ಕೋಲಾರ; ಸಂಸದ, ಶಾಸಕರ ನಡುವೆ ಸಚಿವರ ಮುಂದೆ ವಾಗ್ವಾದ!

ಕೋಲಾರ, ಡಿಸೆಂಬರ್ 31; ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ. ಸಿ. ಪಾಟೀಲ್ ಸಂಸದ ಮತ್ತು ಶಾಸಕರ ನಡುವಿನ ವಾಗ್ವಾದಕ್ಕೆ ಸಾಕ್ಷಿಯಾದರು. ಕ್ರಷರ್ ವಿಚಾರವಾಗಿ ಬಿಜೆಪಿ ಸಂಸದ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಗುರುವಾರ ಮಾಲೂರು ತಾಲೂಕಿನ ಕೋಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ವೈ. ನಂಜೇಗೌಡ ಹಾಗೂ ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ ನಡುವೆ ಗಲಾಟೆ ನಡೆದಿದೆ. ಸಚಿವ ಸಿ. ಟಿ. ಪಾಟೀಲ್ ಅವರು ಕ್ರಷರ್ ವೀಕ್ಷಣೆಗಾಗಿ ಬಂದಿದ್ದರು.

ಗುಂಡು ತೋಪಿನಲ್ಲಿ ಶಾಸಕರು ಕ್ರಷರ್ ಮಾಡುತ್ತಿದ್ದಾರೆ ಎಂದು ಸಂಸದ ಮುನಿಸ್ವಾಮಿ ಸಚಿವರ ಬಳಿ ದೂರು ಹೇಳಿದರು. ಸಚಿವರ ಮುಂದೆ ಬಹಿರಂಗವಾಗಿ ಹೇಳಿಕೆ ನೀಡಿದಾಗ, "ಇದೆಲ್ಲಾ ಬಿಡಪ್ಪ ಪರ್ಸನಲ್ ಆಗಿ ತಗೋಬೇಡ" ಎಂದು ಶಾಸಕರು ಟಾಂಗ್ ಕೊಟ್ಟರು.

Verbal Fight Between Kolar MP Muniswamy And MLA KY Nanjegowda

"ನೀವು ಇದೆಲ್ಲಾ ಬಿಡಿ ನನಗೂ ಎಲ್ಲಾ ಗೊತ್ತಿದೆ. ರಾಜಕೀಯವನ್ನು ರಾಜಕೀಯವಾಗಿ ಎದುರಿಸಿ ವೈಯಕ್ತಿಕವಾಗಿ ಬೇಡ" ಎದು ಶಾಸಕರು ಹೇಳಿದರು. ಇಬ್ಬರೂ ಸಹ ಸುಮ್ಮನಿರಿ ಎಂದು ಸಚಿವ ಸಿ. ಸಿ. ಪಾಟೀಲ್ ಹೇಳಿದರೂ ಸಹ ಸಚಿವರ ಮುಂದೆಯೇ ಗಲಾಟೆ ಮಾಡಿಕೊಂಡರು.

"ನೀನು ಗಾಳಿಯಲ್ಲಿ ಬಂದಿದೀಯ ಗಾಳಿಯಲ್ಲಿ ಹೋಗ್ತಿಯ ಬಿಡು. ನಾವಿಬ್ಬರೂ ಒಂದೇ ಹೋಬಳಿಯವರು ಇದೆಲ್ಲ ಬಿಟ್ಟುಬಿಡು" ಎಂದು ಶಾಸಕ ಕೆ. ವೈ. ನಂಜೇಗೌಡ ಹೇಳಿದರು. ಸಚಿವರ ಜೊತೆ ಇದ್ದ ಜನರು, ಮಾಧ್ಯಮ ಪ್ರತಿನಿಧಿಗಳು ನಾಯಕರ ಗಲಾಟೆ ನೋಡಿ ಮುಸಿ ಮುಸಿ ನಕ್ಕರು.

ಸಂಸದ ಮನಿಸ್ವಾಮಿ ಅವರು, "ಒಂದೇ ಹೋಬಳಿಯವರಾದರೇನು?" ಎಂದು ಶಾಸಕರಿಗೆ ಟಾಂಗ್ ಕೊಟ್ಟು ಸಚಿವರ ಮುಂದೆ ಹೆಜ್ಜೆ ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+