ಕೋಲಾರದಲ್ಲಿ ಕುಡಿದ ನಶೆಯಲ್ಲಿ ಹಾವು ಕಚ್ಚಿ ಕೊಂದವ ಅರೆಸ್ಟ್

ಕೋಲಾರ, ಮೇ 06: ಕಂಠಪೂರ್ತಿ ಕುಡಿದು, ಆ ಕುಡಿದ ಮತ್ತಿನಲ್ಲಿ, ದಾರಿಯಲ್ಲಿ ಬೈಕಿಗೆ ಅಡ್ಡಲಾಗಿ ಸಿಕ್ಕಿದ ಹಾವನ್ನೇ ಕಚ್ಚಿ ಕೊಂದಿದ್ದ ವ್ಯಕ್ತಿಯನ್ನು ಮುಳಬಾಗಿಲು ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಮೇ 4ರಂದು ಕೋಲಾರದ ಮುಳಬಾಗಿಲಿನಲ್ಲಿ, ಕುಡಿದ ನಶೆಯಲ್ಲಿ ಹಾವನ್ನೇ ಈತ ಕಚ್ಚಿ ಸಾಯಿಸಿದ್ದ. ಈತ ಹಾವನ್ನು ಕಚ್ಚಿ ಕೊಂದಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಆರೋಪಿಯ ಸೆರೆಗಾಗಿ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದರು. ಇದೀಗ ಆರೋಪಿ ಎಂ.ವಿ. ಸತೀಶ್ ಕುಮಾರ್ ಅರಣ್ಯಾಧಿಕಾರಿಗಳ ಸೆರೆಯಲ್ಲಿದ್ದಾನೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದ ಎಂ ವಿ ಸತೀಶ್ ಕುಮಾರ್, ಮೇ.4ರಂದು ಬಾರ್ ತೆರೆದ ಖುಷಿಯಲ್ಲಿ ಕಂಠ ಪೂರ್ತಿ ಕುಡಿದು ಬೈಕ್ ಏರಿ ಬರುವಾಗ ದಾರಿ ಮಧ್ಯೆ ಹಾವು ಹಾದುಹೋಗುತ್ತಿತ್ತು. ಆ ಹಾವನ್ನು ಹಿಡಿದು, ಕೊರಳಿಗೆ ಸುತ್ತಿಕೊಂಡು ಈತ ಕಚ್ಚಿ ಹಾಕಿದ್ದ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಆ ನಂತರ ವಿಡಿಯೋ ವೈರಲ್ ಆಗಿತ್ತು.

Man Who Bitten Snake In Mulabagilu Arrested Today

ಈ ಸಂಬಂಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದ ಮುಳಬಾಗಿಲು ಅರಣ್ಯಾಧಿಕಾರಿಗಳು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+