• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನಪ್ರಿಯ ನಟಿ ಪಾಯಲ್ ಸರ್ಕಾರ್ ಬಿಜೆಪಿಗೆ ಸೇರ್ಪಡೆ

|

ಕೋಲ್ಕತಾ, ಫೆಬ್ರವರಿ 25: ಚುನಾವಣೆ ಸಂದರ್ಭದಲ್ಲಿ ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೆಳೆಯುವ ತಂತ್ರವನ್ನು ಬಿಜೆಪಿ ಮುಂದುವರೆಸಿದೆ. ಜನಪ್ರಿಯ ಬೆಂಗಾಲಿ ನಟಿ ಪಾಯಲ್ ಸರ್ಕಾರ್ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ) ಕ್ಕೆ ಸೇರ್ಪಡೆಗೊಂಡಿದ್ದಾರೆ.

ಕೋಲ್ಕತಾದ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಶ್ ಸಮ್ಮುಖದಲ್ಲಿ ಪಾಯಲ್ ಅವರು ಕೇಸರಿ ಪಡೆ ಸೇರಿಕೊಂಡರು. ಪಾಯಲ್ ಅಲ್ಲದೆ ನಟ ಯಶ್ ದಾಸ್ ಗುಪ್ತಾ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯ ವರ್ಗಿಯಾ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್, ರಾಜ್ಯಸಭಾ ಸದಸ್ಯ ಸ್ವಪನ್ ದಾಸ್ ಗುಪ್ತಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾಜಿ ಕ್ರಿಕೆಟರ್ ಅಶೋಕ್ ದಿಂಡಾ ಅವರನ್ನು ಬಿಜೆಪಿಗೆ ಸೆಳೆಯುವಲ್ಲಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಯಶಸ್ವಿಯಾಗಿದ್ದು, ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಸಮ್ಮುಖದಲ್ಲಿ ದಿಂಡಾ ಬಿಜೆಪಿ ಸೇರಿದ್ದಾರೆ.

ಬುಧವಾರದಂದು ಕ್ರಿಕೆಟರ್ ಮನೋಜ್ ತಿವಾರಿ ಹಾಗೂ ಮೂವರು ಸಿನಿಮಾ ಸೆಲೆಬ್ರಿಟಿಗಳು ತೃಣಮೂಲ ಕಾಂಗ್ರೆಸ್ ಸೇರ್ಪಡೆಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಖುದ್ದು ಸಿಎಂ ಮಮತಾ ಬ್ಯಾನರ್ಜಿ ಅವರು ಎಲ್ಲರನ್ನು ಪಕ್ಷಕ್ಕೆ ಸ್ವಾಗತಿಸಿದ್ದರು. ನಟ ರಾಜ್ ಚಕ್ರವರ್ತಿ, ಕಂಚನ್ ಮಲೀಕ್, ಸಯೋನಿ ಘೋಶ್ ಕೂಡಾ ಟಿಎಂಸಿ ತೆಕ್ಕೆಗೆ ಬಿದ್ದಿದ್ದಾರೆ.

294 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಬೇಕಿದೆ. ಹಾಲಿ ವಿಧಾನಸಭೆ ಅವಧಿ ಮೇ 30ಕ್ಕೆ ಮುಕ್ತಾಯವಾಗಲಿದೆ.

English summary
Actor Payel Sarkar joined the Bharatiya Janata Party (BJP) in the presence of Dilip Ghosh, BJP's Bengal unit chief, in Kolkata on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X