ಕೋಲಾರದಲ್ಲಿ ಮೈತ್ರಿ ಮರೆತ ಪಕ್ಷಗಳು: ಟಿಕೆಟ್‌ಗಾಗಿ ಜೆಡಿಎಸ್-ಬಿಜೆಪಿ ನಾಯಕರ ಪೈಪೋಟಿ

ಕೋಲಾರ ಫೆಬ್ರವರಿ 5: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿ-ಜೆಡಿಎಸ್ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಪಕ್ಷ ಸಂಘಟನೆ ಮರೆತ ಜೆಡಿಎಸ್ ಟಿಕೆಟ್‌ಗಾಗಿ ಒತ್ತಾಯಿಸುತ್ತಿರುವುದು ಅಚ್ಚರಿ ತಂದಿದೆ.

ಹೌದು ರಾಜ್ಯಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆಯ ಮಾತುಕತೆಗಳ ಗೊಂದಲ ಈವರೆಗೆ ಬಗೆಹರಿದಿಲ್ಲ. ಈ ನಡುವೆ ಕೋಲಾರ ಟಿಕೆಟ್ ಗಾಗಿ ಬಿಜೆಪಿ-ಜೆಡಿಎಸ್ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗುತ್ತಿದೆ.

Insist on JDS ticket for forgotten party organization in Kolar

ಕೋಲಾರದ ಹಾಲಿ ಸಂಸದ ಎಸ್.ಮುನಿಸ್ವಾಮಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಕ್ಷ ಸಂಘ ಟನೆ ಯೊಂದಿಗೆ ವೈಯಕ್ತಿಕವಾಗಿಯೂ ತಮ್ಮದೇ ಆದ ವರ್ಚಸ್ಸು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, 8 ಕ್ಷೇತ್ರಗಳ ಪೈಕಿ ಎಲ್ಲೂ ಬಿಜೆಪಿ ಶಾಸಕರಿಲ್ಲ ಎಂಬುದು ಹಿನ್ನಡೆಯಾಗಿದೆ.

ಜೆಡಿಎಸ್ ಅಭ್ಯರ್ಥಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ: ಮತ್ತೊಂದೆಡೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದರೂ ಟಿಕೆಟ್ ಸಿಕ್ಕರೆ ಜೆಡಿಎಸ್ ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗಿಲ್ಲ. ಇನ್ನು ಮುಳಬಾ ಗಲು ಶಾಸಕ ಸಮೃದ್ಧಿ ಮಂಜುನಾಥ್ ಹಾಗೂ ಶಿಡ್ಲಘಟ್ಟಶಾಸಕ ರವಿಕುಮಾರ್ ಹೊರತುಪಡಿಸಿ ದರೆ ಉಳಿದವರು ಸಕ್ರಿಯವಾಗಿಲ್ಲ.

ಇನ್ನು ಚುನಾವಣೆಯಲ್ಲಿ ಪರಾಜಿತಗೊಂಡಿ ರುವ ನಾಯಕರು ಕ್ಷೇತ್ರಗಳತ್ತ ಮುಖ ಮಾಡಿಲ್ಲ. ಒಂದು ಕಡೆ ಬಿಜೆಪಿ ನಾಯಕರು ರಾಜ್ಯ ಸರಕಾರ ವಿರುದ್ಧ ನಿರಂತರವಾಗಿ ಪ್ರತಿ ಭಟನೆ ಮಾಡುತ್ತಿದ್ದರೆ, ಜೆಡಿಎಸ್ ನಾಯಕರು ಮಾತ್ರ ಅಪರೂಪಕ್ಕೆ ಪತ್ರಿಕಾ ಹೇಳಿಕೆಗಳಿಗೆ ಸೀಮಿತರಾಗಿದ್ದಾರೆ.

ಪಕ್ಷ ಸಂಘಟನೆ ಮರೆತ ದಳಪತಿಗಳು!: ಕೋಲಾರ ಜಿಲ್ಲೆಯ ಮಟ್ಟಿಗೆ ಮುಳಬಾಗಲು ಹೊರತುಪಡಿಸಿದರೆ ಉಳಿದ ಯಾವುದೇ ಕ್ಷೇತ್ರ ದಲ್ಲಿ ಜೆಡಿಎಸ್ ನಾಯಕರು ಸಕ್ರಿಯವಾಗಿಲ್ಲ, ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು, ಜಂಟಿ ಸಮೀಕ್ಷೆ ನಡೆಸದೆ ಆರಣ್ಯ ಜಮೀನು ಒತ್ತುವರಿ ತೆರವು, ರೈತರಿಗೆ ಸಮರ್ಪಕವಾಗಿ ಬರ ಪರಿಹಾರ ಬಿಡುಗಡೆ, ಗ್ರಾಮೀಣ ಭಾಗಗಳಿಗೆ ಸಮರ್ಪಕವಾಗಿ ಬಸ್ ವ್ಯವಸ್ಥೆಯಿಲ್ಲದಿರುವುದು ಸೇರಿದಂತೆ ಹತ್ತಾರು ಸಮಸ್ಯೆಗಳ ವಿರುದ್ಧ ಹೋರಾಟಿ ನಡೆಸಿ ಜನರ ಗಮನ ಸೆಳೆಯುವ ಕೆಲಸ ಮಾಡಲಿಲ್ಲ.

