PM Modi in Kolar: ಸರ್ಪ ಶಿವನ ಕೊರಳಿನಲ್ಲಿರುತ್ತದೆ: ಖರ್ಗೆ ವಿಷ ಸರ್ಪ ಹೇಳಿಕೆಗೆ ಮೋದಿ ತಿರುಗೇಟು
ಈ ಬಾರಿ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದು ಶಾಸಕರು ಮತ್ತು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದಕ್ಕೆ ಅಲ್ಲ, ಕರ್ನಾಟಕವನ್ನು ಮುಂದಿನ 25 ವರ್ಷಗಳವರೆಗೆ ಅಭಿವೃದ್ಧಿ ಹೊಂದಿದ ರಾಜ್ಯವನ್ನು ಮಾಡುವ ಚುನಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ ಕೋಲಾರದಲ್ಲಿ ಹೇಳಿಕೆ ನೀಡಿದರು.
ಕೋಲಾರದಲ್ಲಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿ ನೆರೆದ ಜನಸಂಖ್ಯೆಯನ್ನು ನೋಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರಿಗೆ ನಿದ್ದೆಗೆಡುತ್ತದೆ. ಎರಡೂ ಪಕ್ಷಗಳನ್ನು ಕರ್ನಾಟಕದ ಜನಗೆ ಕ್ಲೀನ್ ಬೌಲ್ಡ್ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ರಾಜ್ಯದಲ್ಲಿ ಅಸ್ಥಿರ ಸರ್ಕಾರ ಅಧಿಕಾರಕ್ಕೆ ಬಂದರೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಅಸ್ಥಿರ ಸರ್ಕಾರದಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದು ಮೋದಿ ಕರೆ ನೀಡಿದರು. ದಶಕದಿಂದ ನೆನೆಗುದಿಗೆ ಬಿದ್ದಿದ್ದ ಹಲವು ಕಾಮಗಾರಿಗಳು, ಯೋಜನೆಗಳನ್ನು ಬಿಜೆಪಿ ಪೂರ್ಣಗೊಳಿಸಿದೆ. ಬಿಜೆಪಿಗೆ ನೀವು ನೀಡುವ ಒಂದು ಮತದಿಂದ ಸಾಕಷ್ಟು ಬದಲಾವಣೆಯಾಗುತ್ತಿದೆ ಎಂದು ಹೇಳಿದರು.
ನನ್ನನ್ನು ಹಾವಿಗೆ, ಹಾವಿನ ವಿಷಕ್ಕೆ ಹೋಲಿಕೆ ಮಾಡ್ತಿದ್ದಾರೆ
— oneindiakannada (@OneindiaKannada) April 30, 2023
ಸರ್ಪ ಯಾವಾಗಲೂ ಶಿವನ ಕೊರಳಿನಲ್ಲಿರುತ್ತದೆ, ಹಾವು ಶಿವನ ಸ್ವರೂಪಿ,
ನಿಮ್ಮ ಸಮಾಧಿ ಕಟ್ಟುತ್ತೇವೆ ಎಂದು ಬೆದರಿಕೆ ಹಾಕ್ತಿದ್ದಾರೆ.
-ಪ್ರಧಾನಿ ನರೇಂದ್ರ ಮೋದಿ#modi #narendramodi #snake #karnatakaelections2023 #KarnatakaElections2023 pic.twitter.com/eAJSyZ93XB
ಡಬಲ್ ಇಂಜಿನ್ ಸರ್ಕಾರದ ಮೂಲಕ ಕೋಲಾರ ಜಿಲ್ಲೆಗೆ ಅನೇಕ ಕೈಗಾರಿಕೆಗಳು ಬರುತ್ತಿವೆ, ಕಾಂಗ್ರೆಸ್ ಸುಳ್ಳು ಭರವಸೆಗಳು ಜಾರಿಗೆ ಬರುವುದಿಲ್ಲ. 2005 ರಿಂದ 2014 ರವರೆಗೂ 10 ವರ್ಷ ಸುಳ್ಳು ಆಶ್ವಾಸನೆಗಳನ್ನು ನೀಡಿದೆ. ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡುತ್ತವೆ ಎಂದು ಆಶ್ವಾಸನೆ ನೀಡಿತ್ತು, ಅನೇಕ ಹಳ್ಳಿಗಳು ಕತ್ತಲಿನಲ್ಲಿ ಇದ್ದವು, ಕಾಂಗ್ರೆಸ್ ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡಿದೆ. ಬಿಜೆಪಿ ಸರ್ಕಾರ ಸಾವಿರ ದಿನಗಳ ಅವಧಿಯಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಪೂರೈಸಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್‌ನ ಗುಜರಿ ಇಂಜಿನ್‌ನಿಂದ ರಾಜ್ಯದ ಅಭಿವೃದ್ಧಿಯಾಗುವುದಿಲ್ಲ ಎಂದು ಮೋದಿ ವಾಗ್ದಾಳಿ ಮಾಡಿದರು. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯ ಅಭಿವೃದ್ಧಿಯಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ ಇಂಜಿನ್ ತರಹ ರಾಜ್ಯದಲ್ಲಿಕೂಡ ಗಟ್ಟಿಯಾದ ಇಂಜಿನ್ ಅಧಿಕಾರಕ್ಕೆ ಬರಬೇಕು, ಅದಕ್ಕಾಗಿ ರಾಜ್ಯದಲ್ಲಿ ಜನ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮೋದಿ ಮನವಿ ಮಾಡಿದರು.
