ಕೋಲಾರ : ಪತ್ರಕರ್ತನ ಮೇಲೆ ಹಲ್ಲೆ, ಎಸ್.ಐ ಅಮಾನತಿಗೆ ಪಟ್ಟು

ಕೋಲಾರ, ನವೆಂಬರ್ 09 : ಸುದ್ದಿ ಸಂಗ್ರಹಕ್ಕೆಂದು ತೆರಳಿದ್ದ ಪತ್ರಕರ್ತನ ಮೇಲೆ ದರ್ಪ ತೊರಿ ಬಟ್ಟೆ ಹರಿಯುವಂತೆ ಹೊಡೆದ ಕೋಲಾರದ ಪಿಎಸ್ಐ ಹೊನ್ನೆಗೌಡರಿಗೆ ಈಗ ನೌಕರಿಗೆ ಕುತ್ತು ಬಂದಿದೆ.

ನಗರದಲ್ಲಿ ನವೆಂಬರ್ 9ರ ಮುಂಜಾನೆ ಮೂರು ಅಂತಸ್ತಿನ ಕಟ್ಟಡವೊಂದು ನೆಲಸಮವಾಗಿದೆ, ಅದರ ವರದಿ ಮಾಡಲು ತೆರಳಿದ್ದ ಖಾಸಗಿ ವಾಹಿನಿಯ ವರದಿಗಾರನನ್ನು ಕೊಲಾರ ಸಬ್ ಇನ್ಸ್ಪೆಕ್ಟರ್ ಹೊನ್ನೆಗೌಡ ಅವಾಚ್ಯ ಶಬ್ದ ಬಳಸಿ ಬೈದುದ್ದಲ್ಲದೆ. ಸಾರ್ವಜನಿಕವಾಗಿ ಥಳಿಸಿ, ಅವರ ಬಟ್ಟೆ ಹರಿದಿದ್ದಾರೆ.

SI Beats Journalist in Kolar

ಪೊಲೀಸರ ಈ ಗೂಂಡಾಗಿರಿಯನ್ನು ಖಂಡಿಸಿ ನಗರದ ಕಾರ್ಯ ನಿರತ ಪತ್ರಕರ್ತರು ಠಾಣೆಯ ಮುಂದೆ ಧರಣಿ ಕೂತಿದ್ದಾರೆ. ಪತ್ರಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಿ ನಗರದ ರೈತ ಸಂಘ ಹಾಗೂ ಕೆಲವು ಕನ್ನಡಪರ ಸಂಘಟನೆಗಳ ಸದಸ್ಯರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

SI Beats Journalist in Kolar

ಪೊಲೀಸ್ ಹಿರಿಯ ಅಧಿಕಾರಿಗಳ ಬಳಿಯೂ ಚರ್ಚೆ ನಡೆಸಿರುವ ಕೋಲಾರದ ಹಿರಿಯ ಕಾರ್ಯನಿರತ ಪತ್ರಕರ್ತರು. ಹೊನ್ನೆಗೌಡ ಅವರ ವಿರುದ್ಧ ದೂರು ದಾಖಲಿಸಿದ್ದು, ಅವರನ್ನು ಕೂಡಲೇ ಅಮಾನತುಮಾಡಬೇಕೆಂದು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+