Siddaramaiah contesting from Kolar: ಬಿಜೆಪಿಯ ವರ್ತೂರು ಪ್ರಕಾಶ್ ವಾಗ್ದಾಳಿ
ಕೋಲಾರ, ಜನವರಿ 09: ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯಲ್ಲಿ ತಾವು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಹಿರಂಪಡಿಸಿದ್ದಾರೆ. ಸಿದ್ದರಾಮಯ್ಯ ನಿರ್ಧಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇನ್ನೂ ಕೋಲಾರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿರುವ ವರ್ತೂರು ಪ್ರಕಾಶ್ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪುತ್ರನ ಮೇಲಿನ ವ್ಯಾಮೋಹದಿಂದಾಗಿ ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಮನಸ್ಸು ಮಾಡಿದ್ದಾರೆ. ನನ್ನ ಮೇಲೆ ಸ್ಪರ್ಧೆ ಮಾಡಲು ಬಂದಿರುವ ಸಿದ್ದರಾಮಯ್ಯ ಅಹಿಂದ ನಾಯಕನೇ ಅಲ್ಲ ಎಂದು ಕೋಲಾರ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಕಿಡಿ ಕಾರಿದ್ದಾರೆ.
ವರ್ತೂರು ಪ್ರಕಾಶ್ ಕಾಂಗ್ರೆಸ್ ನಲ್ಲಿದ್ದವರು. ಇತ್ತೀಚಷ್ಟೇ ಬಿಜೆಪಿ ಸೇರಿದ್ದು, ಕೋಲಾರ ವಿಧಾನಸಭಾ ಕ್ಷೇತ್ರವನ್ನೇ ಪ್ರತಿನಿಧಿಸುವ ನಾಯಕರಾಗಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಕಣ್ಣಕ್ಕಿಳಿಯಲಿರುವ ನಿರ್ಧಾರ ವರ್ತೂರು ಪ್ರಕಾಶ್ ಅವರ ನಿದ್ದೆಗೆಡಿಸಲಿದೆ ಎನ್ನಲಾಗುತ್ತಿದೆ.

ಸೋಮವಾರ ಕೋಲಾರದಲ್ಲಿ ಸುದ್ದಿಗಾರರಿ ಪ್ರತಿಕ್ರಿಯಿಸಿದ ವರ್ತೂರು ಪ್ರಕಾಶ್, ಈ ಹಿಂದೆ ಕಾಂಗ್ರೆಸ್ ಹಿರಿಯ ನಾಐಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಹೆಚ್ ಮುನಿಯಪ್ಪ ಅವರನ್ನು ಸಿದ್ದರಾಮಯ್ಯನವರು ಸೋಲಿಸಿದ್ದರು. ಈ ಕಾರಣಕ್ಕೆ ದಲಿತ ಸಮಾಜವು ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದೆ. ಕೋಲಾರದಲ್ಲಿ ನಾನು ಒಬ್ಬ ಅಹಿಂದ ಮುಖಂಡ ನನ್ನ ವಿರುದ್ಧ ಸ್ಪರ್ಧೆಗಿಳಿಯಲು ನಿರ್ಧರಿಸಿರುವ ಸಿದ್ದರಾಮಯ್ಯ ಈ ಬಾರಿ ಚುನಾವಣೆಯಲ್ಲಿ ದಲಿತ ಸಮಾಜವೇ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸುತ್ತದೆ ಎಂದರು.
ಕಾಂಗ್ರೆಸ್ ತೀವ್ರ ಹಿನ್ನಡೆ: ವರ್ತೂರು ಭವಿಷ್ಯ
ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಮಾತ್ರ ಪ್ರಬಲವೇ ಹೊರತು, ಕೋಲಾರ ಕ್ಷೇತ್ರ ಅಲ್ಲ. ಇಲ್ಲಿನ ಅವರ ಸ್ಪರ್ಧೆಯಿಂದ ಅವರಿಗೂ ಮತ್ತು ಕಾಂಗ್ರೆಸ್‌ಗೂ ತೀವ್ರ ಹಿನ್ನಡೆ ಆಗಲಿದೆ ಎಂದು ಭವಿಷ್ಯ ನುಡಿದರು.
ಸುಮಾರು ಏಳು ವರ್ಷಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ ಪರಮೇಶ್ವರ ವಿರುದ್ಧ ಹುನ್ನಾರ ಮಾಡಿದ್ದರು. ಅದರ ಫಲವಾಗಿಯೇ ಅಂದಿನ 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ್ದರು. ದಲಿತ ನಾಯಕರಾದ ಈಗ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಹೆಚ್ ಮುನಿಯಪ್ಪರನ್ನ ಸೋಲಿಸಿದರು. ಇಂತವರಿಗೆ ಕೋಲಾರದಲ್ಲಿ ವಿಜಯ ಸುಲಭವಲ್ಲ ಎಂದು ತಿಳಿಸಿದರು.

ಸೋಮವಾರ ಸಿದ್ದರಾಮಯ್ಯ ಅವರು ತಾವು ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಲಿದ್ದೇನೆ ಎನ್ನುವ ಮೂಲಕ ಹಲವು ದಿನಗಳ ಕುತೂಹಲಕ್ಕೆ ತೆರೆ ಎಳೆದರು. ಆದರೆ ಇದಕ್ಕೆ ಹೈಕಮಾಂಡ್ ಸೂಚಿಸಿದರೆ ಮಾತ್ರ ಸ್ಪರ್ಧಿಸುವೆ ಅಂತಲೂ ತಿಳಿಸಿದ್ದಾರೆ. ಇದಾದ ಬಳಿಕ ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ಶಿಷ್ಯ ಎಂದು ಗುರುತಿಸಿಕೊಂಡಿದ್ದ ಮಾಜಿ ಸಚಿವ ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಕಿಡಿ ಕಾರಿದ್ದಾರೆ. ಒಂದು ವೇಳೆ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದೇ ಆದರೆ ಕೋಲಾರದಲ್ಲಿ ಇಬ್ಬರು ದಲಿತ ನಾಯಕರ ಚುನಾವಣಾ ಪೈಪೋಟಿ ಜೋರಾಗಿರಲಿದೆ.












Click it and Unblock the Notifications