ಮುನಿಸ್ವಾಮಿಯನ್ನು ಗೆಲ್ಲಿಸಿಕೊಡಿ: ಆ‌ರ್.ಅಶೋಕ್‌

ರಾಜ್ಯ ಸರಕಾರದ ವಿರುದ್ಧ ಕೋಲಾರದಲ್ಲಿ ಪ್ರತಿಭಟನೆ ಆರಂಭಿಸಿದಂತಹ ಬಿಜೆಪಿ ನಾಯಕರು ಮುಂದಿನ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತಹ ಎಸ್. ಮುನಿಸ್ವಾಮಿಯನ್ನು ಗೆಲ್ಲಿಸಿಕೊಂಡುವಂತೆ ಕರೆ ನೀಡಿದರು. ಖುದ್ದು ಆರ್.ಅಶೋಕ್ ಅವರು ಮುನಿಸ್ವಾಮಿಯೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದು, ಗೆಲ್ಲಿಸಿಕೊಡುವಂತೆ ತಿಳಿಸಿದ್ದರು. ಹೀಗಾಗಿ ಎರಡು ಪಕ್ಷಗಳು ಟಿಕೆಟ್‌ ಗಾಗಿ ಸೆಣೆಸುತ್ತಿವೆ.

ಸಮೃದ್ಧಿ ಮಂಜುನಾಥ್ ಅಭ್ಯರ್ಥಿ!?

ಜೆಡಿಎಸ್‌ ಪಕ್ಷವು ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡುವಂತೆ ಬಿಜೆಪಿಯ ಮೇಲೆ ಒತ್ತಡ ಹೇರಿದ್ದು, ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್ ಟಿಕೆಟ್ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಈ ನಡುವೆ ದೇವನಹಳ್ಳಿ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಅಖಂಡ ಶ್ರೀನಿವಾಸ್, ಬಂಗಾರಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಮಲ್ಲೇಶ್ ಬಾಬು ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ..

ಪತ್ರಿಕಾ ಹೇಳಿಕೆಗೆ ಗೋವಿಂದರಾಜು ಸೀಮಿತ:-

ಶ್ರೀನಿವಾಸಪುರ ಶಾಸಕರೂ ಜೆಡಿಎಸ್ ಹಿರಿಯ ಮುಖಂಡರಾದ ವೆಂಕಟಶಿವಾರೆಡ್ಡಿ ಸಕ್ರಿಯರಾಗಿ ಜಿಲ್ಲೆಯಲ್ಲಿ ಓಡಾಡುತ್ತಿಲ್ಲ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷ ಸಂಘಟನೆಗಾಗಿಯೇ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಕುಕ್ಕುಟೋದ್ಯಮಿ ಇಂಚರ ಗೋವಿಂದರಾಜು ಪತ್ರಿಕಾ ಹೇಳಿಕೆಗಳಿಗೆ ಸೀಮಿತರಾಗಿದ್ದಾರೆ.

ಜಿಲ್ಲೆಯಲ್ಲಿ ಪಕ್ಷದ ಮುಂದಾಳತ್ವ ವಹಿಸಿಕೊಂಡು ಸಂಘಟನೆ ಮಾಡಬೇಕಾದಂತಹ ಗೋವಿಂದರಾಜ ಅವರು, ಜೆಡಿಎಸ್ ಪಕ್ಷ ಸಂಘಟನೆಗೆ ನೀಡಿದಂತಹ ಕೊಡುಗೆ ಅಷ್ಟಕಷ್ಟೇ. ಆಗಾಗಾ ಪತ್ರಿಕಾ ಹೇಳಿಕೆ ನೀಡುವುದು ಬಿಟ್ಟರೆ ಇತರೆ ತಾಲೂಕುಗಳಿಗೆ ಹೋಗಿ ಪಕ್ಷಕಟ್ಟುವಂತಹ ಕೆಲಸ ಮಾಡಿಲ್ಲ ಎಂಬ ಕೊರಗು ಜೆಡಿಎಸ್ ಮುಖಂಡರಲ್ಲಿದೆ.

ಕೋಲಾರದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣ ವಿದ್ದು, ಬಿಜೆಪಿಯ ಅಭ್ಯರ್ಥಿಗೆ ಟಿಕೆಟ್ ಸಿಗಲಿದೆ. ವಿಧಾನಸಭೆ ಹಾಗೂ ವಾತಾವರಣ ಬೇರೆ ಬೇರೆ ಇರುತ್ತದೆ. ಹಿಂದಿನ ಚುನಾವಣೆಗಳನ್ನು ಗಮನಿಸಿದಾಗ ಜನರ ಒಲವು ಬಿಜೆಪಿ ಪರವಾಗಿರುವುದು ಕಂಡುಬಂದಿದ್ದು, ಮೋದಿಯವರ ಯೋಜನೆಗಳು ಬಿಜೆಪಿಗೆ ಹೆಚ್ಚಿನ ಶಕ್ತಿ ನೀಡಲಿವೆ. -ಡಾ.ವೇಣುಗೋಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ.

ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದ್ದು, ಟಿಕೆಟ್ ಜೆಡಿಎಸ್ ಪಕ್ಷಕ್ಕೆ ಸಿಗಲಿದೆ. ಅದರಂತೆ ಈಗಾಗಲೇ ಜಿಲ್ಲೆಯ ನಾಯಕರು ತಮ್ಮ ಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದು, ಟಿಕೆಟ್ ಜೆಡಿಎಸ್ ಗೆ ಸಿಗಲಿದೆ. -ಜಿ.ಕೆ.ವೆಂಕಟಶಿವಾರೆಡ್ಡಿ, ಜೆಡಿಎಸ್‌ ಜಿಲ್ಲಾಧ್ಯಕ್ಷರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+