ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಜೆಡಿಎಸ್ ಪ್ರತಿಭಟನೆ

ಗಂಗಾ ಕಲ್ಯಾಣ ಯೋಜನೆಯ ಸವಲತ್ತುಗಳನ್ನು ಫಲಾನುಭವಿಗಳಿಗೆ ತಮ್ಮ ನಿವಾಸದಲ್ಲಿ ವಿತರಿಸುತ್ತಿದ್ದ ಕಾರಣಕ್ಕಾಗಿ ಪ್ರತಿಭಟನೆ

ಕೋಲಾರ, ಫೆಬ್ರವರಿ 28: ಗಂಗಾ ಕಲ್ಯಾಣ ಯೋಜನೆಯ ಸೌವಲತ್ತುಗಳನ್ನು ತಮ್ಮ ಮನೆಯಲ್ಲಿ ವಿತರಿಸುತ್ತಿದ್ದ ಹಿನ್ನೆಲೆಯಲ್ಲಿ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಕೋಲಾರ ನಗರದ ಬೈರೇಗೌಡ ನಗರದಲ್ಲಿರುವ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಶಾಸಕರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಕ್ಷೇತ್ರದ ದಲಿತ ಫಲಾನುಭವಿಗಳನ್ನು ತಮ್ಮ ಮನೆ ಬಾಗಿಲ ಮುಂದೆ ನಿಲ್ಲಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

JDS Protest against MLA Varthur Prakash in Kolar

ಶಾಸಕರ ಹಾಗೂ ಜೆಡಿಎಸ್ ಕಾಯ೯ಕತ೯ರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ, ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲವೆಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+