ಪಶ್ಚಿಮ ಬಂಗಾಳ: ಅವಧಿಗೆ ಮುನ್ನಾ ಪ್ರಚಾರ ಅಂತ್ಯಕ್ಕೆ ಆಯೋಗ ಆದೇಶ
ಕೊಲ್ಕತ್ತ, ಮೇ 15: ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿನ್ನೆ ಚುನಾವಣಾ ಪ್ರಚಾರದ ನಂತರ ನಡೆದ ಹಿಂಸಾಚಾರ ನಡೆದ ಕಾರಣ ಚುನಾವಣಾ ಆಯೋಗವು ಒಂದು ದಿನ ಮುಂಚಿತವಾಗಿಯೇ ಬಹಿರಂಗ ಪ್ರಚಾರವನ್ನು ಮೊಟಕುಗೊಳಿಸುವಂತೆ ಆದೇಶ ಹೊರಡಿಸಿದೆ.
ಪಶ್ಚಿಮ ಬಂಗಾಳದಲ್ಲಿ ಮೇ 19 ರಂದು ಕೊನೆಯ ಹಂತದ ಮತದಾನ ನಡೆಯುತ್ತಿತ್ತು, ನಿಯಮದ ಪ್ರಕಾರ ಮೇ 17 ಕ್ಕೆ ಚುನಾವಣಾ ಪ್ರಚಾರ ಅಂತ್ಯವಾಗಬೇಕಿತ್ತು, ಆದರೆ ಮೇ 16 ರಂದೇ ರಾಜ್ಯದಲ್ಲಿ ಚುನಾವಣಾ ಬಹಿರಂಗ ಪ್ರಚಾರವನ್ನು ಅಂತ್ಯ ಮಾಡುವಂತೆ ಆದೇಶ ಹೊರಡಿಸಲಾಗಿದೆ.

ಮೇ 16 ರಂದು ರಾತ್ರಿ 10 ಗಂಟೆಗೆ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಬಹಿರಂಗ ಚುನಾವಣಾ ಪ್ರಚಾರವನ್ನು ಅಂತ್ಯಗೊಳಿಸಬೇಕಿದೆ. ಮತದಾನವು ಈ ಮುಂಚಿನಂತೆ ಮೇ 19ರಂದೇ ನಡೆಯಲಿದೆ.
ನಿನ್ನೆ ಅಮಿತ್ ಶಾ ಅವರ ರೋಡ್ ಶೋ ಬಳಿಕ ಕೊಲ್ಕತ್ತದಲ್ಲಿ ಭಾರಿ ಹಿಂಸಾಚಾರ ನಡೆದಿತ್ತು, ಹಲವರು ಗಾಯಗೊಂಡಿದ್ದರು, ಸುಧಾರಕರಾದ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.












Click it and Unblock the Notifications