ಕಾಂಗ್ರೆಸ್ ರೈತರ ಬಗ್ಗೆ ಯೋಚನೆ ಮಾಡಲ್ಲ, ಬಿಜೆಪಿ ಸರ್ಜಾರ ರೈತರು ಬಿತ್ತುವ ಬೀಜದಿಂದ ವ್ಯಾಪಾರ ಮಾಡುವವರೆಗೆ ಚಿಂತನೆ ಮಾಡ್ತೇವೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕುತ್ತಿದ್ದೇವೆ ಎಂದರು. ಕಾಂಗ್ರೆಸ್ ಜನರ ನಂಬಿಕೆಗೆ ಮೋಸ ಮಾಡುತ್ತಾ ಬಂದಿದೆ. ರೈತರಿಗೆ ಸಿಗಬೇಕಾದ ಶೇಕಡಾ 80 ರಷ್ಟು ಹಣವನ್ನು ನುಂಗಿದ್ದಾರೆ, ಇದನ್ನು ಸ್ವತಃ ಕಾಂಗ್ರೆಸ್ ಪ್ರಧಾನಿ ಹೇಳಿದ್ದಾರೆ. ಇಂತಹ ಕಾಂಗ್ರೆಸ್‌ನಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.
ಬಡವರು, ಹಿಂದುಳಿದ ವರ್ಗಗಳ ಮಹಿಳೆಯರಿಗೆ ಕೂಡ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಮೋದಿ ಆರೋಪ ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೋಟ್ಯಂತರ ಮನೆಗಳನ್ನು ಹಿಂದುಳಿದ ವರ್ಗಗಳಿಗೆ ನೋಡಿದ್ದೇವೆ. 10 ಕೋಟಿ ಮನೆಗಳಿಗೆ ಶೌಚಾಲಯ ಕಟ್ಟಿಸಲಾಗಿದೆ, 9 ಕೋಟಿ ಬಡವರಿಗೆ ಗ್ಯಾಸ್ ನೀಡಿದ್ದೇವೆ, 2.5 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, ಇದಕ್ಕೆಲ್ಲಾ ಕಾರಣ ನೀವು ನೀಡಿರುವ ಒಂದು ಮತ ಎಂದು ಮೋದಿ ತಿಳಿಸಿದರು.
ವಿಷ ಸರ್ಪ ಹೇಳಿಕೆಗೆ ಮೋದಿ ಕಿಡಿ
ಇನ್ನು ಮೋದಿ ಇದೇ ಮೊದಲ ಬಾರಿಗೆ ತಮ್ಮ ವಿರುದ್ಧದ ವಿಷ ಸರ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ, ಇದರಿಂದ ಕಾಂಗ್ರೆಸ್‌ನವರಿಗೆ ಹೆಚ್ಚಿನ ತೊಂದರೆಯಾಗಿದೆ. ಅದಕ್ಕೆ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್‌ನವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕಿತ್ತು, ಹಾವು ಮತ್ತು ಹಾವಿನ ವಿಷದ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ನನಗೆ ಈ ಬಗ್ಗೆ ಬೇಸರವಿಲ್ಲ, ಹಾವು ಶಿವನ ಕೊರಳಿನಲ್ಲಿ ಇರುತ್ತದೆ. ಈ ದೇಶದ ಜನ ನನಗೆ ಶಿವನ ಸ್ವರೂಪಿ, ಶಿವ ಸ್ವರೂಪಿಯಾದ ಜನರ ಕೊರಳಿನಲ್ಲಿ ಹಾವಾಗಿ ಇರಲು ನನಗೆ ಸಂತೋಷವಾಗುತ್ತದೆ ಎಂದು ನರೇಂದ್ರ ಮೋದಿ ಹೇಳಿದರು. ಕಾಂಗ್ರೆಸ್‌ನವರ ಬಾಯಿ ಮುಚ್ಚಿಸಲು ಬಿಜೆಪಿಗೆ ಮತ ನೀಡಿ ಎಂದು ಮೋದಿ ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ಮಾಡಿದರು.












Click it and Unblock the Notifications