ಲೋಕಸಭೆಗೆ ಬಿಜೆಪಿಗೆ ಕೌಂಟ್ ಡೌನ್ ಶುರುವಾಗಿದೆ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಡಿಸೆಂಬರ್ 11: ಇದು ಜನರ ತೀರ್ಪು ಮತ್ತು ಅವರ ಗೆಲುವು ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಮೂರು ರಾಜ್ಯಗಳ (ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಗಢ) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ ಹಿನ್ನೆಲೆಯಲ್ಲಿ, ಲೋಕಸಭೆ ಚುನಾವಣೆಗೆ ಮುನ್ನ ಪ್ರಮುಖ ಕದನವಾದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶವನ್ನು ಹೀಗೆ ಬಣ್ಣಿಸಿದ್ದಾರೆ.

ಮೂರೂ ರಾಜ್ಯಗಳಲ್ಲಿ ಕಳೆದ ಬಾರಿ ಬಿಜೆಪಿ ಜಯಗಳಿಸಿತ್ತು. ಕಳೆದ ಬಾರಿಯ ಲೋಕಸಭೆ ಚುನಾವಣೆ ವೇಳೆಯಲ್ಲಿ ಈ ರಾಜ್ಯಗಳಿಂದ ಸೇರಿ ಅರವತ್ತರಿಂದ ಅರವತ್ತೈದು ಸ್ಥಾನಗಳನ್ನು ಬಿಜೆಪಿ ಜಯ ಗಳಿಸಿತ್ತು.

ಇದು ಪ್ರಜಾಪ್ರಭುತ್ವದ ಗೆಲುವು. ಅನ್ಯಾಯ, ದೌರ್ಜನ್ಯ, ಸಂವಿಧಾನ ಸಂಸ್ಥೆಗಳ ನಾಶ, ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ, ಬಡವರಿಗೆ, ರೈತರಿಗೆ, ಯುವಜನರಿಗೆ, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಿಗೆ ಯಾವುದೇ ಕೆಲಸ ಮಾಡದಿರುವುದರ ವಿರುದ್ಧದ ಗೆಲುವು ಎಂದು ಮಮತಾ ಹೇಳಿದ್ದಾರೆ.

Countdown for LS polls begins, says Mamata Banerjee on BJP’s setback in state elections

ಲೋಕಸಭೆಗೆ ಮುನ್ನ ಸೆಮಿಫೈನಲ್ ಎನಿಸುವ ಈ ಚುನಾವಣೆ ಫಲಿತಾಂಶದ ಮೂಲಕ ಯಾವುದೇ ರಾಜ್ಯದಲ್ಲಿ ಬಿಜೆಪಿ ಇಲ್ಲ ಎಂಬುದು ಸಾಬೀತಾಗಿದೆ. ಲೋಕಸಭೆ ಚುನಾವಣೆ ಫೈನಲ್ ಗೆ ಮುನ್ನ ಇದು ನಿಜವಾದ ಪ್ರಜಾಪ್ರಭುತ್ವ ಸೂಚನೆ. ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಜನರೇ 'ಮ್ಯಾನ್ ಆಫ್ ದ ಮ್ಯಾಚ್'. ವಿಜಯಿಗಳಿಗೆ ನನ್ನ ಅಭಿನಂದನೆಗಳು ಎಂದು ಮಮತಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+