ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸಂಸದೆ ಮೇಲೆ ಹಾನಿಕಾರಕ ಬಣ್ಣ ಎಸೆತ, ಟಿಎಂಸಿ ವಿರುದ್ಧ ಆರೋಪ

|
Google Oneindia Kannada News

ಹೂಗ್ಲಿ, ಮಾರ್ಚ್ 28: ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಮೇಲೆ ಹಾನಿಕಾರಕ ರಾಸಾಯನಿಕ ಬಣ್ಣವನ್ನು ಎರಚಿರುವ ಘಟನೆ ನಡೆದಿದೆ.

ಹಾನಿಕಾರಕ ರಾಸಾಯನಿಕ ಒಳಗೊಂಡಿದ್ದ ಬಣ್ಣವನ್ನು ತಮ್ಮ ಮೇಲೆ ಹೂಗ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಎರಚಿದ್ದಾರೆ ಎಂದು ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಆರೋಪಿಸಿದ್ದಾರೆ.

ಕೊಲೆ ಪ್ರಕರಣ: ಎನ್‌ಐಎಯಿಂದ ಟಿಎಂಸಿ ಮುಖಂಡನ ಬಂಧನಕೊಲೆ ಪ್ರಕರಣ: ಎನ್‌ಐಎಯಿಂದ ಟಿಎಂಸಿ ಮುಖಂಡನ ಬಂಧನ

ಈ ಮಧ್ಯೆ ಪ್ರತಿಕ್ರಿಯಿಸಿರುವ ಬಿಜೆಪಿ ಈ ದಾಳಿಯನ್ನು ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ಎಸಗಿದ್ದಾರೆ ಎಂದು ನೇರವಾಗಿ ಆರೋಪಿಸಿದೆ. ಕೊಡಾಲಿಯಾ ನಂ .2 ರ ಜಿ.ಪಿ.ಪ್ರಧಾನ್ ಬಿಡಿಯುತ್ ಬಿಸ್ವಾಸ್ ನೇತೃತ್ವದ ಟಿಎಂಸಿ ಗೂಂಡಾಗಳು ಚಿನ್ಸುರಾ ಅಸೆಂಬ್ಲಿಯ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ದ್ವೇಷ, ಹಿಂಸೆ ಮತ್ತು ಕಿರುಕುಳದ ಟಿಎಂಸಿ ಆಟ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 Colour Containing Harmful Chemical Thrown At Locket Chatterjee In Hooghly

ಒರಟಾದ ವಸ್ತುವನ್ನು ನನ್ನ ಮೇಲೆ ಎಸೆಯಲಾಯಿತು. ಅದನ್ನು ಎಸೆದವರು ಯಾರು ಎಂದು ನಾನು ನೋಡಿದಾಗ, ಟಿಎಂಸಿ ಬ್ಯಾಡ್ಜ್ ಧರಿಸಿದ 3-4 ಜನರು ಹತ್ತಿರದಲ್ಲಿ ನಿಂತಿರುವುದನ್ನು ನಾನು ನೋಡಿದೆ, ಅವರೇ ಬಣ್ಣದ ನೀರು ಎರಚಿದ್ದಾರೆ ಎಂದು ಚಟರ್ಜಿ ಆರೋಪಿಸಿದರು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಹೂಗ್ಲಿ ಜಿಲ್ಲೆಯ ಚಿನ್ಸುರ ಕ್ಷೇತ್ರದಿಂದ ಲಾಕೆಟ್ ಚಟರ್ಜಿ ಸ್ಪರ್ಧಿಸುತ್ತಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುವ ಈ ಹೇಡಿತನದ ಆಟ ಟಿಎಂಸಿಯ ಸೋಲಿನ ಭಯದಿಂದ ಎಂದು ಟ್ವೀಟ್ ಮಾಡಿದೆ.

English summary
BJP MP Locket Chatterjee alleged that colour containing 'harmful chemical' was thrown on her face at an event in West Bengal’s Hoogly on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X