ಬಡವರ ನಿವೇಶನಕ್ಕೆ ವಾಸ ಯೋಗ್ಯವಲ್ಲದ ಜಾಗ ಗುರುತು: ಕಂದಾಯ ಅಧಿಕಾರಿಗಳಿಗೆ ಶಾಸಕಿ ಕ್ಲಾಸ್
ಕೋಲಾರ, ಅಕ್ಟೋಬರ್, 29: ಬಡವರಿಗೆ ನಿವೇಶನ ಮಂಜೂರು ಮಾಡುವ ವಿಷಯವಾಗಿ ಕಂದಾಯ ಇಲಾಖೆಯವರು ವಿವೇಚನೆ ರಹಿತವಾಗಿ ಕೆಲಸ ಮಾಡಿದ್ದಾರೆ. ಯೋಗ್ಯವಾದ ಜಾಗವನ್ನು ಆಯ್ಕೆ ಮಾಡದೆ, ಜನ ವಾಸ ಮಾಡಲು ಸಾಧ್ಯವಿಲ್ಲದ ಜಾಗವನ್ನು ಗುರ್ತಿಸಲಾಗಿದೆ ಎಂದು ಕೆಜಿಎಫ್ ಶಾಸಕಿ ಎಂ.ರೂಪಕಲಾ ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಕಿಡಿಕಾರಿದರು.
ಅಜ್ಜಪಲ್ಲಿ ಗ್ರಾಮದ ಬಳಿ ಕೊಳಚೆ ಮಂಡಳಿ ನಿರ್ಮಾಣ ಮಾಡಲು ಹೊರಟಿರುವ ವಿವಾದಾತ್ಮಕ ಬಡಾವಣೆಯ ಸಂಬಂಧವಾಗಿ ದಲಿತ ಸಮರ ಸೇನೆ ಕಾರ್ಯಕರ್ತರು ಶನಿವಾರ ಶಾಸಕಿ ರೂಪಕಲಾ ಅವರನ್ನು ಗುದ್ದಲಿ ಪೂಜೆಗೆ ಆಹ್ವಾನಿಸಲು ಬಂದಾಗ, ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕಿ 'ಜನ ವಾಸ ಮಾಡಲು ಯೋಗ್ಯವಾದ ಜಾಗವನ್ನು ಸರಿಯಾಗಿ ಗುರುತಿಸಿಲ್ಲ. ಅಧಿಕಾರಿಗಳು ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ ಹಾಗೆ ಕಾಣುತ್ತಿದೆ ಎಂದರು.

ಐವತ್ತು ವರ್ಷಗಳಿಂದ ಕೆಜಿಎಫ್ ನಗರದಲ್ಲಿ ಬಡವರಿಗೆ ನಿವೇಶನ ಮಂಜೂರು ಆಗಿರಲಿಲ್ಲ. ಈಗ ನನ್ನ ಹೋರಾಟ ಫಲ ನೀಡಿದೆ. ನಗರದಲ್ಲಿ ರಾಜ್ಯ ಸರ್ಕಾರದ 1000 ಎಕರೆ ಜಾಗ ಇದೆ ಎಂದು ಯಾವುದೇ ಜವಾಬ್ದಾರಿಯುತ ಜನಪ್ರತಿನಿಧಿಗಳು ಗುರುತಿಸಿರಲಿಲ್ಲ. ನಾನು ಜವಾಬ್ದಾರಿ ತೆಗೆದುಕೊಂಡ ಮೇಲೆ ಉದ್ಯೋಗ ಸೃಷ್ಟಿ ಮಾಡಲು ಬೆಮಲ್‌ನಿಂದ ವಾಪಸ್ ಪಡೆದ 979 ಎಕರೆ ಜಾಗವನ್ನು ಸರ್ಕಾರಕ್ಕೆ ವಾಪಸ್ ಕೊಡಿಸಿದೆ.
ಈ ಜಾಗ ಕೈಗಾರಿಕೆ ಟೌನ್ ಶಿಪ್ ಎಂದು ಸಚಿವ ಸಂಪುಟದಲ್ಲಿ ನೋಟ್ ಆಗಿದೆ. ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತ್ತು ಗಮನಕ್ಕೆ ತಾರದೆ, ಆಶ್ರಯ ಯೋಜನೆಯಡಿ ಮನೆ ಕೊಡಲು ಸಾಧ್ಯವಿಲ್ಲ. ಕೆಲ ಫಲಾನುಭವಿಗಳನ್ನು ತಪ್ಪುದಾರಿಗೆ ಎಳೆಯಲಾಗಿದೆ ಎಂದು ಹೇಳಿದರು.
ಆಶ್ರಯ ಯೋಜನೆಯಡಿ 5000 ನಿವೇಶನ ಮಾಡಲು ಜಾಗ ಗುರುತಿಸಲಾಗಿದೆ. ಅದನ್ನು ಅಭಿವೃದ್ಧಿಪಡಿಸಲಾಗುವುದು. ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಜಾಗದಲ್ಲಿ ನಿವೇಶನ ನೀಡುವುದಿಲ್ಲ. ಈಗಾಗಲೇ 8000 ಅರ್ಜಿಗಳು ನಗರಸಭೆಗೆ ಬಂದಿದೆ. ಅದರಲ್ಲಿ ಎಲ್ಲಾ ರೀತಿಯ ಬಡವರು ಇದ್ದಾರೆ. ಅಂತಹ ಕುಟುಂಬಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕೊಟ್ಟು ₹ 11 ಕೋಟಿ ಯೋಜನೆಯಲ್ಲಿ ಬಡಾವಣೆ ನಿರ್ಮಾಣ ಮಾಡುತ್ತೇವೆ.
