ಕೊಲ್ಕತ್ತದ ಪ್ರತಿಪಕ್ಷಗಳ ಬೃಹತ್ ಸಮಾವೇಶದಲ್ಲಿ ದೇವೇಗೌಡ ಭಾಗಿ
ಕೊಲ್ಕತ್ತ, ಜನವರಿ 18: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಯೋಜಿಸಿರುವ ಕೇಂದ್ರ ಪ್ರತಿಪಕ್ಷಗಳ ಸಮಾವೇಶದಲ್ಲಿ ಭಾಗವಹಿಸಲು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಇಂದು ಕೋಲ್ಕತ್ತಕ್ಕೆ ತೆರಳಿದ್ದಾರೆ.
ಕೊಲ್ಕತ್ತದಲ್ಲಿ ನಾಳೆ (ಜನವರಿ 19) ರಂದು ವಿರೋಧ ಪಕ್ಷಗಳ ಮಹಾಸಭೆ ನಡೆಯಲಿದ್ದು, ಕೇಂದ್ರದ ಬಿಜೆಪಿಯ ವಿರೋಧ ಪಕ್ಷಗಳು ಹಲವು ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಮಹಾ ಸಭೆಯಲ್ಲಿ ಭಾಗವಹಿಸಲಿವೆ.
ಈಗಾಗಲೇ ಹಲವು ಪಕ್ಷಗಳ ಮುಖಂಡರು ಕೊಲ್ಕತ್ತಕ್ಕೆ ತೆರಳಿದ್ದು, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸಹ ಕೊಲ್ಕತ್ತವನ್ನು ತಲುಪಿದ್ದಾರೆ. ದೇವೇಗೌಡ ಅವರು ಪ್ರಾದೇಶಿಕ ಪಕ್ಷಗಳ ಒಕ್ಕೂಟದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ.

ದೇವೇಗೌಡ ಮಾತ್ರವಲ್ಲದೆ ಸಿಎಂ ಕುಮಾರಸ್ವಾಮಿ ಅವರು ಸಹ ಈ ಬೃಹತ್ ಸಭೆಯಲ್ಲಿ ಭಾಗವಹಿಸುತ್ತಿದ್ದು, ಅವರು ನಾಳೆ ಕೊಲ್ಕತ್ತಗೆ ಪ್ರಯಾಣ ಬೆಳೆಸಿ ಸಮಾವೇಶದಲ್ಲಿ ಹಾಜರಿರಲಿದ್ದಾರೆ.
ನಾಳಿನ ಮಹಾ ಸಭೆಯು ಬಿಜೆಪಿಗೆ ಮರಣ ಮೃದಂಗ ಎಂದು ಈಗಾಗಲೇ ಮಮತಾ ಬ್ಯಾನರ್ಜಿ ಅವರು ಘೋಷಿಸಿದ್ದು, ನಾಳಿನ ಸಮಾವೇಶದ ಮೇಲೆ ದೇಶದ ಕಣ್ಣು ನೆಟ್ಟಿದೆ.












Click it and Unblock the Notifications