ಕೋಲ್ಕತ್ತಾದಲ್ಲಿ ಬಂದಿದೆ 'ಕೊರೊನಾ' ಹೆಸರಿನ ಸ್ವೀಟ್!
ಕೋಲ್ಕತ್ತಾ, ಏಪ್ರಿಲ್ 07 : ಯಾವುದಾದರೂ ಹೆಸರು ವೈರಲ್ ಆದಾಗ ಆ ಹೆಸರಿನ ವಿವಿಧ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಪ್ರಸ್ತುತ ದೇಶ, ವಿದೇಶದಲ್ಲಿ 'ಕೊರೊನಾ' ಎಂಬ ಹೆಸರು ಎಲ್ಲರಿಗೂ ಚಿರಪರಿಚಿತವಾಗಿದೆ.
Recommended Video
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 'ಕೊರೊನಾ' ಹೆಸರಿನ ಸಿಹಿ ತಿನಿಸು ಮಾರುಕಟ್ಟೆಗೆ ಬಂದಿದೆ. ಕೊರೊನಾ ವೈರಸ್ ಮಾದರಿಯಲ್ಲಿ ವಿವಿಧ ಬಣ್ಣಗಳನ್ನು ಈ ಸ್ವೀಟ್ ಹೊಂದಿದ್ದು ನೋಡಲು ಆಕರ್ಷಕವಾಗಿದೆ.
'ಕೊರೊನಾ' ಹೆಸರಿನ ಸಿಹಿ ತಿನಿಸನ್ನು ಅಂಗಡಿಯಲ್ಲಿ ಗ್ರಾಹಕರಿಗೆ ಉಚಿತವಾಗಿ ನೀಡಲಾಗುತ್ತಿದೆ. ಕೊರೊನಾದಿಂದ ಎಲ್ಲರೂ ಸುರಕ್ಷಿತವಾಗಿರಿ ಎಂಬ ಸಂದೇಶವನ್ನು ಸಾರಲು ಉಚಿತವಾಗಿ ನೀಡಲಾಗುತ್ತಿದೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.

"ನಾವೆಲ್ಲರೂ ಕೊರೊನಾ ವಿರುದ್ಧ ಹೋರಾಡಿ ಅದನ್ನು ಜೀರ್ಣಿಸಿಕೊಳ್ಳುತ್ತೇವೆ. ಇತಹ ಸಂದೇಶವನ್ನು ನೀಡುವ ಮೂಲಕ ಜನರಲ್ಲಿ ಸ್ಫೂರ್ತಿ ತುಂಬುವುದು ನಮ್ಮ ಉದ್ದೇಶವಾಗಿದೆ" ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ವಿವಿಧ ಬಣ್ಣಗಳ ಮೂರು ಬಗೆಯ 'ಕೊರೊನಾ' ಸಿಹಿ ತಿಂಡಿಗಳು ಮಾರುಕಟ್ಟೆಯಲ್ಲಿವೆ. ಚಿಕ್ಕ ಮತ್ತು ದೊಡ್ಡ ಸಿಹಿ ತಿಂಡಿಗಳು ಲಭ್ಯವಿದೆ. ಸಾಮಾನ್ಯವಾಗಿ ಸಿಗುವ ಸಿಹಿ ತಿಂಡಿಗಳ ನಡುವೆ 'ಕೊರೊನಾ' ಎಲ್ಲರ ಗಮನವನ್ನು ಸೆಳೆಯುತ್ತಿದೆ. ಗ್ರಾಹಕರು ಕುತೂಹಲದಿಂದ ಅವುಗಳನ್ನು ವೀಕ್ಷಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಇದುವರೆಗೂ 80 ಕೊರೊನಾ ಪ್ರಕರಣಗಳು ದಾಖಲಾಗಿವೆ. ಮೂವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ಕೋಲ್ಕತ್ತಾದಲ್ಲಿ ಬೇಕರಿ, ಸಿಹಿ ತಿನಿಸುಗಳ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.












Click it and Unblock the Notifications