕ್ತಿಯನ್ನು ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶವಾಗಬಾರದು, ಸಿದ್ಧಾಂತವನ್ನು ನಿರ್ಮೂಲನೆ ಮಾಡಬೇಕು- ಯಶವಂತ್ ಸಿನ್ಹಾ, ಬಿಜೆಪಿ ಮಾಜಿ ನಾಯಕ

ಚಂದ್ರಬಾಬು ನಾಯ್ಡು

ಚಂದ್ರಬಾಬು ನಾಯ್ಡು

"ನಮಗೆ ಪ್ರಚಾರದ ಪ್ರಧಾನಿ ಬೇಕಿಲ್ಲ. ಕೆಲಸ ಮಾಡುವ ಪ್ರಧಾನಿ ಬೇಕು. ಬಿಜೆಪಿಯು ಮುದ್ರಾ ಲೋನ್, ಜನಧನ್, ಉತ್ತಮ ಆಡಳಿತ, ಸ್ಮಾರ್ಟ್ ಸುಟೀಸ್, ಉದ್ಯೋಗ, ಅಚ್ಚೆ ದಿನ್ ಎಂಬಿತ್ಯಾದಿ ಘೋಷಣೆಗಳನ್ನು ನೀಡಿದೆಯಷ್ಟೆ, ಆದರೆ ಅವನ್ನು ಕಾರ್ಯರೂಪಕ್ಕೆ ತಂದಿದೆಯಾ? ಅವರ ಮಾತುಗಳು ಭಾಷಣಕ್ಕಷ್ಟೇ ಸೀಮಿತವಾಗಿವೆ" - ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮುಖ್ಯಮಂತ್ರಿ

ತೇಜಸ್ವಿ ಯಾದವ್

ತೇಜಸ್ವಿ ಯಾದವ್

ಮೋದಿ ಸುಳ್ಳಿನ ಕಾರ್ಖಾನೆ ಕಟ್ಟಿದ್ದಾರೆ. ಆ ಕಾರ್ಖಾನೆಯಲ್ಲಿ ಸುಳ್ಳನ್ನು ಉತ್ಪಾದಿಸುವವರು, ಅದರ ಪ್ರಚಾರ ಮಾಡುವವರು, ಅದನ್ನು ಜನರಿಗೆ ಮಾರುವವರು ಎಲ್ಲರೂ ಅವರೇ. ಸಿಬಿಐ ನಂಥ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿರುವ ಅವರಿಗೆ ಬುದ್ಧಿ ಕಲಿಸಬೇಕಿದೆ- ತೇಜಸ್ವಿ ಯಾದವ್, ಆರ್ ಜೆಡಿ ನಾಯಕ

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

"2019 ರಲ್ಲಿ ಪ್ರಧಾನಿ ಯಾರು ಎಂದು ಕೆಲವರು ಕೇಳಿದ್ದಕ್ಕೆ ನಾನು ಉತ್ತರಿಸುತ್ತೇನೆ. ಉಂದಿನ ಪ್ರಧಾಣಿ ಯಾರು ಎಂಬುದು ಪ್ರಶ್ನೆಯಲ್ಲ. ಮೊದಲು ಮೋದಿ ಮತ್ತು ಶಾ ಅವರ ಸಾಮ್ರಾಜ್ಯವನ್ನು ಕಿತ್ತೆಸೆಯುವುದು ನಮ್ಮ ಉದ್ದೇಶ. ಅವರಿಬ್ಬರನ್ನು ಆಚೆ ಕಳಿಸಲು ನಾವೆಲ್ಲ ಒಂದಾಗಿದ್ದೇವೆ" -ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+