ನನ್ನ ತಾಲೂಕಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿಯೇ ಫಲಾನುಭವಿಗಳ ಆಯ್ಕೆಯಾಗಬೇಕು. ಸರ್ಕಾರ ನನ್ನದೇ ಇದೆ. ನಾನು ಶಾಸಕಿಯಾಗಿದ್ದೇನೆ. ಕೇಂದ್ರ ಸರ್ಕಾರ ಯಾವುದಾದರೂ ಯೋಜನೆ ತರಲು ಯೋಚಿಸಿದ್ದರೆ, ನನ್ನ ಜೊತೆ ವ್ಯವಹಾರ ಮಾಡಬೇಕಿತ್ತು. ಕಂದಾಯ ಇಲಾಖೆಯ ಅಧಿಕಾರಿಗಳು ತಪ್ಪು ಮಾಡಿದ್ದರೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ರೂಪಕಲಾ ಹೇಳಿದರು.
ಬಡವರಿಗೆ ಮನೆಗಳನ್ನು ನಗರಸಭೆ ವ್ಯಾಪ್ತಿಯಲ್ಲಿ ನೀಡಬೇಕು. ನಗರದಿಂದ ಹತ್ತು ಕಿ.ಮೀ ದೂರದಲ್ಲಿ ನೀಡಬೇಕು. ಬಂಗಾರಪೇಟೆ ಕ್ಷೇತ್ರದ ಗಡಿಯಲ್ಲಿ ನೀಡಲು ಆಗುವುದಿಲ್ಲ. ಕೆಲವು ಜಾಗಗಳು ಕೆಲವು ಯೋಜನೆಗೆ ಮೀಸಲಾಗಿರುತ್ತದೆ. ಅಂತಹ ಯೋಜನೆಗಳಿಗೆ ಮಾತ್ರ ಮೀಸಲು ಇಡಲು ಸಾಧ್ಯ. ಜಿಲ್ಲಾಧಿಕಾರಿ ಮಾಡಿರುವ ಪತ್ರ ವ್ಯವಹಾರಕ್ಕೆ ನಾನು ಜವಾಬ್ದಾರಲ್ಲ. ಅವರೇ ಇದಕ್ಕೆ ಉತ್ತರ ಕೊಡಬೇಕು.
ನಾನು ಮಾಡುವ ಕೆಲಸ ಶಾಶ್ವತವಾಗಿರುತ್ತದೆ. ಶೇ 80 ರಷ್ಟು ಕೈಗಾರಿಕೆಗೆ ಮೀಸಲು ಇದೆ. ಶೇ 20 ರಷ್ಟು ಸಮಗ್ರ ಟೌನ್‌ಶಿಪ್ ಆಗುತ್ತದೆ. ಈಗಾಗಲೇ ಸಚಿವ ಸಂಪುಟದಲ್ಲಿ ನೋಟ್ ಆಗಿರುವುದರಿಂದ, ಈ ಯೋಜನೆ ಜಾರಿಗೆ ಬಂದೇ ಬರುತ್ತದೆ. ಇದೊಂದು ಐತಿಹಾಸಿಕ ಕ್ಷಣವಾಗಲಿದೆ. ಈ ಜಾಗದಲ್ಲಿ ಒಂದು ಇಂಚು ಜಾಗ ಕೂಡ ಅನ್ಯ ಯೋಜನೆಗೆ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಸ್ಲಂ ಬೋರ್ಡ್ ಅವರು ಮನೆ ಕಟ್ಟಲು ಸಿದ್ಧರಾಗಿದ್ದಾರೆ. ನೀವು ಗುದ್ದಲಿ ಪೂಜೆಗೆ ಸಮಯ ನೀಡಿದರೆ ಬೋರ್ಡ್ ಆಯುಕ್ತರು ಕಾಮಗಾರಿ ಮಾಡಲು ಸಿದ್ಧ ಎಂದು ಹೇಳಿದ್ದಾರೆ ಎಂದು ಸಂಘಟನೆ ಮುಖಂಡರು ಹೇಳಿದಾಗ, ಕುಪಿತಗೊಂಡ ಶಾಸಕಿ, ಮೂಲಭೂತ ಸೌಕರ್ಯ ಇಲ್ಲದ ಜಾಗದಲ್ಲಿ ಕೊಡಲು ಸಾಧ್ಯವಿಲ್ಲ. ಸ್ಲಂ ಬೋರ್ಡ್ ಇದುವರೆವಿಗೂ ನಗರಸಭೆ ಜೊತೆಗೆ ಪತ್ರ ವ್ಯವಹಾರ ಮಾಡಿಲ್ಲ.
ಜಾಗ ವಾಸಕ್ಕೆ ಯೋಗ್ಯವಿದೆಯೇ ಎಂಬುದರ ಬಗ್ಗೆ ನಗರಸಭೆಗೆ ಅಭಿಪ್ರಾಯ ಕೇಳಿಲ್ಲ. ವ್ಯವಸ್ಥೆ ಉಲ್ಲಂಘನೆ ಮಾಡಲಾಗಿದೆ. ನಗರದಲ್ಲಿ ಹತ್ತು ಸಾವಿರ ಕುಟುಂಬಗಳಿಗೆ ನಿವೇಶನ ನೀಡಬೇಕೆಂಬ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇನೆ. ನನ್ನನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸಿದರೆ ನಡೆಯಲ್ಲ ಎಂದರು.
ನಂತರ ಸಂಘಟನೆ ಮುಖಂಡೆ ಪವಿತ್ರಾ ಆಯುಕ್ತ ಪವನ್‌ಕುಮಾರ್ ಜೊತೆ ಚರ್ಚೆ ನಡೆಸಿ, ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದರು.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು












Click it and Unblock the Notifications