ಪಿಂಚಣಿ ಹಣವನ್ನು ಪರಿಹಾರ ನಿಧಿಗೆ ಕೊಟ್ಟ ಮಾಲೂರಿನ ತಿಬ್ಬಯ್ಯ

ಕೋಲಾರ, ಏಪ್ರಿಲ್ 11: ದೇಶದಲ್ಲಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಇದೇ ಸಂದರ್ಭದಲ್ಲಿ, ನೆರವು ಕೋರಿ ಸಿಎಂ ಪರಿಹಾರ ನಿಧಿಯನ್ನೂ ತೆರೆಯಲಾಗಿದ್ದು, ಹಲವೆಡೆಯಿಂದ ಸಹಾಯ ದೊರೆಯುತ್ತಿದೆ. ಕೋಲಾರದಲ್ಲಿಯೂ ವ್ಯಕ್ತಿಯೊಬ್ಬರು ತಮ್ಮ ಪಿಂಚಣಿ ಹಣವನ್ನೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ಮೂಲದ ಪಿಂಚಣಿದಾರ ತಿಬ್ಬಯ್ಯ ಅವರು ತಮ್ಮ ಪಿಂಚಣಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

Tibbaiah From Maluru Gave His Pension Money To CM Relief Fund

ಕಂದಾಯ ನಿರೀಕ್ಷಕರಾಗಿದ್ದ ತಿಬ್ಬಯ್ಯ 10 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದಾರೆ. ಈ ಬಾರಿ ತಮ್ಮ ತಿಂಗಳ ಪಿಂಚಣಿ 16,483 ರೂಪಾಯಿಯನ್ನು ಅವರು ನೀಡಿ ನೆರವಾಗಿದ್ದಾರೆ. "ನಮ್ಮ ಭಾರತ ದೇಶಕ್ಕೆ ಕೊರೊನಾ ಎಂಬ ಉಗ್ರ ಕಾಯಿಲೆ ಬಂದಿದೆ. ಇದರ ನಿರ್ಮೂಲನೆಗೆ ಸರ್ಕಾರ ಮಾತ್ರವಲ್ಲ, ಜನರೂ ಕೈ ಜೋಡಿಸಬೇಕಿದೆ. ಈ ಸಮಯದಲ್ಲಿ ಆರ್ಥಿಕ ಪರಿಸ್ಥಿತಿಯೂ ದೇಶದಲ್ಲಿ ಕುಗ್ಗಿದೆ. ನಮ್ಮ ದೇಶದಲ್ಲಿ ಕೈಲಾದವರು ಕೈಲಾಗದವರಿಗೆ ನೀಡಬೇಕಿದೆ. ನನಗೆ ಈ ಒಂದು ತಿಂಗಳು ಹಣ ಇಲ್ಲದಿದ್ದರೂ ನಿಭಾಯಿಸಬಹುದಾಗಿದೆ. ಆದ್ದರಿಂದ ಈ ಹಣ ಕೊರೊನಾ ವಾರಿಯರ್ಸ್ ಗೆ ನೆರವಾಗಬೇಕು ಎಂದು ನೀಡಿದ್ದೇನೆ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+