ಮುನೇಶ್ವರ ಸ್ವಾಮಿ ವಿಗ್ರಹದ ಕೈಯಲ್ಲಿದ್ದ ಖಡ್ಗ ಹೊತ್ತೊಯ್ದ ಭೂಪ!
ಕೋಲಾರ, ಜನವರಿ 25 : ದೇವಾಲಯಕ್ಕೆ ನುಗ್ಗುವ ಕಳ್ಳರು ಹಣ, ವಿಗ್ರಹಗಳನ್ನು ಕದಿಯುವುದು ಸಾಮಾನ್ಯ. ಆದರೆ ಕೋಲಾರದಲ್ಲಿ ಯುವಕನೊಬ್ಬ ದೇವರ ಕೈಯಲ್ಲಿದ್ದ ಖಡ್ಗವನ್ನು ಹೊತ್ತುಕೊಂಡು ಹೋಗಿದ್ದಾನೆ.
ಕೋಲಾರ ಜಿಲ್ಲೆಯ ಕೆಜಿಎಫ್‌ನ ಆಂಡರ್ ಸನ್ ಪೇಟೆ ವ್ಯಾಪ್ತಿಯ ಭಾರತಿಪುರದಲ್ಲಿ ಈ ಘಟನೆ ನಡೆದಿದೆ. ಮುನೇಶ್ವರ ಸ್ವಾಮಿ ವಿಗ್ರಹದ ಕೈಯಲ್ಲಿದ್ದ ಖಡ್ಗವನ್ನು ಕಿತ್ತಿರುವ ಯುವಕ, ಅದನ್ನು ಹಿಡಿದು ಪರಾರಿಯಾಗಿದ್ದಾನೆ.
ಕಿಡಿಗೇಡಿ ಮುನೇಶ್ವರ ಸ್ವಾಮಿ ವಿಗ್ರಹದ ಕೈಯಲ್ಲಿರುವ ಖಡ್ಗವನ್ನು ಕೀಳುವ, ಅದನ್ನು ಹೊತ್ತುಕೊಂಡು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ನೋಡಿ ಜನರು ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಭಾರತಿಪುರದ ನಿವಾಸಿಗಳು ಮುನೇಶ್ವರನ ವಿಗ್ರಹದಲ್ಲಿದ್ದ ಖಡ್ಗ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿರುವ ಪೊಲೀಸರು ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಸ್ಥಳೀಯ ಯುವಕನೇ ಈ ಕೃತ್ಯ ಮಾಡಿದ್ದಾನೆ ಎಂದು ಜನರು ಹೇಳುತ್ತಿದ್ದಾರೆ. ಗಾಂಜಾ ಮತ್ತಿನಲ್ಲಿ ಯುವಕ ಇಂತಹ ಹುಚ್ಚಾಟ ನಡೆಸಿರಬೇಕು ಎಂದು ಶಂಕಿಸಲಾಗಿದೆ. ಪೊಲೀಸರು ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಯುವಕ ಹಿಂದೆಯೂ ಈತ ಮಾರಕಾಸ್ತ್ರಗಳನ್ನು ಹಿಡಿದು ಜನರನ್ನು ಬೆದರಿಸಿರುವ ಆರೋಪವಿದೆ. ಅಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಖಡ್ಗ ಕಳವು ಬಗ್ಗೆ ಪ್ರಕರಣ ದಾಖಲಾಗಿದೆ.
ವಿಡಿಯೋ
ಕೋಲಾರ ಜಿಲ್ಲೆಯ ಕೆಜಿಎಫ್‌ನ ಆಂಡರ್ ಸನ್ ಪೇಟೆ ವ್ಯಾಪ್ತಿಯ ಭಾರತಿಪುರದಲ್ಲಿ ಮುನೇಶ್ವರ ಸ್ವಾಮಿ ವಿಗ್ರಹದ ಕೈಯಲ್ಲಿದ್ದ ತಲ್ವಾರ್ ಅನ್ನು ಕಿಡಿಗೇಡಿಯೊಬ್ಬ ತೆಗೆದುಕೊಂಡು ಹೋಗಿದ್ದಾನೆ. ಇದರ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.#KGF #Talwar #CCTV pic.twitter.com/GOxlaIovsI
— oneindiakannada (@OneindiaKannada) January 25, 2021












Click it and Unblock the Notifications