ಬಂಗಾಳ ಚುನಾವಣೆ: ಟಿಎಂಸಿಯ ಪ್ರಣಾಳಿಕೆ ಬಿಡುಗಡೆ ಮಾಡಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಮಾರ್ಚ್ 17: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಟಿಎಂಸಿಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ತಾವು ಪಶ್ಚಿಮ ಬಂಗಾಳದಲ್ಲಿ ಮತ್ತೆ ಆಯ್ಕೆಯಾಗಿ ಬಂದರೆ ಯಾವ್ಯಾವ ಕಾರ್ಯವನ್ನು ಮಾಡುತ್ತೇವೆ ಎನ್ನುವ ಕುರಿತು ತಿಳಿಸಿದ್ದಾರೆ. ಒಂದೊಮ್ಮೆ ಟಿಎಂಸಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳದಲ್ಲಿ ವರ್ಷಕ್ಕೆ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುವುದು ಎಂದು ಹೇಳಿದ್ದಾರೆ.

ನಿಮಗೇ ತಿಳಿದಿದೆ, ನಾವು ಅಧಿಕಾರಕ್ಕೆ ಬಂದ ಬಳಿಕ ಈ ಮೊದಲು ನೀಡಿದ್ದ ಆಶ್ವಾಸನೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸಿದ್ದೇವೆ ಎಂದು ಮಮತಾ ಹೇಳಿದ್ದಾರೆ.

Bengal Election: Mamata Banerjee Releases TMC Manifesto

ನಮ್ಮ ರಾಜ್ಯದಲ್ಲಿ 100 ದಿನ ಕೆಲಸ ನೀಡುತ್ತೇವೆ, ಬಡತನವನ್ನು ಶೇ.40ರಷ್ಟು ಕಡಿಮೆ ಮಾಡಿದ್ದೇವೆ, ರೈತರ ಆದಾಯವನ್ನು ಮೂರು ಪಟ್ಟು ಹೆಚ್ಚಿಸಿದ್ದೇವೆ. ಮಾರ್ಚ್ 9 ರಂದೇ ಪ್ರಣಾಳಿಕೆ ಬಿಡುಗಡೆ ಮಾಡಬೇಕಿತ್ತು, ಮಾರ್ಚ್ 10 ರಂದು ಮಮತಾ ನಾಮಪತ್ರ ಸಲ್ಲಿಸಿದರು.

ಮಾರ್ಚ್ 11 ರಂದು ಪ್ರಣಾಳಿಕೆ ಬಿಡುಗಡೆ ಮಾಡಬೇಕಿತ್ತು ಆದರೆ ಮಮತಾ ಅವರ ಕಾಲಿಗೆ ಗಾಯವಾಗಿದ್ದ ಕಾರಣ ಮುಂದೂಡಬೇಕಾಯಿತು. ಮಾರ್ಚ್ 5 ರಂದು ಮಮತಾ 291 ಟಿಎಂಸಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು.

ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27 ರಂದು ಚುನಾವಣೆ ಆರಂಭವಾಗಲಿದ್ದು, ಏಪ್ರಿಲ್ 29ರವರೆಗೆ ನಡೆಯಲಿದೆ. ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

* ರಾಜ್ಯದಲ್ಲಿ 25800 ಮಾ ಕ್ಯಾಂಟೀನ್ ಮೂಲಕ ಕಡಿಮೆ ದರದಲ್ಲಿ 75 ಕೋಟಿ ಊಟ
* ಪ್ರತಿ ವರ್ಷ 5 ಲಕ್ಷದಷ್ಟು ಉದ್ಯೋಗ ಸೃಷ್ಟಿ
*1.5 ಕೋಟಿ ಜನತೆಗೆ ಖಾದ್ಯ ಸಾಥಿ ಮೂಲಕ ಮನೆ ಮನೆಗೆ ಪಡಿತರ ವಿತರಣೆ
*ಪ್ರತಿ ಮನೆಗೂ ಪೈಪ್‌ಲೈನ್ ಮೂಲಕ ನೀರು ಸರಬರಾಜು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+