ಕೋಲಾರದಲ್ಲಿ ಮಾಲೀಕರಿಲ್ಲದ ಒಂಟೆ ಪತ್ತೆ, ನೋಡಲು ಮುಗಿಬಿದ್ದ ಜನ
ಕೋಲಾರ, ಫೆಬ್ರವರಿ 26: ಕೋಲಾರ ತಾಲ್ಲೂಕು ವೇಮಗಲ್ ಹೋಬಳಿ ಬೈರಂಡಹಳ್ಳಿ ಬಳಿ ಯಾರು ಮಾಲೀಕರಿಲ್ಲದ ಒಂಟೆಯೊಂದು ಪತ್ತೆಯಾಗಿದ್ದು, ತೀವ್ರ ಅಸ್ವಸ್ಥವಾಗಿದೆ ಮಲಗಿದೆ.
ಒಂಟೆ ಇಂದು ಬೈರಂಡಹಳ್ಳಿ ಬಳಿಯ ಕೆಲವು ಹೊಲಗಳಿಗೆ ಹೋಗಿ ಹಿಪ್ಪು ನೇರಳೆ ಬೆಳೆ ಹಾಗೂ ಕಲ್ಲಂಗಡಿ ಬೆಳೆಗಳನ್ನು ತಿಂದಿದೆ. ಒಂಟೆ ಯಾರದೆಂದು ವಿಚಾರಿಸಲಾಯಿತು, ಆದರೆ ಒಂಟೆ ಮಾಲೀಕ ಯಾರು, ಯಾರು ಒಂಟೆಯನ್ನು ಇಲ್ಲಿಗೆ ಕರೆ ತಂದರು ಅನ್ನೋದು ಮಾತ್ರ ಇನ್ನು ತಿಳಿದು ಬಂದಿಲ್ಲ.

ಸದ್ಯ ಒಂಟೆಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ವೇಮಗಲ್ ಪೊಲೀಸರಿಗೆ ಸುದ್ದಿ ತಿಳಿಸಿದ್ದು ವೇಮಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸದ್ಯ ಒಂಟೆಯನ್ನು ಏನು ಮಾಡೋದು ಎಂದು ತಿಳಿಯದೆ ಪೊಲೀಸರು ಹಾಗೂ ಗ್ರಾಮಸ್ಥರು ಚರ್ಚೆ ಮಾಡುತ್ತಿದ್ದಾರೆ. ಸದ್ಯ ಯಾರೂ ವಾರಸುದಾರರಿಲ್ಲದೆ ಅಸ್ವಸ್ಥವಾಗಿರುವ ಒಂಟೆಯನ್ನು ಯಾವುದಾದರೂ ಗೋ ಶಾಲೆಗೆ ಸೇರಿಸಿ ಚಿಕಿತ್ಸೆ ನೀಡಲು ಚಿಂತಿಸಲಾಗುತ್ತಿದೆ.












Click it and Unblock the Notifications