ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ಸಹಿತ ಟಿಎಂಸಿ ಮುಖಂಡನ ಮನೆಯಲ್ಲಿ ಮಲಗಿದ್ದ ಅಧಿಕಾರಿ ಅಮಾನತು

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 6: ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣೆ ಇಂದು ನಡೆಯುತ್ತಿದ್ದು, ಇದಕ್ಕೂ ಮುನ್ನ ಸೋಮವಾರ ರಾತ್ರಿ ತೃಣಮೂಲ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ನಾಲ್ಕು ಇವಿಎಂ ಮತಯಂತ್ರಗಳು ಹಾಗೂ ನಾಲ್ಕು ವಿವಿಪ್ಯಾಟ್ ‌ಗಳು ಪತ್ತೆಯಾಗಿವೆ.

ಉಲುಬೆರಿಯಾ ಉತ್ತರ ಕ್ಷೇತ್ರದಲ್ಲಿನ ಟಿಎಂಸಿ ಮುಖಂಡನ ನಿವಾಸದಲ್ಲಿ ಈ ಯಂತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಅಸ್ಸಾಂ: 90 ಮತದಾರರ ಮತಗಟ್ಟೆಯಲ್ಲಿ 181 ಮತ ಚಲಾವಣೆ; 6 ಅಧಿಕಾರಿಗಳು ಅಮಾನತು!ಅಸ್ಸಾಂ: 90 ಮತದಾರರ ಮತಗಟ್ಟೆಯಲ್ಲಿ 181 ಮತ ಚಲಾವಣೆ; 6 ಅಧಿಕಾರಿಗಳು ಅಮಾನತು!

ತುಳಸಿಬೆರಿಯಾದಲ್ಲಿನ ಟಿಎಂಸಿ ಮುಖಂಡ ಗೌತಮ್ ಘೋಷ್ ಅವರ ನಿವಾಸದಿಂದ ಈ ಇವಿಎಂ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಸದಸ್ಯ ಚಿರಾನ್ ಬೇರಾ ಆರೋಪಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾರಿನಲ್ಲೇ ಈ ಯಂತ್ರಗಳನ್ನು ತರಲಾಗಿದೆ. "ಸೆಕ್ಟರ್ 17"ರ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾರು ಟಿಎಂಸಿ ಮುಖಂಡನ ಮನೆ ಮುಂದೆ ರಾತ್ರಿ ನಿಂತಿತ್ತು ಎಂದು ಆರೋಪಿಸಿದ್ದಾರೆ.

Four EVMs And VVPATs Found At TMC Leader Home In Uluberia

ಆದರೆ ತಡರಾತ್ರಿಯಾದ್ದರಿಂದ ಚುನಾವಣಾ ಸಿಬ್ಬಂದಿ ಮಲಗಿದ್ದರು. ಮತಗಟ್ಟೆಗಳನ್ನು ತೆರೆಯಲಿಲ್ಲ. ಹಾಗಾಗಿ ಸಂಬಂಧಿ ಮನೆಗೆ ಮಲಗಲು ಬಂದಿದ್ದೆ ನನ್ನ ಜೊತೆಗೆ ಯಂತ್ರಗಳನ್ನು ಇಲ್ಲಿಟ್ಟಿದ್ದೆ ಎಂದು ವಲಯಾಧಿಕಾರಿ ಉತ್ತರಿಸಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾತ್ರೋರಾತ್ರಿ ಜನರು ಜಮಾಯಿಸಿದ್ದಾರೆ. ಜನರನ್ನು ಚದುರಿಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಟಿಎಂಸಿ ಮುಖಂಡನ ಮನೆಯಲ್ಲಿರಿಸಲಾಗಿದ್ದ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಲಯಾಧಿಕಾರಿ ಅಮಾನತು; ಈ ಘಟನೆ ಸಂಬಂಧ ವಲಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಚುನಾವಣಾ ಆಯೋಗದ ಮೂಲದ ಪ್ರಕಾರ, ಮತಗಟ್ಟೆ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದು, ಆದೇಶವು ಸ್ವಲ್ಪ ಸಮಯದಲ್ಲೇ ಬರಲಿದೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇಂದು 31 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

English summary
Four Electronic Voting Machines (EVMs) and four voter-verifiable paper audit trail (VVPATs) found at a Trinamool Congress (TMC) leader’s residence in Uluberia North constituency on monday night
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X