ಆಹಾರ ಸಿಗದೆ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡಿದ 400 ಕುಟುಂಬಗಳು

ಕೊಲ್ಕತ್ತಾ, ಏಪ್ರಿಲ್ 15: ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ವಲಸೆ ಕಾರ್ಮಿಕರಿಗೆ, ದಿನಗೂಲಿ ಕಾರ್ಮಿಕರಿಗೆ, ದೈನಂದಿನ ಕಾರ್ಮಿಕರಿಗೆ ಭಾರಿ ಕಷ್ಟವಾಗಿದೆ. ಅದರಲ್ಲೂ ಪಡಿತರ ಮತ್ತು ಊಟದ ಸಮಸ್ಯೆ ಪ್ರಮುಖವಾಗಿ ಕಂಡುಬರುತ್ತಿದೆ.

ಪಡಿತರ ಸಿಗದ ಕಾರಣ ಪಶ್ಚಿಮ ಬಂಗಾಳದಲ್ಲಿ ಸುಮಾರು 400 ಕುಟುಂಬಗಳು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯ ಡೊಮ್ಕಲ್ ಪುರಸಭೆ ಪ್ರದೇಶದಲ್ಲಿ ಸುಮಾರು 3 ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಲಾಗಿತ್ತು. '21 ದಿನಗಳ ಲಾಕ್‌ಡೌನ್‌ ವೇಳೆ ಯಾರಿಗೂ ಪಡಿತರ ಸಿಕ್ಕಿಲ್ಲ, ನಾವು ಹೇಗೆ ಜೀವನ ಮಾಡುವುದು' ಎಂದು ಆಕ್ರೋಶ ವ್ಯಕ್ತಪಡಿಸಿದರು. ಇವರಲ್ಲಿ ಬಹುಪಾಲು ಜನರು ಮಾಸ್ಕ್‌ ಧರಿಸಿಲ್ಲ.

ನಂತರ ಸ್ಥಳಕ್ಕೆ ಬಂದು ಸ್ಥಳೀಯ ಆಡಳಿತ ಮಂಡಳಿ, ಬಿಪಿಎಲ್ ಕಾರ್ಡ್‌ದಾರರಿಗೆ ಪಡಿತರ ಕೊಟ್ಟಿಲ್ಲ ಎಂದು ಒಪ್ಪಿಕೊಂಡರು. ಅಂದ್ಹಾಗೆ, ಪಶ್ಚಿಮ ಬಂಗಾಳದಲ್ಲಿ ಬಡವರಿಗೆ ಉಚಿತ ಪಡಿತರ ನೀಡಲಾಗಿತ್ತು. ಆದರೆ, ಪಶ್ಚಿಮ ಬಂಗಾಳದಲ್ಲಿ ಪಡಿತರ ಕೊರತೆ ಇದೆ ಎಂಬ ಮಾತಿದೆ.

400 Families Protested In Bengal Highway For Not Getting Food

ಈ ಬಗ್ಗೆ ಮಾತನಾಡಿದ ಆಹಾರ ಸಚಿವ ''ನಮ್ಮಲ್ಲಿ ಪಡಿತರ ಕೊರತೆ ಇಲ್ಲ. ಸುಮಾರು 9.45 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಆಹಾರ ಸಂಗ್ರಹಣೆ ಮಾಡಲಾಗಿದೆ. ರೈತರಿಂದ ನೇರವಾಗಿ ನಾವು ಅಕ್ಕಿ-ಬೇಳೆ ಖರೀದಿಸಿದ್ದೇವೆ. ಆಗಸ್ಟ್ ತಿಂಗಳವರೆಗೂ ಪಡಿತರ ನೀಡಬಹುದು ಎಂದು ಹೇಳಿದರು.

ನಂತರ ಡೊಮ್ಕಲ್ ಪುರಸಭೆ ಅಧ್ಯಕ್ಷ ಸ್ಥಳಕ್ಕೆ ಧಾವಿಸಿ, ಪ್ರತಿಭಟನೆ ಕೈಬಿಡುವಂತೆ ಮನವರಿಕೆ ಮಾಡಿಕೊಟ್ಟರು. 'ಈ ಪ್ರದೇಶದಲ್ಲಿ 1.57 ಲಕ್ಷ ಬಿಜನರು ವಾಸಿಸುತ್ತಿದ್ದಾರೆ. ಶೇಕಡಾ 69 ರಷ್ಟು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಬಡಜನರ ಹಂಚಿಕೆಗಾಗಿ ನಾವು ಸರ್ಕಾರದಿಂದ 42 ಕ್ವಿಂಟಾಲ್ ಅಕ್ಕಿ ಪಡೆದಿದ್ದೇವು. ಹೆಚ್ಚಿನ ಸರಬರಾಜು ಬರುತ್ತಿದೆ'' ಎಂದು ತಿಳಿಸಿದರು.

'ಸ್ಥಳೀಯ ಪಡಿತರ ವ್ಯಾಪಾರಿ ಜನರಿಗೆ ಅರ್ಹವಾದ ಪಡಿತರ ಕೋಟಾವನ್ನು ನೀಡಿಲ್ಲ ಎಂದು ನಾನು ತಿಳಿದುಕೊಂಡಿದ್ದೇನೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಕುಟುಂಬಗಳಿಗೆ 10 ಕೆಜಿ ಅಕ್ಕಿ ಮತ್ತು 5 ಕೆಜಿ ಆಲೂಗಡ್ಡೆ ಭರವಸೆ ನೀಡಿದ್ದೇನೆ" ಎಂದು ಅಧಿಕಾರಿ ಇಸ್ಲಾಂ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+