ಸತ್ತರೂ ಸರಿ, ಹೋರಾಟ ಬಿಡೆನು: ಮಮತಾ ಬ್ಯಾನರ್ಜಿ

ಕೊಲ್ಕತ್ತ, ಫೆಬ್ರವರಿ 04: ಕೇಂದ್ರ ಸರ್ಕಾರದ ವಿರುದ್ಧ ಟೊಂಕ ಕಟ್ಟಿ ನಿಂತಿರುವ ಮಮತಾ ಬ್ಯಾನರ್ಜಿ ಹೋರಾಟವನ್ನು ಅಂತ್ಯ ಮಾಡುವ ಸಣ್ಣ ಲಕ್ಷಣವೂ ಕಾಣುತ್ತಿಲ್ಲ.

ಕೊಲ್ಕತ್ತ ಪೊಲೀಸ್ ಕಮಿಷನರ್ ಅವರ ನಿವಾಸದ ಮೇಲೆ ದಾಳಿ ಮಾಡಿದ ಸಿಬಿಐ ಅಧಿಕಾರಿಗಳನ್ನೇ ಕೊಲ್ಕತ್ತ ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರ ಪರ ನಿಂತಿದ್ದ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಹೋರಾಟಕ್ಕೆ ಇಳಿದಿದ್ದರು.

'ಪಕ್ಷದ ಮುಖಂಡರ ಮೇಲೆ ಸುಖಾಸುಮ್ಮನೆ ನೀವು ದಾಳಿಗಳು ಮಾಡಿದಾಗ, ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಿದಾಗ ನಾನು ಬೀದಿಗೆ ಇಳಿಯಲಿಲ್ಲ ಆದರೆ ನೀವು ಗಡಿ ದಾಟಿದ್ದೀರಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

 I am ready to give my life but not compromise : Mamata Banerjee

ಅವರು (ಕೇಂದ್ರ ಸರ್ಕಾರ) ಕೊಲ್ಕತ್ತ ಪೊಲೀಸ್ ಕಮಿಷನರ್ ಅವರ ಹುದ್ದೆಗೆ ಅವಮಾನ ಮಾಡಲು ಯತ್ನಿಸಿದೆ, ಇದು ನನಗೆ ಬೇಸರ ತರಿಸಿದೆ ಹಾಗಾಗಿ ನಾನು ಪ್ರತಿಭಟನೆಗೆ ಇಳಿದಿದ್ದೇನೆ ಎಂದು ದೀದಿ ಹೇಳಿದ್ದಾರೆ.

ಪ್ರಾಣ ಹೋದರೂ ಸರಿ ನಾನು ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಎಂದಿರುವ ದೀದಿ, ದೇಶವನ್ನು ಉಳಿಸುವ ವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

ಸಿಬಿಐ-ಕೊಲ್ಕತ್ತ ಪೊಲೀಸರ ಜಟಾಪಟಿಯು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ನಾಳೆಗೆ ವಿಚಾರಣೆ ಮುಂದೂಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+