ಜಾಗತಿಕವಾಗಿ ಮೂರು ಗಂಡಾಂತರ, ಜೈನ ಮುನಿಗಳ ಹತ್ಯೆ ಬಗ್ಗೆ ಕೋಡಿ ಮಠದ ಸ್ವಾಮೀಜಿ ಹೇಳಿದ್ದೇನು?
ಜೈನ ಮುನಿಗಳ ಹತ್ಯೆಯ ಬಗ್ಗೆ ಕೋಡಿ ಮಠದ ಸ್ವಾಮೀಜಿ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ದೇಶದಲ್ಲಿ ಇನ್ನೂ ಹಲವೆಡೆ ಪ್ರಾಕೃತಿಕ ವಿಕೋಪ ಸಂಭವಿಸುವ ಲಕ್ಷಣ ಇದೆ. ಜೊತೆಗೆ ಮನುಷ್ಯರು ಮೃಗದಂತೆ ವರ್ತಿಸಿ ವಿಕೋಪ ಸಂಭವಿಸಬಹುದು ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಕೋಡಿಮಠದ ಶ್ರೀಗಳು ನುಡಿಯುವ ಭವಿಷ್ಯವಾಣಿಗಳಲ್ಲಿ ಬಹುತೇಕ ನಿಜವಾಗಿವೆ. ಹಾಗಾಗಿ, ಅವರ ಭವಿಷ್ಯ ವಾಣಿಗಳಿಗೆ ತುಂಬಾ ಪ್ರಾಮುಖ್ಯವಿದೆ. ಸದ್ಯ ಮತ್ತೊಂದು ಭವಿಷ್ಯ ನುಡಿದಿದ್ದು ಭಾರೀ ಸಂಚಲ ಮೂಡಿಸಿದೆ. ಕೋಲಾರದ ಲಕ್ಷ್ಮೀಸಾಗರ ಗ್ರಾಮದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ, ದೇಶದಲ್ಲಿ ಇನ್ನಷ್ಟು ರೋಗ ರುಜಿನ ಹೆಚ್ಚುವ ಲಕ್ಷಣಗಳಿವೆ ಎಂದು ತಿಳಿಸಿದ್ದಾರೆ.

ಜೈನ ಮುನಿಗಳ ಹತ್ಯೆ ನಡೆಯಬಾರದಿತ್ತು. ಆದರೆ ನಡೆದು ಹೋಯಿತು. ಮುಂದೆ ಆಗದಂತೆ ಎಚ್ಚರ ವಹಿಸಬೇಕು ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು. ಈ ಘಟನೆಯಿಂದ ಸರ್ವಸಂಗ ಪರಿತ್ಯಾಗಿಗಳಿಗೂ ಕಂಟಕ ಇದೆಯೆಂದು ತಿಳಿದಿದೆ. ಅಂಥವರಿಗೇ ಕಂಟಕ ಇದ್ದರೆ ಯಾರನ್ನೂ ತಾನೇ ಬಿಡಬಹುದು? ಮನುಷ್ಯನ ಕ್ರೌರ್ಯಕ್ಕೆ ಜೈನಮುನಿಗಳ ಕೊಲೆಯೊದು ಉದಾಹರಣೆ ಎಂದು ತಿಳಿಸಿದರು.
ಇದೇ ವೇಳೆ ರಾಜಕೀಯ ಭವಿಷ್ಯವನ್ನೂ ಶ್ರೀಗಳು ನುಡಿದಿದ್ದಾರೆ. ಸದ್ಯ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಕಂಟಕ ಇಲ್ಲ. ಈಗಷ್ಟೇ ಮಗು ಹಾಲು ಕುಡಿಯಲು ಆರಂಭಿಸಿದೆ. ಮಗು ಚೆನ್ನಾಗಿ ಬೆಳೆಯಲಿ, ಯಾವ ತೊಂದರೆಯೂ ಇಲ್ಲ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಏಕಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರು. ಅವರ ನುಡಿದಂತೆ ರಾಕ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಅಧಿಕಾರಕ್ಕೆ ಬಂದಿದೆ.

ಇದಲ್ಲದೆ ಜಾಗತಿಕ ಮಟ್ಟದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗಳ ಬಗ್ಗೆ ಕೋಡಿ ಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜಾಗತಿಕವಾಗಿ ಮೂರು ಗಂಡಾಂತರ ಕಾದಿದ್ದು, ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರ ಅಕಾಲಿಕ ಮೃತ್ಯ ಆಗುವ ಸೂಚನೆ ಇದೆ ಎಂದು ಅವರು ಈ ಹಿಂದೆ ತಿಳಿಸಿದ್ದರು.
ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುವ ವಿಚಾರಕ್ಕೆ ಪ್ರತಿಕ್ರಿಸಿದ ಶ್ರೀಗಳು, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ, ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತದೆ ಎಂದು ನಿಗೂಢ ಅರ್ಥದಲ್ಲಿ ಮಾತನಾಡಿದ್ದರು.












Click it and Unblock the Notifications